ಕೀಳರಿಮೆ ಕತ್ತರಿಸಿ, ಕ್ರೀಡಾ ಶಕ್ತಿ ಪ್ರದರ್ಶಿಸಿ!ಸವಿತಾ ಸಮಾಜದ ಯುವಜನತೆಗೆ ಕೃಷ್ಣಾ ಹಡಪದ ಕ್ರಾಂತಿಕಾರಿ ಕರೆ
Cut down on inferiority complex and showcase your sporting prowess! Krishna Hadapada's revolutionar
ಗದಗ 02 : "ಸವಿತಾ ಸಮಾಜದ ಯುವಕರು ಇನ್ನು ಮುಂದೆ ಕೇವಲ ಇತಿಹಾಸವನ್ನು ಓದಬಾರದು, ಬದಲಿಗೆ ಮೈದಾನ ಮತ್ತು ಮೈದಾನದ ಹೊರಗೆ ಹೊಸ ಇತಿಹಾಸವನ್ನು ಸೃಷ್ಟಿಸಬೇಕು. ನಮ್ಮದು ಕೇವಲ ಸೇವಾ ಪರಂಪರೆಯಲ್ಲ, ಇದು ಸೂರ್ಯನ ತೇಜಸ್ಸಿನಂತಿರುವ ಸವಿತಾ ಮಹರ್ಷಿಗಳ ’ಸಾರ್ವಭೌಮ’ ಪರಂಪರೆ," ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಗುಡುಗಿದರು.
ನಗರದ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಚಂಡ ಯುವ ನಾಯಕ, ಕ್ರೀಡಾ ಕಿರಣ ಸುನಿಲ ಎನ್. ರಾಯಚೂರ ಅವರ 42ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಕ್ರಾಂತಿಕಾರಿ ಕರೆ ನೀಡಿ ಮಾತನಾಡಿ ಸವಿತಾ ಸಮಾಜದ ಯುವಕರೆಂದರೆ ಕೇವಲ ಶಾಂತ ಸ್ವಭಾವದವರಲ್ಲ; ಅನ್ಯಾಯದ ವಿರುದ್ಧ ಸಿಡಿದೇಳುವ ಕೆಚ್ಚೆದೆಯ ಸೈನಿಕರು. ಸುನಿಲ ರಾಯಚೂರ ಅವರು ಕ್ರೀಡಾ ಮೈದಾನದಲ್ಲಿ ತೋರುತ್ತಿರುವ ಛಲವು ನಮ್ಮ ಇಡೀ ಸಮಾಜದ ಯುವಕರಿಗೆ ಮಾದರಿಯಾಗಲಿ.
ಮೈದಾನದಲ್ಲಿ ನಾವು ತೋರುವ ಶೌರ್ಯವು ನಮಗೆ ಸಮಾಜದಲ್ಲಿ ಗೌರವ ತಂದುಕೊಡುತ್ತದೆ ಎಂದರಲ್ಲದೆ ತಲೆ ತಲಾಂತರಗಳಿಂದ ನಮ್ಮ ಮೇಲೆ ಹೇರಲಾದ ಮಾನಸಿಕ ಗುಲಾಮಗಿರಿ ಮತ್ತು ಕೀಳರಿಮೆಯನ್ನು ಮೊದಲು ಕತ್ತರಿಸಿ ಎಸೆಯಿರಿ. ನಾವು ಯಾರಿಂದಲೂ ಕಡಿಮೆ ಇಲ್ಲ. ನಮ್ಮ ಕೌಶಲವಿಲ್ಲದೆ ಜಗತ್ತು ಸುಂದರವಾಗಿ ಕಾಣಲು ಅಸಾಧ್ಯ. ಆ ಆತ್ಮವಿಶ್ವಾಸ ನಿಮ್ಮದಾಗಲಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಹೇಳಿದರು.
ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಎನ್ ಕೋಟೆಕಲ್ಲ ಹಾಗೂ ಖಜಾಂಚಿ ಅರುಣ ರಾಂಪುರ ಅವರು ಮಾತನಾಡಿ ಇಂದು ಜಗತ್ತನ್ನು ಗೆಲ್ಲಲು ಯುದ್ಧಗಳ ಅಗತ್ಯವಿಲ್ಲ, ಕ್ರೀಡಾ ಸಾಧನೆ ಸಾಕು. ಒಲಿಂಪಿಕ್ಸ್ನಿಂದ ಗಲ್ಲಿಯ ಕ್ರೀಡಾಕೂಟದವರೆಗೆ ನಮ್ಮ ಸಮಾಜದ ಧ್ವಜ ಹಾರಬೇಕು. ಸುನಿಲ ಅವರಂತೆ ಪ್ರತಿಯೊಬ್ಬ ಯುವಕನೂ ಕ್ರೀಡೆಯನ್ನು ತನ್ನ ಉಸಿರಾಗಿಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯರಾದ ಎಲ್ಲಪ್ಪ ರಾಯಚೂರ ಮತ್ತು ನರಸಿಂಹ ಗುರುಜಾಲಕರ ಅವರು ಮಾತನಾಡಿ ನಾವು ಚದುರಿ ಹೋದರೆ ಶೋಷಿತರಾಗಿಯೇ ಉಳಿಯುತ್ತೇವೆ. ಒಂದಾದರೆ ಮಾತ್ರ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸಬಹುದು. ಸವಿತಾ ಸಮಾಜವು ಕೇವಲ ವೋಟ್ ಬ್ಯಾಂಕ್ ಆಗಬಾರದು, ಅದು ನಿರ್ಣಾಯಕ ಶಕ್ತಿಯಾಗಬೇಕೆಂದು ಹೇಳಿದರು ಕೆಶಾಲಂಕಾರ ಸೇವಾ ಪರಿಷತ್ ಅಧ್ಯಕ್ಷರಾದ ಎಲ್ಲಪ್ಪ ರಾಂಪುರ ಪ್ರಸ್ತಾವಿಕವಾಗಿ ಮಾತನಾಡಿಧರು.
ಸವಿತಾ ಮಹರ್ಷಿಗಳ ಪಾದದಡಿ ನಡೆದ ಈ ಸಂಭ್ರಮದಲ್ಲಿ, ಹುಟ್ಟುಹಬ್ಬದ ಹರಿಕಾರ ಸುನಿಲ ರಾಯಚೂರ ಅವರನ್ನು ಸಮಾಜದ ಪರವಾಗಿ ಕ್ರಾಂತಿಕಾರಿಯಾಗಿ ಸನ್ಮಾನಿಸಲಾಯಿತು. ಸುನಿಲ ಅವರು ಕೇಕ್ ಕತ್ತರಿಸುವ ಮೂಲಕ ಯುವ ನಾಯಕತ್ವದ ಸಂಕಲ್ಪವನ್ನು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಹನುಮಂತಪ್ಪ ರಾಂಪೂರ. ಪಾಂಡುರಂಗ ಕಾಳೆ. ಯುವ ನಾಯಕರುಗಳಾದ ಕೃಷ್ಣಾ ಬೂದೂರ. ವಿಜಯ ಬುದೂರ. ಸಾಗರ ಹಡಪದ. ಮಂಜುನಾಥ ರಾಂಪುರ. ರಾಹೂಲ ನಾರಾಯಣಪೇಟ. ತುಕಾರಾಮ ವಡ್ಡೆಪಲ್ಲಿ. ಸವಿತಾ ಸಮಾಜದ ಪ್ರಮುಖರು, ಯುವ ಮುಖಂಡರು ಉಪಸ್ಥಿತರಿದ್ದು, ’ಸವಿತಾ ಸಮಾಜಕ್ಕೆ ಜಯವಾಗಲಿ’ ಎಂಬ ಘೋಷಣೆಗಳೊಂದಿಗೆ ಆವರಣವನ್ನು ಮೊಳಗಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 