ಕಳಪೆ ಬೀಜ, ಓಷಧಿ ಮತ್ತು ಅತಿವೃಷ್ಠಿಯಿಂದ ಬೆಳೆ ಹಾನಿ: ಪರಿಹಾರಕ್ಕಾಗಿ ರೈತರ ಮನವಿ
Crop damage due to poor seeds, pesticides and heavy rains: Farmers appeal for compensation
ಬೆಳಗಾವಿ 31: ಕರ್ನಾಟಕ ರಾಜ್ಯ ಹಾಗೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಕಳಪೆ ಬೀಜಗಳು ಮತ್ತು ಕಳಪೆ ಕೀಟನಾಶಕ ಓಷದ ಹಾಗೂ ಅತಿವೃಷ್ಟಿ ಮಳೆಹಾನಿಯಿಂದ ಸೋಯಾಬಿನ, ಹೆಸರು,ಹತ್ತಿ,ಕಬ್ಬು ಬೆಳಗಾರರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಬೆಳೆವಿಮೆ ಸಮೀಕ್ಷೆಯಲ್ಲೂ ಬಹಳಷ್ಟು ರೈತರಿಗೆ ಅನ್ಯಾಯವಾಗಿದೆ. ಇನ್ನೂವರೆಗು ರೈತರ ಖಾತೆಗೆ ಜಮಾ ಆಗದೆ ಇರುವುದು ಖಂಡನೀಯ ಸರಿಯಾಗಿ ಪರೀಶಿಲಿಸಿ ರೈತರಿಗೆ ಕನಿಷ್ಠ 25000 ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ನೇಗಿಲಯೋಗಿ ರೈತ ಸೇವ ಸಂಘ ಮನವಿ ಸಲ್ಲಿಸಿದರು.ಈ ವರ್ಷ ಮಳೆ ಹೆಚ್ಚಾಗಿ ಕಬ್ಬಿನ ಬೆಲೆ ಕುಂಟಿತವಾಗಿದೆ, ಬಿಳಿ ಉಣ್ಣೆ ರೋಗ ತಗುಲಿದೆ. 2025/26 ನೇ ಸಾಲಿನಲ್ಲಿ ಕಬ್ಬಿಗೆ ಗುಜರಾತ್ ಮತ್ತು ಪಂಜಾಬ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ 1 ಟನ್ ಗೆ 3500 ರಿಂದ 4000 ಬೆಲೆ ಘೋಷಣೆ ಮಾಡಬೇಕೆಂದು ಪ್ರಮುಖ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿದರು. ರಾಜ್ಯ ರೈತರ ಹಲವಾರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದರು. ಸರ್ಕಾರ ಇತ್ತೀಚಿನ ದಿನಗಳಲ್ಲಿ ರೈತ ಮತ್ತು ಬಡವರ್ಗದವರನ್ನು ಕಡೆಗಣಿಸುತ್ತಿರುವುದು ಖಂಡನೀಯ, ಮುಂದಿನ ದಿನಗಳಲ್ಲಿ ರೈತರೆಲ್ಲರೂ ಉಗ್ರಹೋರಾಟ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 