ಸಕ್ಕರೆ ಕಾರ್ಖಾನೆಗಳ ಯಶಸ್ಸಿಗೆ ರೈತರು, ಕಾರ್ಮಿಕರ ಸಹಕಾರ ಅಗತ್ಯ : ಶಾಸಕಿ ಶಶಿಕಲಾ ಜೊಲ್ಲೆ
Cooperation of farmers and workers is necessary for the success of sugar factories: MLA Sasikala Jo
ಸಕ್ಕರೆ ಕಾರ್ಖಾನೆಗಳ ಯಶಸ್ಸಿಗೆ ರೈತರು, ಕಾರ್ಮಿಕರ ಸಹಕಾರ ಅಗತ್ಯ : ಶಾಸಕಿ ಶಶಿಕಲಾ ಜೊಲ್ಲೆ
ಸಂಕೇಶ್ವರ, 16 ; ಸಕ್ಕರೆ ಕಾರ್ಖಾನೆಗಳು ಯಶಸ್ಸಿಯಾಗಿ ನಡೆಯಲು ಆ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಾರ್ಖಾನೆಗೆ ಕಳುಹಿಸಬೇಕು ಹಾಗೂ ಕಾರ್ಮಿಕರ ಕಬ್ಬನ್ನು ಸರಿಯಾದ ಸಮಯದಲ್ಲಿ ತಂದು ನುರಿಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ 66ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಿ. ಅಪ್ಪಣ್ಣಗೌಡ ಪಾಟೀಲ ಅವರು 66 ವರ್ಷಗಳ ಹಿಂದೆ ಸ್ಥಾಪಿಸಿದ ಈ ಸಕ್ಕರೆ ಕಾರ್ಖಾನೆ, 25 ವರ್ಷಗಳ ಕಾಲ ಯಶಸ್ಸಿನ ಪಥದಲ್ಲಿ ನಿರಂತರವಾಗಿ ಸಾಗುತ್ತಿಂತು, ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಕ್ಕರೆ ಕಾರ್ಖಾನೆಗೆ ಭಾರಿ ನಷ್ಟವಾಯಿತು ಮತ್ತು ಅದು ಅಪಾರ ಪ್ರಮಾಣದ ಸಾಲಕ್ಕೆ ಒಳಗಾಗಿದೆ. ರೈತರಿಗೆ ಕಬ್ಬಿನ ಹಣ ಹಾಗೂ ಕಾರ್ಮಿಕರಿಗೆ ನಿಗದಿತವಾಗಿ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಕಾರ್ಖಾನೆಯ ಸಂಚಾಲಕರ ಮನವಿಯ ಮೇರೆಗೆ ಸಹಕಾರಿ ಧುರೀಣರಾದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಬಿರೇಶ್ವರ ಸಹಕಾರಿ ಸಂಘ ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಹಣಕಾಸು ನೆರವು ನೀಡಿ ಈ ಕಾರ್ಖಾನೆಯನ್ನು ಒಂದು ಮಟ್ಟಕ್ಕೆ ಮುಂದು ವರಿಸಿದರು.
ಕಾರ್ಖಾನೆಯು ಇನ್ನಷ್ಟು ಸುಧಾರಣೆಯಾಗಬೇಕಾದರೆ ರೈತರು ಮತ್ತು ಕಾರ್ಮಿಕರು ತಮ್ಮ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು."ರೈತರ ಅನುಕೂಲಕ್ಕಾಗಿ 10 ಲಕ್ಷದ ಅಪಘಾತ ವಿಮೆ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ರೂ 10 ಲಕ್ಷದ ಅಪಘಾತ ವಿಮೆ ಮತ್ತು 2 ಲಕ್ಷದ ಆರೋಗ್ಯ ವಿಮೆಯನ್ನು ಕಾರ್ಖಾನೆಯಲ್ಲಿ ಜಾರಿಗೆ ತರಲಾಗುವುದೆಂದು ಶಾಸಕಿ ಶಶಿಕಲಾ ಜೊಲ್ಲೆ ಅವರು ಪ್ರಕಟಿಸಿದರು." ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮಾತನಾಡಿ ಈ ಸಾಲನಲ್ಲಿ 12ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಇಡಲಾಗಿದ್ದು, ಸದಸ್ಯರು ಹಾಗೂ ರೈತರು ತಾವು ಬೆಳೆದ ಸಂಪೂರ್ಣ ಕಬ್ಬುವನ್ನು ಕಾರ್ಖಾನೆಗೆ ಕಳುಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರ್ಖಾನೆ ಕಾರ್ಮಿಕರಿಗೆ 8.33ಅ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ಸಾನಿಧ್ಯ ವಹಿಸಿದ್ದ ನಿಡಸೋಸಿ ಮಠದ ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಆರ್ಶೀವಚ ನೀಡಿದರು. ಕಾರ್ಖಾನೆ ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಂದ್ರ ದೊಡ್ಡಲಿಂಗನವರ, ಬಸ್ಸಪ್ಪಾ ಮರಡಿ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಭಾರತಿ ಹಂಜಿ ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಮುಖಂಡರಾದ ಶ್ರೀಕಾಂತ ಹತನೂರಿ, ಶಂಕರರಾವ ಹೆಗಡೆ ಕಾರಖಾನೆ ಜನರಲ್ ಮ್ಯಾನೇಜರ್ ವೀರನಗೌಡ ದೇಸಾಯಿ, ಕಾರ್ಯಾಲಯ ಅಧೀಕ್ಷಕರು ಪ್ರಭಾಕರ ಡಬನ್ನವರ ಕಾರ್ಖಾನೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು, ಲಕ್ಷ್ಮಣ್ ಹಂಚಣಮನಿ ನಿರೂಪಿಸಿದರು, ಮಹಾದೇವ ಹಂಜಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 