70ನೇ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನ

70ನೇ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನ Cultural program launched as part of the 70th Rajyotsava


ಧಾರವಾಡ 06 : ಸಂಗೀತವು ಮನುಷ್ಯನ ಬೇಸರ ಹಾಗೂ ಜಡತ್ವ ನೀಗಿಸಿ ಅವನನ್ನು ಚೈತನ್ಯ ಶಾಲಿಯಾಗಿ ಮಾಡುವ ಪ್ರಭಲ ಮಾಧ್ಯಮ. ನಮ್ಮ ವೃತ್ತಿ ಯಾವುದಾದರೂ ಇರಲಿ ಪ್ರವೃತ್ತಿಯಿಂದ ಇಂತಹ ಕಲೆಗಳನು ನಮಗೆ ಬೇಕು ಎಂದು ಇಲ್ಲಿಯ ಜೆ.ಎಸ್‌.ಎಸ್‌. ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಮಹಾವೀರಉಪಾಧ್ಯೆ ಹೇಳಿದರು. ದಿ: 05 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು 136 ವರ್ಷಗಳಿಂದ ಶತಮಾನೋತ್ತರ ಇತಿಹಾಸವಿರುವ  ಸಂಘವಾಗಿದೆ. ಜನತಾ ಶಿಕ್ಷಣ ಸಮಿತಿಯ ಮಹನೀಯರಾದಡಾ. ಅಜಿತ ಪ್ರಸಾದರಂತಹ ಶಿಕ್ಷಣ ತಜ್ಞರು ಕ.ವಿ.ವ.ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಬದ್ಧತೆಯಿಂದಕಾರ್ಯನಿರ್ವಹಿಸಿದ್ದಾರೆ.ಸಂಘದಲ್ಲಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಹೆಸರಿನಿಂದಲೂಒಂದುದತ್ತಿಇರಿಸಲಾಗಿದೆ. ಕ.ವಿ.ವ.ಸಂಘದಜೊತೆಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆ ಮೊದಲಿನಿಂದಲೂ ಅವಿನಾಭಾವ ಸಂಬಂಧ ಹೊಂದಿ,  ಸಹವರ್ತಿಯಾಗಿಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಘವು ಯುವಕರಿಗಾಗಿ ಆಯೋಜಿಸಿರುವ ಧರೆಗೆದೊಡ್ಡವರುಕಾರ್ಯಕ್ರಮ ಇಂದಿನ ಸ್ಥಿತಿಯಲ್ಲಿ ಯುವಕರಿಗೆಅತ್ಯುಪಯುಕ್ತವಾದದ್ದುಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದಉಪಾಧ್ಯಕ್ಷಡಾ.ಸಂಜೀವಕುಲಕರ್ಣಿ ಮಾತನಾಡಿ, ಜಗತ್ತಿನಲ್ಲಾಡುವ ಭಾಷೆಗಳಲ್ಲಿ ಕನ್ನಡದ ಸ್ಥಾನ 20 ನೇದ್ದು.ಭಾಷಾ ಶ್ರೀಮಂತಿಕೆಯಿಂದ 7 ನೇ ಸ್ಥಾನ ಕನ್ನಡ ಭಾಷೆಯದಾಗಿದೆ.ಕನ್ನಡ ಭಾಷೆ ಮೇಲೆ ಏನೇ ದಬ್ಬಾಳಿಕೆಯಾದರೂ ಅದುತನ್ನ ಭಾಷಾ ಶ್ರೀಮಂತಿಕೆಯನ್ನು ಉಳಿಸಿಕೊಂಡು ಬಂದಿದೆ.ಭಾಷೆ ಉಳಿದರೆ ಮಾತ್ರ ನಾಡಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ.ಆ ಕಾರಣದಿಂದರಾ. ಹ. ದೇಶಪಾಂಡೆಯವರು 136 ವರ್ಷಗಳ ಹಿಂದೆ ಕ.ವಿ.ವ.ಸಂಘವನ್ನು ಸ್ಥಾಪಿಸಿದ್ದನ್ನು ಸ್ಮರಿಸಬೇಕೆಂದು ಹೇಳಿದರು. 

ವೇದಿಕೆ ಮೇಲೆ ಮಂಜುನಾಥಕೊಣ್ಣೂರ, ಸಂಘದ ಸಹಕಾರ್ಯದರ್ಶಿ ಶಂಕರ ಕುಂಬಿ ಇದ್ದರು.ಪ್ರಾರಂಭದಲ್ಲಿ ಸಂಗೀತಕಾರ್ಯಕ್ರಮಜರುಗಿತು.ಕೊನೆಯಲ್ಲಿ ಹುಬ್ಬಳ್ಳಿಯ ನಾಟ್ಯ ಭೈರವಿ ಸಾಂಸ್ಕೃತಿಕ ಸಂಸ್ಥೆಯವರು ಸೊಗಸಾಗಿ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿ ಜನಮನ ಸೊರೆಗೊಂಡರು. ಸಂಘದಕಾರ‌್ಯಕಾರಿ ಸಮಿತಿ ಸದಸ್ಯಡಾ.ಜಿನದತ್ತ ಹಡಗಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೋಶಾಧ್ಯಕ್ಷ ಸತೀಶತುರಮರಿ ನಿರೂಪಿಸಿ, ವಂದಿಸಿದರು.