ಭ್ರಷ್ಟಾಚಾರ ತಡೆ ಜಾಗೃತಿ ಸಪ್ತಾಹ ಕಾರ್ಯಕ್ರಮ
ಹಾವೇರಿ 30:
ಹಾವೇರಿಯ ಭ್ರಷ್ಟಾಚಾರ ನಿಗ್ರದಳ ಪೊಲೀಸ್ ಠಾಣೆ ವತಿಯಿಂದ ಅಕ್ಟೋಬರ್ 29 ರಿಂದ ನವೆಂಬರ್ 3ರವರೆಗೆ
ಭ್ರಷ್ಟಾಚಾರ ತಡೆ ಜಾಗೃತಿ ಸಪ್ತಾಹ
ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಂಗಳವಾರ ರಾಣೇಬೆನ್ನೂರ
ನಗರದ ಬಿ.ಎ.ಜೆ.ಎಸ್.ಎಸ್. ಕಾಲೇಜಿನ
ಪಿ.ಯು.ಸಿ. ಹಾಗೂ
ಡಿ.ಇಡಿ ವಿದ್ಯಾಥರ್ಿಗಳಿಗೆ ಭ್ರಷ್ಟಾಚಾರ
ನಿಮರ್ೂಲನೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಹಾವೇರಿ ಭ್ರಷ್ಟಚಾರ ನಿಗ್ರಹದಳ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ
ಎಸ್.ಕೆ.ಪ್ರಹ್ಲಾದ ಅವರು
ಮಾತನಾಡಿ, ಭ್ರಷ್ಟಾಚಾರ ತಡೆಗಟ್ಟಲು ಯುವ ಜನಾಂಗ ಸಕ್ರೀಯಾಗಿ
ಪಾಲ್ಗೊಳ್ಳಬೇಕು ಹಾಗೂ ಭ್ರಷ್ಟಾಚಾರದ
ಬಗ್ಗೆ ತಮಗೆ ಮಾಹಿತಿ ಇದ್ದಲ್ಲಿ
ಕೂಡಲೇ ಭ್ರಷ್ಟಾಚಾರ ನಿಗ್ರದಳ ಪೊಲೀಸ್ ಠಾಣೆ ತಿಳಿಸುವಂತೆ ಸಲಹೆ
ನೀಡಿದರು.
ಪ್ರಾಂಶುಪಾಲ ಎಸ್.ಎಂ.ಟಾಮೆ
ಅವರು ಭ್ರಷ್ಟಾಚಾರ ನಿಮರ್ೂಲನೆಗೆ ಪ್ರತಿಯೊಬ್ಬ ನಾಗರಿಕರು ಕಾರ್ಯತತ್ಪರರಾಗಬೇಕು ಎಂದು ಹೇಳಿದರು.
ಅದರಂತೆ ಹಾವೇರಿ ನಗರದ ಟಿ.ಎಂ.ಎ.ಇ. ಸೊಸೈಟಿಯ
ಬಿ.ಇಡಿ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ
ಭ್ರಷ್ಟಚಾರ ನಿಗ್ರಹದಳ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ
ಬಿ.ಕೆ.ಹಳಬಣ್ಣನವರ
ಅವರು ಭ್ರಷ್ಟಾಚಾರ ನಿಮರ್ೂಲನೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಭ್ರಷ್ಟಾಚಾರ ಮುಕ್ತ ಭಾರತ ನಿಮರ್ಾಣದಲ್ಲಿ ನಾಗರಿಕರ
ಪಾತ್ರ ಎಂಬ ವಿಷಯದ ಕುರಿತು
ಬಿ.ಇಡಿ. ವಿದ್ಯಾಥರ್ಿಗಳಿಗೆ ಏರ್ಪಡಿಸಲಾದ
ಭಾಷಣ ಸ್ಪಧರ್ೆಯಲ್ಲಿ ವಿರೇಶ
ಹಂಚಿಮನಿ ಪ್ರಥಮ, ವೆಂಕಟೇಶ್ ಜಂಗ್ಲಿ ದ್ವಿತೀಯ ಹಾಗೂ ವೀಣಾ ಗುತ್ತಲ
ತೃತೀಯ ಸ್ಥಾನ ಪಡೆದುಕೊಂಡರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 