ಕಲಾವಿದರ ಯೋಜನೆಗಳು ಸಮರ​‍್ಕವಾಗಿ ಅನುಷ್ಠಾನಕ್ಕೆ ಸಾಂಸ್ಕೃತಿಕ ಸಂಘಟನೆಗಳು ಸಿಎಂಗೆ ಮನವಿ

ಕಲಾವಿದರ ಯೋಜನೆಗಳು ಸಮರ​‍್ಕವಾಗಿ ಅನುಷ್ಠಾನಕ್ಕೆ ಸಾಂಸ್ಕೃತಿಕ ಸಂಘಟನೆಗಳು ಸಿಎಂಗೆ ಮನವಿ Cultural organizations appeal to CM for effective implementation of artists' projects

ಕಲಾವಿದರ ಯೋಜನೆಗಳು ಸಮರ​‍್ಕವಾಗಿ ಅನುಷ್ಠಾನಕ್ಕೆ ಸಾಂಸ್ಕೃತಿಕ ಸಂಘಟನೆಗಳು ಸಿಎಂಗೆ ಮನವಿ 

ಗದಗ 05: ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ ಮುಂತಾದ ಪರಂಪರೆಗಳನ್ನು ಉಳಿಸಿ, ಬೆಳೆಸುವುದರೊಂದಿಗೆ, ವಿವಿಧ ಕಲೆಗಳ ಮೂಲಕ ಸಮಾಜಕ್ಕೆ ಮನರಂಜನೆಯೊಂದಿಗೆ ಅವರಿಗೆ ಮೌಲಿಕ ಹಾಗೂ ಆದರ್ಶದ ವಿಚಾರಗಳನ್ನು ತಿಳಿಸುತ್ತ, ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಿಸುವದುರೊಂದಿಗೆ ಸಾತ್ವಿಕ ಸಮಾಜದಡೆಗೆ ಕೊಂಡುಯ್ಯೊವ ನಿಟ್ಟಿನಲಿ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘಟನೆಗಳಿಗಳು ಕೆಲಸ ಮಾಡುತ್ತಿವೆ. ಇಂಥಹ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಾರಿಗೊಳಿಸಿದ ಯೋಜನೆಗಳು ಸಮರ​‍್ಕವಾಗಿ ಅನುಷ್ಠಾನವಾಗಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. 

ಗದಗ ಜಿಲ್ಲೆಯ ಸಾಂಸ್ಕೃತಿಕ ಸಂಘಟನೆಗಳು ಹಾಗೂ ಜಿಲ್ಲೆಯ ಸಮಸ್ತ ಕಲಾವಿದರ ವತಿಯಿಂದ ಬುಧವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳ ಸಮರ​‍್ಕ ಅನುಷ್ಠಾನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌. ತಂಗಡಗಿ ಅವರಿಗೆ ಮನವಿ ಅರ​‍್ಿಸಿ ಮಾತನಾಡಿದರು. 

