ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಅಭಿರುಚಿ ಬೆಳೆಸಿ...

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ  ಅಭಿರುಚಿ ಬೆಳೆಸಿ... Cultivate research interest in students...

ಲೋಕದರ್ಶನ ವರದಿ 

  ವಿಜಯಪುರ  18: ಉನ್ನತ ಶಿಕ್ಷಣ ಗುರಿಯು ಕೇವಲ ವಿದ್ಯಾರ್ಥಿಗಳು ವಿಷಯ ಜ್ಞಾನ, ಅಂಕ ಮತ್ತು ಪದವಿ ಪಡೆಯುವದಕ್ಕಾಗಿ ಸಿಮೀತಗೊಳ್ಳಬಾರದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನದೊಂದಿಗೆ ಕಲಿತ ವಿಷಯಗಳ ಪ್ರಾಯೋಗಿಕ ಅಳವಡಿಕೆ, ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆಯೊಂದಿಗೆ ಆಯ್ಕೆ ಮಾಡಿಕೊಂಡ ಯಾವುದೇ ವಿಷಯದ ಮೇಲೆ ಸಂಶೋಧನೆ ಕೈಗೊಳ್ಳಬೇಕು. ವಿದ್ಯಾರ್ಥಿದೆಸೆಯಲ್ಲಿಯೇ ಸಂಶೋಧನೆಯಲ್ಲಿ ಆಸಕ್ತಿ, ಅಭಿರುಚಿ ಮತ್ತು ಹೊಸ ವಿಷಯಗಳತ್ತ ಬೆಳಕು ಚೆಲ್ಲುವಂತೆ ಪ್ರೇರೇಪಿಸಬೆಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು. ಅವರು ನಗರದ ಬಿ.ಎಲ್‌.ಡಿ.ಇ. ಸಂಸ್ಥೆಯ ಎ.ಎಸ್‌.ಪಾಟೀಲ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಪ್ರಾಜೆಕ್ಟ್‌ ರಿಪೋರ್ಟ ಮೌಖಿಕ ಸಂದರ್ಶನ” ವಿದ್ಯಾರ್ಥಿಗಳ ಸಂಶೋಧನಾ ಕೌಶಲ್ಯಗಳನ್ನು ಮೌಲ್ಯೀಕರಿಸಿ ಮಾತನಾಡುತ್ತಿದ್ದರು.