ಸತತ ಪ್ರಯತ್ನ, ಪರಿಶ್ರಮ ಶ್ರೇಷ್ಠವ್ಯಕ್ತಿಯನ್ನಾಗಿಸುತ್ತದೆ: ಸಿ. ಎಮ್. ತ್ಯಾಗರಾಜ್
Continuous effort and perseverance make a great person: C. M. Thyagaraj
ಬೆಳಗಾವಿ 28: ಸತತ ಪರಿಶ್ರಮ ಶ್ರೇಷ್ಠ ವ್ಯಕ್ತಿಯನ್ನಾಗಿಸುತ್ತದೆ ಮತ್ತು ತಮ್ಮ ವ್ಯಕ್ತಿತ್ವವನ್ನ ರೂಪಿಸುತ್ತದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸಿ. ಎಮ್. ತ್ಯಾಗರಾಜ್ ಹೇಳಿದರು. ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಫೆ.28ರಂದು ಪರಂಪರಾ, ಉಬ್ಬಂಟು ಕನ್ಸೊರ್ಟಿಮ್ ,ಎಸ್ಕೇಪ್ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ದಿ ಡಿಜಿಟಲ್ ಟ್ರಾನ್ಸಸ್ಟಾರ್ಮೆಷನ್ ಇ ಕಾಮರ್ಸ್ ಮತ್ತು ಡಿಜಿಟಲ್ ಟ್ರಾನ್ಸಫಾರ್ಮೆಷನ್ ಟ್ರೈನಿಂಗ್ ಪ್ರೋಗ್ರಾಂ ಫಾರ್ ಉಮೆನ್ ಎಂಟರೆ್ರನರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತಮ್ಮ ಶಕ್ತಿಯನ್ನ ಅರಿಯಬೇಕು, ಐದು ಜನ ಹೆಣ್ಣು ಮಕ್ಕಳ ವಿಚಾರ ಮಾಡಿದ್ರೆ ಮಾರುಕಟ್ಟೆ ಬರುತ್ತದೆ, ಐವತ್ತು ಜನ ಹೆಣ್ಣು ಮಕ್ಕಳು ವಿಚಾರ ಮಾಡಿದ್ರೆ ಮಾರ್ಕೆಟ್ ಮಾಲ್ ಬರುತ್ತದೆ. ಇವತ್ತು ಡಿಜಿಟಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ವ್ಯಕ್ತಿಗಳು ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಬೇಕು, ನಮ್ಮ ಯೋಚನೆಯಂತೆ ಐಡಿಯಾಗಳು ಹೊಳೆಯುತ್ತವೆ.ಹೆಲ್ಪಿಂಗ್ ಹ್ಯಾಂಡ್ ಅವೇಷನರಿ ಮಾಡುತ್ತದೆ ಎಂದು ಹೇಳಿದ ಅವರು ನಮ್ಮ ಜೀವನದಲ್ಲಿ ಬದ್ಧತೆ ಮುಖ್ಯ ಎಂದರು.
ಈಗ ಸದ್ಯ ಉದ್ಯಮ ಡಿಜಿಟಲ್ ಮಾರ್ಕೆಟ್ ಆಗಿದೆ, ನಾವು ಜಾನರಾಗಿ ಜಾನ ಹೆಜ್ಜೆ ಇಡಬೇಕಿದೆ,ಆ ದಿಶೆಯಲ್ಲಿ ಹೆಜ್ಜೆ ಇಡಬೇಕಿದೆ ಎಂದರು. ಹೆಣ್ಣು ಮಕ್ಕಳು ಸಶಕ್ತರಾಗಬೇಕು ಆ ನಿಟ್ಟಿನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹೊಸ ಹೆಜ್ಜೆ ಇಡುತ್ತಿದೆ. ವಿದ್ಯಾರ್ಥಿಗಳ ಕನಸು ನನಸಾದರೆ ದೇಶದ ಕನಸು ನನಸಾದಂತೆ, ನಮ್ಮೆಲ್ಲರಿಗೂ ಗ್ರಹಿಸುವ ಶಕ್ತಿ ಇರಬೇಕು ಅಂದಾಗ ಮಾತ್ರ ಉತ್ತಮ ಉದ್ಯಮಿಯಾಗಲು ಸಾಧ್ಯ ಎಂದು ಹೇಳಿದರು.
ನಿವೃತ್ತ ಋಖ ಅಧಿಕಾರಿ ರತ್ನಪ್ರಭಾ ಮಾತನಾಡಿ ಮಹಿಳೆಯರ ಶ್ರೇಯಸ್ಸು ಸ್ವಾವಲಂಬನೆಗಾಗಿ ಉಬ್ಬಂಟು ಸಂಸ್ಥೆ ಯಶಸ್ವಿಯಾಗಿ ಕೆಲಸ ಮಾಡಿ ಏಳನೇ ವರ್ಷಕ್ಕೆ ಪಾದಾರೆ್ಣ ಮಾಡುತ್ತಿದೆ ಎಂದರು.
ಜೋತಿ ಕೃಷ್ಣ ಮಾತನಾಡಿ ನಮ್ಮ ಯೋಜನೆ, ಯೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ. ನಮ್ಮ ಆಲೋಚನೆ ವಿವೇಚನೆಗಳು ಹೇಗೆ ರೂಪಗೊಳ್ಳುತ್ತದೆ ಎಂಬುದು ಮುಖ್ಯ, ಯಶಸ್ವಿಗೆ ಸತತ ಪ್ರಯತ್ನ ಮುಖ್ಯ ಡಿಜಿಟಲ್ ಮಾರ್ಕೆಟ್‌ನಲ್ಲಿ ಯಶಸ್ವಿಯಾಗುವುದು ಮುಖ್ಯ ಎಂದರು. ಪರಂಪರಾ ಸಂಸ್ಥೆಯ ಸ್ಥಾಪಕಿ ಪ್ರೀಯಾ ಪುರಾಣಿಕ, ಮಾಯರಾ ಸಂಸ್ಥೆಯ ಸ್ಥಾಪಕಿ ರೂಪಾ ದೇಸಾಯಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 