ವಿಶೆಷ ಚೇತನರ ಸಮನ್ವಯ ಸಭೆ
Coordination meeting of special spirits
ರಾಣೇಬೆನ್ನೂರು 02 : ಪಂಚಾಯಿತಿ ವಾಪ್ತಿಯ ಎಲ್ಲಾ ವಿಶೇಷ ಚೇತನರು ಯುಡಿಐಡಿ ಕಾರ್ಡ್ ಪಡೆದು, ದೊರೆಯುವ ಒಟ್ಟು 13 ಯೋಜನೆಗಳ ಸಮಗ್ರ ವರದಿ ಪಡೆದು ಗ್ರಾಮೀಣ ಪುನರ್ವಸತಿ ವಿಶೇಷ ಚೇತನ ಕಾರ್ಯಕರ್ತರನ್ನು ಸಂಪರ್ಕಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದು ಸುಣಕಲ್ ಬಿದರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಂದಾ ಶಿ. ವಗ್ಗರಣಿ ಹಳಿದರು. ಅವರು ಇತ್ತೀಚೆಗೆ ಸುಣಕಲ್ ಬಿದರಿ, ಗ್ರಾಮ ಪಂಚಾಯತ್ ಭಾವನದಲ್ಲಿ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಆಯೋಜಿಸಿದ್ದ, ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ಉದ್ಗಾಟಿಸಿ ಮಾತನಾಡಿದರು.
ವಿಶೇಷ ಚೇತನರು ಸ್ವಯಂ ಉದ್ಯೋಗ ಮಾಡಲು - ಆಧಾರ ಯೋಜನೆ, ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರೊತ್ಸಾಹಧನ ಸೇರಿ ಇತರೆ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಮತ್ತು ಗ್ರಾಮ ಪಂಚಾಯತಿಯ ಶೆ 5ಅ ರ ಅನುದಾನದಲ್ಲಿ ವಿಶೇಷ ಚೇತನರು ಭವನ ನಿರ್ಮಿಸಲು ಅವಕಾಶವಿದ್ದು, ಪಂಚಾಯತಿ ಕೇಂದ್ರ ಸ್ಥಾನದಲ್ಲಿಯ್ಯ ನಿರ್ಮಿಸಲು ಓಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಪಂಚಾಯಿತಿ ಉಪಾಧ್ಯಕ್ಷ ಭರಮಗೌಡ ಕುಡುಪಲಿ, ಗ್ರಾಮೀಣ ಪುನರ್ವಸತಿ ತಾಲೂಕ ಘಟಕದ ಅಧ್ಯಕ್ಷ ಗಣೇಶ. ನಂದಿಗಾವಿ. ಪುನರ್ವಸತಿ ಕಾರ್ಯಕರ್ತ ನಾಗರಾಜ ಸಂಗಾಪುರ,ಸುನಿತಾ ಕುಡುಪಲಿ, ಆಶಾ ಸಾತೆನಹಳ್ಳಿ,ಮಲ್ಲೇಶ ಹೊರಗಿ, ಶಂಕ್ರಗೌಡ ಘೋಲಿಸಗೌಡ್ರ, ಮಾಲತೇಶ, ಇಸ್ಮಾಯಿಲಸಾಬ್ ಬೆನಕನಕೊಂಡ, ಸೇರಿದಂತೆ ಸದಸ್ಯರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮತ್ತು ವಿಶೇಷ ವರ್ಗದ ಜಾಬ್ ಕಾರ್ಡ್ಗಳು ವಿತರಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 