ಅಧಿಕಾರಿಗಳ ಮತ್ತು ಸಾರ್ವಜನಿಕರ ಸಹಕಾರ ಅಗತ್ಯ: ಸಚಿವ ಸಿ.ಸಿ.ಪಾಟೀಲ

ಗದಗ 18: ಜಿಲ್ಲೆಯಲ್ಲಿ  ಕೊರೋನಾ ವೈರಸ್ ನಿಯಂತ್ರಣಕ್ಕಾಗಿ  ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ತಿಳಿಸಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  ಗದಗ ಜಿಲ್ಲೆಯಲ್ಲಿ   3 ನೇ   ಕೊರೋನಾ  ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.  42ವರ್ಷದ ರಂಗನವಾಡಿ ಪ್ರದೇಶದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ರಂಗನವಾಡಿಯ ಪ್ರದೇಶವನ್ನು ಈಗಾಗಲೇ ಕಂಟೊನ್ಮೆಂಟ ಪ್ರದೇಶವೆಂದು ಘೊಷಿಸಲಾಗಿದೆ. ಸೊಂಕು ಹರಡಂದತೆ ಮುಂಜಾಗ್ರತಾ ಕ್ರಮವಾಗಿ  ಸೊಂಕು ಪತ್ತೆಯಾದ ಓಣಿ ಎಲ್ಲ ಜನರನ್ನು ಮಲ್ಲಸಮುದ್ರದ ಮೊರಾಜರ್ಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ವಸತಿ ಶಾಲೆಯಲ್ಲಿಯೇ  ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಅವರೇ ಅಡುಗೆ ತಯಾರಿಸುವದಿದ್ದರೆ ಅಂತಹವರಿಗೆ  ಅಗತ್ಯದ ಆಹಾರ ಸಾಮಗ್ರಿಗಳನ್ನು ಒದಗಿಸಲಾಗುವದು ಎಂದರು.  ರಂಗನವಾಡಿ ಪ್ರದೇಶವನ್ನು ಸಂಪೂರ್ಣವಾಗಿ ಕ್ರಿಮಿನಾಶಕ ಔಷಧವನ್ನು ಸಿಂಪಡಿಸಲು  ನಿದರ್ೇಶನ ನೀಡಲಾಗಿದೆ.  ಇಂದಿನಿಂದ   ಗದಗ ಜಿಮ್ಸ್ ನಲ್ಲಿ    ಕೊರೊನಾ ಪತ್ತೆ  ಕೇಂದ್ರ ಟೆಸ್ಟಿಂಗ್ ಲ್ಯಾಬ್) ಪ್ರಾರಂಭ ಮಾಡಲಾಗುತ್ತಿದ್ದು   ಇದರಿಂದ ಕೊರೋನಾ ವೈರಸ್ ಪರೀಕ್ಷೆಗಳು ಶೀಘ್ರಗತಿಯಲ್ಲಿ  ಜರುಗಲು ಅನುಕೂಲವಾಗುತ್ತದೆ.  ಗದಗ-ಬೆಟಗೇರಿ ನಗರ ಪ್ರದೇಶದಲ್ಲಿ ಸೋಮವಾರದಿಂದ ಪೆಟ್ರೋಲ್ ಮಾರಾಟಕ್ಕೆ ಎರಡು ಗಂಟೆ ನಿಗದಿಪಡಿಸಲಾಗಿದ್ದು  ಡೀಸಲ್ ಮಾರಾಟ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ. ಹೂವು ಬೆಳೆಗಾರರಿಗೂ ಸಹ  ತರಕಾರಿ ಮಾರಾಟಗಾರರಂತೆ  ನಿಗದಿತ ಅವಧಿಯಲ್ಲಿ ಮಾರಾಟ ಮಾಡಲು ನಿಬಂಧನೆಗಳೊಂದಿಗೆ ಅನುಮತಿ ನೀಡಲು ಸೂಚಿಸಲಾಗಿದೆ. ಅರ್ಹ ಪಡಿತರ ಕುಟುಂಬಗಳಿಗೆ ಪಡಿತರ ಒದಗಿಸಲಾಗುತ್ತಿದ್ದು ಹೊಸದಾಗಿ ಅಜರ್ಿ ಸಲ್ಲಿಸಿದವರಿಗೂ ಶೀಘ್ರವೇ ಪಡಿತರ ವಿತರಣೆಗೆ ಕ್ರಮ ಜರುಗಿಸಲಾಗುವದು ಎಂದರು. ದಾನಿಗಳು ಆಹಾರ ಸಾಮಗ್ರಿ ವಿತರಿಸುವ ಮುಂಚೆ ನಿಯಮಿಸಲಾಗುವ ಅಧಿಕಾರಿಗಳ ಗಮನಕ್ಕೆ ತಂದು ದಿನಸಿ ವಿತರಿಸಬೇಕು. ದಿನಸಿ ವ್ಯಾಪಾರಸ್ಥರು  ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ  ಅಂತಹ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ  ತಿಳಿಸಿದರು.   

ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ  ಗದಗನ ರಂಗನವಾಡಿ ಪ್ರದೇಶದಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ   ಆ ಪ್ರದೇಶದಲ್ಲಿದ್ದ ಜನರಿಗೆ ಧೈರ್ಯ ತುಂಬಲಾಗುತ್ತಿದೆ. ಸಾರ್ವಜನಿಕರು ಸ್ವಯಂ ಶಿಸ್ತು  ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮೂಲಕ ಕೋರೋನಾ ವೈರಸ್ ತಡೆಗಟ್ಟುವಲ್ಲಿ ಸಹಕರಿಸಬೇಕು.  ಸಾರ್ವಜನಿಕರಿಗೆ ನಗದು  ವಹಿವಾಟು   ನಡೆಸಲು ಬ್ಯಾಂಕ್ ನವರು ಬ್ಯಾಂಕ ಮಿತ್ರರ ಸಹಕಾರದೊಂದಿಗೆ  ಮನೆಮನೆಗೆ ಬ್ಯಾಂಕ್ ಸೇವೆ ಒದಗಿಸಲು ಸಹಕರಿಸಬೇಕು ಎಂದು ಶಾಸಕ ಎಚ್.ಕೆ.ಪಾಟೀಲ ತಿಳಿಸಿದರು.

ಗದಗ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್ ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ,  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ,  ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ  ಯತೀಶ್ ಎನ್, ಉಪಸ್ಥಿತರಿದ್ದರು.