ಸಹಕಾರಿಗಳು ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿವೆ: ಅಮರೇಶ್ವರ ಮಹಾರಾಜರು

ಸಹಕಾರಿಗಳು ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿವೆ: ಅಮರೇಶ್ವರ ಮಹಾರಾಜರು Cooperatives are working hard for the economic progress of farmers: Amareshwar Maharaj

ಸಹಕಾರಿಗಳು ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿವೆ: ಅಮರೇಶ್ವರ ಮಹಾರಾಜರು 

ಕಾಗವಾಡ  11: ದೇಶದಲ್ಲಿ ಇಂದು ಸಹಕಾರ ಕ್ಷೇತ್ರ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿದ್ದು, ನಮ್ಮ ರಾಜ್ಯದಲ್ಲಿ ಸಹಕಾರಿ ಸಂಘಗಳು ರೈತರ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತೀವೆ. ದಿವಂಗತ ಸಾ.ರೆ. ಪಾಟೀಲ ಅವರ ದೂರದೃಷ್ಟಿಯೊಂದಿಗೆ ಮಹಾರಾಷ್ಟ್ರದಲ್ಲಿ ಪ್ರಾರಂಭಗೊಂಡ ಈ ಬ್ಯಾಂಕ್ ಇಂದು ರಾಜ್ಯದಲ್ಲಿ 5 ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಗಡಿ ಭಾಗದ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಕೌಲಗುಡ್ಡದ ಸಿದ್ದ ಸಂಸ್ಥಾನ ಮಠದ ಅಮರೇಶ್ವರ ಮಹಾರಾಜರು ಹೇಳಿದ್ದಾರೆ. 

ಅವರು ಸೋಮವಾರ ದಿ.11 ರಂದು ಪಟ್ಟಣದ ಸಂಕೇಶ್ವರ-ಜೆವರ್ಗಿ ರಸ್ತೆಯ ಅಮೋಘ ಟಾವರ್ಸ್‌ನಲ್ಲಿ ಡಾ. ಅಪ್ಪಾಸಾಹೇಬ ಉರ್ಫ ಸಾ.ರೆ. ಪಾಟೀಲ ಜಯಸಿಂಗಪೂರ-ಉದಗಾಂವ ಸಹಕಾರಿ ಬ್ಯಾಂಕ್ ಲಿ., ಜಯಸಿಂಗಪೂರ (ಮಲ್ಟಿಸ್ಟೇಟ್) ಇದರ ನೂತನ ಶಾಖೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಈ ಬ್ಯಾಂಕ್ ಈಗಾಗಲೇ ಮಹಾರಾಷ್ಟ್ರದಲ್ಲಿ 15 ಮತ್ತು ಕರ್ನಾಟಕದಲ್ಲಿ 4 ಶಾಖೆಗಳನ್ನು ಹೊಂದಿದ್ದು, ಕಾಗವಾಡದಲ್ಲಿ 20ನೇ ಶಾಖೆ ಪ್ರಾರಂಭಿಸುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಇದೇ ರೀತಿ ಇನ್ನಷ್ಟು ಶಾಖೆಗಳನ್ನು ರಾಜ್ಯದ ಗಡಿಭಾಗಗಳಲ್ಲಿ ಪ್ರಾರಂಭಿಸಿ, ಗಡಿ ರೈತರ ಅಭಿವೃದ್ಧಿಗೆ ಶ್ರಮಿಸುತ್ತ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು. 

ನಂತರ ಯತೀಶ್ವರಾನಂದ ಸ್ವಾಮೀಜಿ ಮಾತನಾಡಿ, ಈ ಬ್ಯಾಂಕ್‌ನ ಸಂಸ್ಥಾಪಕರು ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು. ಹೀಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸುಮಾರು 20 ಶಾಖೆಗಳನ್ನು ಪ್ರಾರಂಭಿಸಿ, ಅನೇಕರಿಗೆ ಉದ್ಯೋಗದಾತರಾಗಿದ್ದಾರೆ. ಇಲ್ಲಿ ಶಾಖೆ ಪ್ರಾರಂಭಗೊಂಡ ಮೊದಲ ದಿನವೇ ಸುಮಾರ 3 ಕೋಟಿ ಠೇವಣಿ ಸಂಗ್ರಹವಾಗಿರುವುದು ಈ ಬ್ಯಾಂಕಿನ ವಿಸ್ವಾರ್ಸತೆಗೆ ಸಾಕ್ಷಿಯಾಗಿದೆ ಎಂದರು. 

ಸಹಕಾರ ಮಹರ್ಷಿ ಗಣಪತರಾವ ಪಾಟೀಲ, ಶಿರಗುಪ್ಪಿ ಶುಗರ್ಸ್‌ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ, ತಹಶೀಲ್ದಾರ ರವೀಂದ್ರ ಹಾದಿಮನಿ, ಬ್ಯಾಂಕಿನ ಬೋರ್ಡ್‌ ಆಪ್ ಮ್ಯಾನೇಜಮೆಂಟ್ ಅಧ್ಯಕ್ಷ ಮಹೇಂದ್ರ ಬಾಗೆ, ಉಪಾಧ್ಯಕ್ಷ ಅಪ್ಪಾಸೋ ನರುಟೆ, ಅಧ್ಯಕ್ಷ ಸುರೇಶ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಘುನಾಥ ಪಾಟೀಲ, ಸಂಚಾಲಕರಾದ ಅರುಣ ದೇಸಾಯಿ, ಅಮರ ಯಾದವ, ವಿಶ್ವನಾಥ ಮಾನೆ, ಜ್ಯೋತಿಕುಮಾರ ಪಾಟೀಲ, ನಿಜಗೊಂಡಾ ಪಾಟೀಲ, ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಮಿಲಿಂದ ಜಗದಾಳೆ, ಡೆಪ್ಯೋಟಿ ಜನರಲ್ ಮ್ಯಾನೇಜರ್ ರಾಕೇಶ್ ದರ್ಜೆ, ಮುಖ್ಯ ವ್ಯವಸ್ಥಾಪಕ ವಿನಾಯಕ ಕದಮ್, ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ ಬೋಟೆ, ಶೇಡಬಾಳದ ಪ್ರಗತಿಪರ ರೈತ ಸುರಗೌಡಾ ಪಾಟೀಲ, ಅಜೀತ ಚೌಗುಲೆ, ರಮೇಶ ಪಾಟೀಲ, ಕಾಕಾ ಪಾಟೀಲ, ಸೌರಭ ಪಾಟೀಲ, ಅಣ್ಣಾಸಾಹೇಬ ಕಠಾರೆ, ರಮೇಶ ಚೌಗುಲೆ ಸೇರಿದಂತೆ ಬ್ಯಾಂಕಿನ ಎಲ್ಲ ಶಾಖೆಯ ಸಿಬ್ಬಂದಿ ವರ್ಗದವರು, ಠೇವುದಾರರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.