ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿಗಳ ಹೊಸ ದುರಸ್ತಿ ಕಟ್ಟಡಗಳ ನಿರ್ಮಾಣ

ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿಗಳ ಹೊಸ ದುರಸ್ತಿ ಕಟ್ಟಡಗಳ  ನಿರ್ಮಾಣ Construction of new and repaired buildings for primary and secondary schools and Anganwadis

ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿಗಳ ಹೊಸ ದುರಸ್ತಿ ಕಟ್ಟಡಗಳ  ನಿರ್ಮಾಣ 

ಧಾರವಾಡ 27: ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿಗಳ ಹೊಸ ಹಾಗೂ ದುರಸ್ತಿ ಕಟ್ಟಡಗಳ  ನಿರ್ಮಾಣ ಹಂತ ಪ್ರಗತಿ ಪರೀಶೀಲಿನೆ  ಸಭೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಟೀಲ್ ಭುವನೇಶ್ ದೇವಿದಾಸ್ ರವರು  ಪಿ ಡಬ್ಲೂ ಡಿ ಇಲಾಖೆ, ಪಿ ಆರ್ ಇ ಡಿ ಮತ್ತು ಕೆ ಆರ್ ಡಿ ಎಲ್ ಇಲಾಖೆಗಳಿಗೆ  ಕ್ರಮವಹಿಸಲು ತಿಳಿಸಿದರು.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಸುಸಜ್ಜಿತ ಶಾಲೆಗಳ ಕಟ್ಟಡ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ಮೇರೆಗೆ ಕಾಮಗಾರಿ ನಡೆಯುತ್ತಿರುವ ಯೋಜನೆಗಳು ಪೂರ್ಣಗೊಳ್ಳುವ ಹಂತ ಅತಿ ಜರೂರಾಗಿ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು. ಕಟ್ಟಡದ ಸುತ್ತ ಮಳೆ ನೀರು ಸಂಗ್ರಹ ವಾಗುತ್ತಿದ್ದು, ಇದ್ದನ್ನು ತೆರವುಗೊಳಿಸಿ ಕಟ್ಟಡದ ಸುತ್ತ ಆವರಣ ಗೊಡೆ ನಿರ್ಮಿಸಲು ನೂತನ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡಲಾಗಿದೆ.  ಜಿಲ್ಲೆಯ ಎಲ್ಲ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸಾಮಥ್ರ್ಯ ಹಾಗೂ ಬಳಸಲು ಯೋಗ್ಯವಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಿಥಿಲಗೊಂಡ 62 ಅಂಗನವಾಡಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 19 ಕಟ್ಟಡಗಳ ದುರಸ್ತಿಗೆ ಕ್ರಮವಹಿಸಲಾಗಿದೆ. 32 ಹೊಸ ಕಟ್ಟಡಗಳ ನಿರ್ಮಾಣ ಮತ್ತು 11 ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿ ಪ್ರಗತಿ ಹೆಚ್ಚಿಸಿ.   ಈ ಸಭೆಯಲ್ಲಿ ಉಪಕಾರ್ಯದರ್ಶಿಗಳು, ಮುಖ್ಯ ಯೋಜನಾ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.