ಹಂಪಿಯಲ್ಲಿ ಯಶಸ್ವಿಯಾಗಿ ಜರುಗಿದ ಸಾಂಸ್ಕೃತಿಕೋತ್ಸವ

ಹಂಪಿಯಲ್ಲಿ ಯಶಸ್ವಿಯಾಗಿ ಜರುಗಿದ ಸಾಂಸ್ಕೃತಿಕೋತ್ಸವ Cultural festival held successfully in Hampi

ಹಂಪಿ 11: ಶ್ರೀ ಮರಿದೇವ ಸಂಗೀತಾ ಸಾಂಸ್ಕೃತಿಕ ಕಲಾವೃಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಕಡ್ಡಿರಾಂಪುರದ ಶ್ರೀ ಮರಿಸ್ವಾಮಿ ತಾತನವರ ಜಾತ್ರೆಯ ಪ್ರಯುಕ್ತ ಸಾಂಸ್ಕೃತಿಕೋತ್ಸವ 2025 ಕಾರ್ಯಕ್ರಮವನ್ನು ದಿ. 10ರಂದು ಹಮ್ಮಿಕೊಳ್ಳಲಾಯಿತು.  ಸದ್ರಿ ಕಾರ್ಯಕ್ರಮವನ್ನು ಹಂಪಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಜನಿ.ಕೆ. ಷಣ್ಮುಖಗೌಡ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಅಥಿತಿಗಳಾಗಿ ಪ್ರಾಂಶುಪಾಲರಾದ ಡಾ. ಟಿ.ಹೆಚ್‌.ಬಸವರಾಜ ಹೊಸಪೇಟೆ, ಸಂಗೀತ ವಿಧ್ವಾಂಸರಾದ ಮಲ್ಲಿಕಾರ್ಜುನ ಕುರುವನೂರು, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಾವಿನಹಳ್ಳಿ ಬಸವರಾಜ, ಮುಖಂಡರಾದ ಕೆ.ಉದ್ದಾನಪ್ಪ ಆಗಮಿಸಿದರು. ಅಂಗಡಿ ವಾಮದೇವ, ಎ.ದೊಡ್ಡಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎನ್‌.ಹುಲಿರಾಜ, ಕೆ.ಪಂಪನಗೌಡ, ಹೆಚ್‌.ಕೆ.ಶರಣೇಶ ಇತರರು ಉಪಸ್ಥಿತರಿದ್ದರು.  

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಕಲಾ ವಿಭಾಗದ ವಿದ್ಯಾರ್ಥಿ ಮಧುಸೂದನ್ ಯಾದವ್‌ರವರಿಂದ ಭಕ್ತಿಗೀತೆಗಳು, ಮಲ್ಲಿಕಾರ್ಜುನ ತುರುವನೂರು, ಅಂಗಡಿ ಸಮರ್ಥ, ಸುಮಾ ಕಾಳಘಟ್ಟ, ನವ್ಯಾಶ್ರೀರಕ್ಷಾ ಸುಗಮ ಸಂಗೀತ, ಕುಮಾರಿ ಹರ್ಷಿತ ಹೊಸಪೇಟೆ ಇವರಿಂದ ಭರತನಾಟ್ಯ, ಹಗರಿಬೊಮ್ಮನಹಳ್ಳಿಯ ಶ್ರೀ ಪುಟ್ಟರಾಜ ಶಾಸ್ತ್ರೀಯ ನೃತ್ಯ ಅಕಾಡೆಮಿ ಹಗರಿಬೊಮ್ಮನಹಳ್ಳಿ ಇವರಿಂದ ಸಮೂಹ ನೃತ್ಯ ನತೇಶ್ವರ ಕಲಾತಂಡದಿಂದ ಜಾನಪದ ನೃತ್ಯ ಹಾಗೂ ಇನ್ನು ವಿವಿಧ ಕಲಾ ಪ್ರಕಾರಗಳು ಜಾತ್ರೆಗೆ ಬಂದ ಜನ ಸಮೂಹಕ್ಕೆ ಸಾಂಸ್ಕೃತಿಕ ಮನೋ ರಂಜನೆ ಒದಗಿಸಿದವು. ರಾತ್ರಿ ಇಡಿ ಸುಮಾರು 01:00 ಗಂಟೆಯವರೆಗೆ ಯಶಸ್ವಿಯಾಗಿ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.