ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಣೆ
Constitution Day is celebrated on November 26 every year
ರಾಯಬಾಗ 26: ಭಾರತವು ಇಂದು ವಿಶ್ವಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ, ಅದಕ್ಕೆ ನಮ್ಮ ಸಶಕ್ತವಾದ ಸಂವಿಧಾನವೇ ಕಾರಣವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೆರೋಟ್ಟಿ ಹೇಳಿದರು.
ಬುಧವಾರ ಪಟ್ಟಣದ ವಕೀಲರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ದೇಶದ ಆಡಳಿತ ಮತ್ತು ಜನರ ಚಿಂತನೆಯ ಚಾಲಕಶಕ್ತಿಯಾಗಿದೆ. ಇಂದಿನ ಯುವಕರು ಸಂವಿಧಾನ ಆಳವನ್ನು ಅರಿತುಕೊಂಡು, ಸಮಾಜದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಲು ಪಣತೊಡಬೇಕೆಂದು ಕರೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ ಮಾತನಾಡಿ, ಭಾರತೀಯ ಪ್ರಜೆಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಹಿರಿಯ ವಕೀಲರಾದ ಆರ್.ಎಸ್.ಶಿರಗಾಂವೆ, ಡಿ.ಎಚ್.ಯಲ್ಲಟ್ಟಿ ಸಂವಿಧಾನದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸ.ಸ.ಅಭಿಯೋಜಕಾರ ಮಹಾವೀರ ಗಂಡವ್ವಗೋಳ, ಹನುಮಂತ ಹಾಚಮಟ್ಟಿ, ಛಾಯಾ ಬೇಡಕಿಹಾಳೆ, ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ವಿ.ಎ.ಮೋರೆ, ಪಿ.ಎಮ್.ಪಾಟೀಲ, ಆರ್.ಎಚ್.ಗೊಂಡೆ, ಎಸ್.ಎಮ್.ಸಾರಂಗಿ, ಎಸ್.ಎಸ್.ಚೌಗಲಾ, ಬಿ.ಎಸ್.ಪಾಟೀಲ, ಆರ್.ಎ.ಗೆನ್ನೆನವರ, ಎಸ್.ಬಿ.ಹೊಳ್ಕರ, ಎಮ್.ಎಮ್.ಚಿಂಚಲಿಕರ, ಎ.ಬಿ.ನಾಗರಾಳೆ, ಎಸ್.ಬಿ.ಶ್ರೀಗೊಂಡ, ಎಸ್.ಎನ್.ಪಡತರಿ, ಬಿ.ಎಲ್.ಕೋಳಿಗುಡ್ಡೆ, ವಿ.ಎಮ್.ಗಲಗಲಿ, ಎಸ್.ಸಿ.ದಿಕ್ಷಿತ, ಜಿ.ಎಸ್.ಕಿಚಡೆ ಸೇರ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 