ಸೈಕಲ್ ಯಾತ್ರೆಗಳು ಯುವಕರಿಗೆ ಮಾದರಿ: ಹೇಮಲತಾ ನಾಯಕ

ಸೈಕಲ್ ಯಾತ್ರೆಗಳು ಯುವಕರಿಗೆ ಮಾದರಿ: ಹೇಮಲತಾ ನಾಯಕ Cycle tours are a role model for youth: Hemalatha Nayak

ಕೊಪ್ಪಳ 25 : ವಿವಿಧ ಮಾಹಾತ್ಮರ ಜನ್ಮ ಸ್ಥಳಗಳಿಗೆ ಸೈಕಲ್ ಯಾತ್ರೆಯ ಮೂಲಕ ಸ್ವಚ್ಛ ಭಾರತ-ಸ್ವಸ್ಥ ಭಾರತ ಹಾಗೂ ಪರಿಸರ ಉಳಿಸಿ ಜೀವಸಂಕಲ ಉಳಿಸಿ ಎಂಬ ಘೋಷವಾಕ್ಯದಡಿಯಲ್ಲಿ ದೇಶದ ಪರ್ಯಾಟನೆ ಮಾಡುವ  ಮೂಲಕ ಜಾಗೃತಿ ಮೂಡಿಸುವ ಯುವ ಸಾಹಸಿಗಳಾದ ಶಿವರಾಯಪ್ಪ ಹಾಗೂ ನಳೀನ ಅವರ ಈ ಮಹತ್ವದಾದ ಕಾರ್ಯ ಸಮಾಜದ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಇಲಾಖೆಯ ನೌಕರನಾದ ಶಿವರಾಯಪ್ಪ ಹಾಗೂ ರಂಗ ಕಲಾವಿದ ನವೀನ ಅವರು ಕೊಪ್ಪಳದಿಂದ ಭಗತ್ ಸಿಂಗ್ ಸ್ಥಳವಾದ ಪಂಜಾಬಿನ ಬಾಗ ಗ್ರಾಮಕ್ಕೆ ಕೈಗೊಂಡ ಸೈಕಲ್ ಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಇಂದಿನ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತರಗಳ ನಡುವೆ ಈ ಯುವಕರು ಸೈಕಲ್ ಮೂಲಕ ಮಹಾತ್ಮರ ಜನ್ಮ ಸ್ಥಳಕ್ಕೆ ತೆರಳುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.ಸುಮಾರು 2500 ಕೀ.ಮೀ ದೂರ ಇರುವ ಭಗತ್ ಸಿಂಗ್ ಅವರ ಜನ್ಮ ಸ್ಥಳವಾದ ಬಾಗಾ ಗ್ರಾಮಕ್ಕೆ ಹೋಗುತ್ತಿರುವ ಯುವಕರ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. 

  ಸರಕಾರಿ ನೌಕರರ ಸಂಘದ ರಾಜ್ಯದ ಹಿರಿಯ ಉಪಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ ಮಾತನಾಡಿ, ಸರಕಾರಿ ನೌಕರರಾಗಿದ್ದು ಕೂಡಾ ತಮ್ಮ ವೃತ್ತಿಯ ಜೊತೆ ಜೊತೆಯಲ್ಲಿ ಇಂತಹ ಸಾಹಸ ಹಾಗೂ ಸ್ಫೂರ್ತಿದಾಯಕ ಸಮಾಜ ಮುಖಿ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮಯ ಸಂಗತಿಯಾಗಿದೆ. ಸದರಿ ಯುವಕರು ಈಗಾಗಲೇ ಕಟಕ್ ಹಾಗೂ ಪೋರಬಂದರಿನ ಸೈಕಲ್ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.ಸದರಿ ಯುವಕರಿಗೆ ಮುಂದಿನ ದಿನಗಳಲ್ಲಿ ಇಲಾಖೆಯ ವತಿಯಿಂದ ಬೆಂಬಲ ನೀಡುವುದಾಗಿ ಹೇಳಿದರು. ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ ಹಾಗೂ ಗಾಂದೀ ಬಳಗದ ಸದಸ್ಯರಾದ ಆನಂದತಿರ್ಥ ಪ್ಯಾಟಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ,ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ, ನಿರ್ದೇಶಕರಾದ ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ, ಸಾಹಿತಿಗಳಾದ ಶರಣಪ್ಪ ಬಿಳಿಎಲಿ,ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹನುಮಂತಪ್ಪ ಕುರಿ,ಮಲ್ಲಪ್ಪ ಗುಡದನ್ನವರ,ಶಿಕ್ಷಕರ ನಿರ್ದೇಶಕರಾದ ಗವಿಸಿದ್ದಪ್ಪ ಕೇರಿ, ಗುರುಸ್ವಾಮಿ ಆರ್,ಮುಸ್ತಾಪ ಕುದರಿಮೋತಿ, ಕೋಳೂರು ಸಿ.ಆರ್‌.ಪಿ.ವಿರೇಶ ಮೇಟಿ, ಆರೋಗ್ಯ ಇಲಾಖೆಯ ನೌಕರ ಮಂಜುನಾಥಗೌಡ, ನಾಗರಾಜ ಮುಂತಾದವರು ಹಾಜರಿದ್ದರು.