ಚಿಟ್ಸ್‌ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂ ವಂಚಿಸಿ ಹೈಡ್ರಾಮಾ ಮಾಡಿದ ಆರೋಪಿ ಈಶ್ವರನನ್ನು ಪೊಲೀಸರಿಗೊಪ್ಪಿಸಿದ ಗ್ರಾಹಕರು

ಚಿಟ್ಸ್‌ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂ ವಂಚಿಸಿ ಹೈಡ್ರಾಮಾ ಮಾಡಿದ ಆರೋಪಿ ಈಶ್ವರನನ್ನು ಪೊಲೀಸರಿಗೊಪ್ಪಿಸಿದ ಗ್ರಾಹಕರು Customers report Ishwar, the accused in the scam of cheating crores of rupees in the name of chit f

                ರಾಣೆಬೆನ್ನೂರ 11 : ಸ್ಥಳೀಯ ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ಫಂಡ್ನಲ್ಲಿ  ಹೂಡಿಕೆ ಮಾಡಿರುವ ನೂರಾರು ಗ್ರಾಹಕರಿಗೆ   ಕೋಟ್ಯಾಂತರ ರೂ ವಂಚನೆಯ ಆರೋಪದಿಂದಾಗಿ ತಲೆ ಮರಿಸಿಕೊಂಡಿದ್ದ ಆರೋಪ ಎದುರಿಸುತ್ತಿದ್ದ ನಗರದ ಚಿಟ್ಸ್ಫಂಡ್ ಮಾಲೀಕ ಈಶ್ವರ ಚಿನ್ನಿಕಟ್ಟಿಯನ್ನು ಗ್ರಾಹಕರೇ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಬುಧವಾರ ನಗರದಲ್ಲಿ ನಡೆದಿದೆ.ಆತನನ್ನು ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ  ಶಹರ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಹಕರು ಭಾರಿ ಪ್ರಮಾಣದಲ್ಲಿ ಜಮಾಯಿಸಿದ್ದರಿಂದ ಅವರುಗಳನ್ನು ನಿಯಂತ್ರಿಸಲಾಗುತ್ತದೆ ಪೊಲೀಸರು ಹರಸಾಹಸ ಪಡಬೇಕಾಯಿತು. ಈಶ್ವರ ಚಿನ್ನಿಕಟ್ಟಿ ಮೇಲೆ ‘ಗ್ರಾಹಕರಿಗೆ ಹೂಡಿಕೆ ಮಾಡಿದ ಹಣ ವಾಪಸ್ ನೀಡುವಲ್ಲಿ ವಂಚನೆ ಮಾಡಿದ್ದಾನೆ’ ಎಂಬ ಆರೋಪವಿದ್ದ ಕಾರಣ ಈಗಾಗಲೇ ಮೂರ್ನಾಲ್ಕು ಬಾರಿ ಪೊಲೀಸ್ ಠಾಣೆಗೆ ಆಗಮಿಸಿ ಹಣ ಹಿಂದುರಿಗಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದ್ದರು.

               ಆದರೆ ಏನೂ ಪ್ರಯೋಜನವಾಗದ ಕಾರಣ ಇದರಿಂದ  ಕೆರಳಿದ ಗ್ರಾಹಕರು ಕಳೆದ ತಿಂಗಳು  ಆತನ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ಹಣ ನೀಡುವಂತೆ ಆಗ್ರಹಿಸಲು ಮುಂದಾದಾಗ ಪೊಲೀಸರು ಮಧ್ಯಸ್ಥಿಕೆ ವಹಿಸಿ ಕಚೇರಿಗೆ ಬೀಗ ಹಾಕಿದ್ದರು. ತಲೆಮರಿಸಿಕೊಂಡು ಹೋಗಿದ್ದ ಈಶ್ವರ ಚಿನ್ನಿಕಟ್ಟಿ ಬುಧವಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿದ್ದನು.  ಈ ವಿಷಯ ತಿಳಿದ ನೂರಾರು ಜನ ಗ್ರಾಹಕರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿತೊಡಗಿದರು. ಹೆಚ್ಚಿನ ಪ್ರಮಾಣದಲ್ಲಿ  ಗ್ರಾಹಕರು ಜನ ಸೇರಿದ್ದರಿಂದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಮುಂದಾಗುವ ಅನಾಹುತ ತಡೆದು ಬಂದೋಬಸ್ತ್‌ ಒದಗಿಸಿದರು.

              ಈ ಸಂದರ್ಭದಲ್ಲಿ ಈಶ್ವರನನ್ನು ಪೊಲೀಸ್ ವಾಹನ ಹತ್ತಿಸುವ ಸಂದರ್ಭದಲ್ಲಿ ಗ್ರಾಹಕರ ಆಕ್ರೋಷಗೊಂಡು  ಈಶ್ವರನ ಮೇಲೆ ಹಲ್ಲೆ ಮಾಡಲು ಕೆಲ ಗ್ರಾಹಕರು ಮುಂದಾದಾಗ ಕೊನೆಗೆ ಗ್ರಾಹಕರ ಒತ್ತಾಸೆ ಮೇರೆಗೆ ಆತನನ್ನು ಪೊಲೀಸರ ಬೆಂಗಾವಲಿನಲ್ಲಿ ಕಾಲ್ನಡಿಗೆಯ ಮೆರವಣಿಗೆ  ಮೂಲಕ ಶಹರ ಠಾಣೆಗೆ ಕರೆ ತರಲಾಯಿತು. ಅಂತಿಮವಾಗಿ ನೂರಾರು ಗ್ರಾಹಕರು ತಾವು ಹೂಡಿಕೆ ಮಾಡಿದ ಹಣದ ಕುರಿತು 200 ಕ್ಕೂ ಅಧಿಕ ಗ್ರಾಹಕರು ವೈಯಕ್ತಿಕವಾಗಿ ಪೋಲಿಸ ಅಧಿಕಾರಿಗಳಿಗೆ ಪತ್ರದ ಮೂಲಕ ದೂರು ನೀಡಿದರು.   ತಡರಾತ್ರಿವರೆಗೂ  ಗ್ರಾಹಕರು ಠಾಣೆ ಎದುರು ಜಮಾಯಿಸಿದ್ದು ಕಂಡು ಬಂದಿತು. ಎಫ್ ಐ ಆರ್  ಆದ ಮೇಲೆ  ಈಶ್ವರನನ್ನು ನ್ಯಾಯಾಲಯಕ್ಕೆ  ಹಾಜರುಪಡಿಸಲು ಪೊಲೀಸರು ಮುಂದಾಗಿದ್ದಾರೆಂದು ತಿಳಿದು ಬಂದಿದೆ.