ಬಯಲುರಂಗ ಮಂದಿರ ನಿರ್ಮಾಣಕಾಮಗಾರಿಗೆ ಚಾಲನೆ: ಶಾಸಕ ಡಿ.ಎಮ್.ಐಹೊಳೆ
Construction work for open-air theatre inaugurated: MLA D.M. Aihole
ಬಯಲುರಂಗ ಮಂದಿರ ನಿರ್ಮಾಣಕಾಮಗಾರಿಗೆ ಚಾಲನೆ: ಶಾಸಕ ಡಿ.ಎಮ್.ಐಹೊಳೆ
ರಾಯಬಾಗ 31: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಹಾಗೂ ಶಾಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಯಲುರಂಗ ಮಂದಿರ ಅವಶ್ಯ ಇರುವುದರಿಂದ ಪಟ್ಟಣದಕೇಂದ್ರ ಶಾಲೆಯಲ್ಲಿ ಬಯಲುರಂಗ ಮಂದಿರ ನಿರ್ಮಿಸಲು ಅನುದಾನ ಮಂಜೂರು ಮಾಡಿಸಿರುವುದಾಗಿ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಶನಿವಾರ ಪಟ್ಟಣದ ತಾಲೂಕಾ ಶಾಲೆಯ ಆವರಣದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 15ಲಕ್ಷ ರೂ.ಅನುದಾನದಲ್ಲಿ ಬಯಲುರಂಗ ಮಂದಿರ ನಿರ್ಮಾಣಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆಯ ಬಯಲುರಂಗ ಮಂದಿರ ಜಾಗದಲ್ಲಿ ಈಗ ಹೊಸ ಬಯಲುರಂಗ ಮಂದಿರ ನಿರ್ಮಿಸಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಶಾಲೆಯಲ್ಲಿ ನಡೆಯುವ ಪ್ರತಿಭಾಕಾರಂಜಿ ಮತ್ತ ಸಾಂಸ್ಕೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮ ನಡೆಸಲು ಒಂದು ಉತ್ತಮ ವೇದಿಕೆ ಅವಶ್ಯಕವಾಗಿತ್ತು ಎಂದರು.
ಎಇಇ ಎಸ್.ಎಸ್.ಹೊಸಮನಿ,ದೈಹಿಕ ಪರೀವೀಕ್ಷಕ ಎಮ್.ಪಿ.ಜಿರಗ್ಯಾಳ, ಮುಖ್ಯ ಶಿಕ್ಷಕಿ ಎಮ್.ಬಿ.ಪಟ್ಟಣ,ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಜಿಯಾವುಲ್ಲಾ ಮುಲ್ಲಾ, ಎಮ್.ಆರ್.ಸಯ್ಯದ, ಸುರೇಶ ಮಾಳಿ, ಸುಭಾಷ್ ಕಾಂಬಳೆ, ಪರಶುರಾಮ ಪೂಜಾರಿ, ರಾಕೇಶಕಟ್ಟಿಮನಿ, ರಿತೇಶ ಅವಳೆ, ಭಾರತಿಲೋಹಾರ, ಅನಿಲ ಕೊರವಿ, ಮಹೇಶ ಕುಲಗುಡೆ, ಅಜೀತಜಾಧವ, ಅದಂ ಪಠಾಣ, ಆರ್.ಟಿಅರಬಳ್ಳಿ ಹಾಗೂ ಶಿಕ್ಷಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 