ಹವ್ಯಾಸಿ ರಂಗಕರ್ಮಿ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ ಮೌನೇಶ ಚಿ. ಬಡಿಗೇರ(ನರೇಗಲ್ಲ) ಅವರು ಮಾತನಾಡಿ, ಜೀವನಪೂರ್ತಿ ಕಲಾ ಸೇವ ಗೈದ ಕಲಾವಿದರಿಗೆ ಸಧ್ಯ ನೀಡುತ್ತಿರುವ ಮಾಸಶನವನ್ನು 5 ಸಾವಿರ ರೂಗಳಿಗೆ ಹೆಚ್ಚಿಸಬೇಕು. ಅರ್ಜಿ ಹಾಕಿದ ನಂತರ ಸಂದರ್ಶನಕ್ಕೆ 2ರಿಂದ 3 ವರ್ಷ ವಿಳಂಬ, ಸಂದರ್ಶನದ ನಂತರ ಮಂಜೂರಿಗೆ 2 ರಿಂದ 3 ವರ್ಷ ಈರಿತಿ ವಿಳಂಬ ತಪ್ಪಿಸಿ ತ್ವರಿತಗತಿಯಲ್ಲಿ ಮಂಜೂರಿ ಮಾಡಬೇಕು. ಬಾಕಿ ಇರುವ ಎಲ್ಲ ಕಲಾವಿದರ ಸಂಭಾವನೆ ಕೂಡಲೇ ಬಿಡುಗಡೆಗೊಳಿಸಲು ಆದೇಶಿಸಬೇಕು. ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ, ಮಹಿಳಾ ಸೌರಭ, ಗಿರಿಜನ ಉತ್ಸವ, ಜನಪರ ಉತ್ಸವ, ಜಿಲ್ಲಾ ಜಾನಪದ ಜಾತ್ರೆ, ಜಿಲ್ಲಾಜನಪದ ಸಂಭ್ರಮ ಈ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಮತ್ತು ಕೆಲವು ನಿಂತು ಹೋಗಿವೆ. ಕಾರಣಎಲ್ಲ ಕಾರ್ಯಕ್ರಮಗಳು ಪುನಃ  ಜಾರಿಯಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಅಕಾಡೆಮಿಗಳ ಮೂಲಕ ಹಾಗೂ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಮೂಲಕ ಮತ್ತುಕರ್ನಾಟಕ ಸರ್ಕಾರದಿಂದ ನೀಡುತ್ತಿರುವ ವಿವಿಧ ಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಸುಮಾರು ವರ್ಷಗಳ ಹಿಂದೆ ಜಿಲ್ಲೆಯನ್ನು ತೊರೆದು ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಾಧಕರನ್ನು ಮೂಲ ಜಿಲ್ಲೆ ಕೋಟಾದಲ್ಲಿ ಆಯ್ಕೆ ಮಾಡುವುದರಿಂದ ಆಯಾ ಜಿಲ್ಲೆಯಲ್ಲಿ ನೆಲೆಸಿ ಸಾಧನೆ ಮಾಡಿದ ಕಲಾವಿದರಿಗೆ ಅನ್ಯಾಯವಾಗುತ್ತಿದೆ. ಕಾರಣ ಜಿಲ್ಲಾವಾರು ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಅದೇ ಜಿಲ್ಲೆಯಲ್ಲಿ ನೆಲೆಸಿ ಸಾಧನೆ ಮಾಡಿದ ಕಲಾವಿದರಿಗೆ ಪ್ರಶಸ್ತಿಗಳಿಗೆ ಆಯ್ಕೆ ಮಾಡಬೇಕು. ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿನ ಚೀಟಿಗಳನ್ನು ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಕೆಯಿಂದ ನಡೆಸುವ ಯಾವುದೇ ಕಾರ್ಯಕ್ರಮಗಳ ಪೂರ್ವಭಾವಿ ಸಭೆಗೆ ಅಕಾಡೆಮಿಗಳ ಸದಸ್ಯರು ಹಾಗೂ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಸಂಘಟನಾ ಮುಖ್ಯಸ್ಥರು, ಹಿರಿಯ ಕಲಾವಿದರು ಮತ್ತು ವಿದ್ವಾಂಸರನ್ನು ಆಹ್ವಾನಿಸಿ ವಿಶ್ವಾಸಕ್ಕೆ ತಗೆದುಕೊಂಡು, ಅವರ ಗಮನಕ್ಕೆ ತಂದು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಹಾಯಕ ನಿರ್ದೇಶಕರಿಗೆ ವಿಷೇಶ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಕಲಾವಿದರಾದ ವಿರುಪಾಕ್ಷ ಪ್ಪಕ್ಷತ್ರಿಯ, ಐ. ಕೆ.ಕಮ್ಮಾರ, ಈರಣ್ಣ ಅಂಗಡಿ, ಸೋಮು ಚಿಕ್ಕಮಠ(ನಟರಂಗ), ಶಿವು ಡಿ. ಭಜೆಂತ್ರಿ, ಬಸವರಾಜ ಈರಣ್ಣವರ, ಸುರಜ್ ಮಯೇಕರ್, ದ್ಯಾಮಣ್ಣ ಬಡಿಗೇರ, ಸುಭಾಷ ಮಳಗಿ, ಅಶೋಕ ಸುತಾರ, ರಾಜು ಪೇಂಟರ್, ಆರ್‌. ಆಯ್‌. ಅಗಸರ, ರವಿ   ರಂಗಪ್ಪ  ದ್ಯಾವಣಸಿ, ಪ್ರಕಾಶ ಕ. ಬಂದೂನವರ, ಯಲ್ಲಪ್ಪ ಚಂದಣ್ಣವರ, ಪೂಜಾ ಬೇವೂರ, ಲಕ್ಷ್ಮೀ ಮಡಿವಾಳರ,ಜಿ. ಸಾವಿತ್ರಿ, ಡಾ. ಗೋವಿಂದಪ್ಪ ವೇಶಗಾರ, ಆನಂದಪ್ಪಜಾಲಿಹಾಳ, ಮುತ್ತು ಕಲ್ಲಪ್ಪಕುರಿ, ಖಾಜೇಸಾಬ ಬೂದಿಹಹಾಳ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ಸಂಘಟನೆಗಳ ಮುಖ್ಯಸ್ಥರು ಹಾಗೂ ಕಲಾವಿದರು ಪಾಲ್ಗೊಂಡಿದ್ದರು.