ಅಧಿಕಾರಿ ಮತ್ತು ಸಾರ್ವಜನಿಕ ನಡುವೆ ಮದ್ಯಸ್ಥಿಕೆವಹಿಸಿ ಕ್ಷೇತ್ರದ ಸಮಸ್ಯೆ ಬಗೆಹರಿಸಬೇಕು : ಶಾಸಕ ಪಠಾಣ
Constituency problem should be resolved through dialogue between officers and public: MLA Pathan
ಅಧಿಕಾರಿ ಮತ್ತು ಸಾರ್ವಜನಿಕ ನಡುವೆ ಮದ್ಯಸ್ಥಿಕೆವಹಿಸಿ ಕ್ಷೇತ್ರದ ಸಮಸ್ಯೆ ಬಗೆಹರಿಸಬೇಕು : ಶಾಸಕ ಪಠಾಣ
ಶಿಗ್ಗಾವಿ : ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಮತ್ತು ನೀರಾವರಿ ಹಾಗೂ ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಪ್ರಾದ್ಯಾನತೆ ನೀಡುತ್ತೇನೆ ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು.
ಕಾರ್ಯಾಲಯ ಉದ್ಘಾಟಿಸಿ ನಂತರ ಸಾರ್ವಜನಿಕ ಉದ್ದೇಶಿಸಿ ಮಾತನಾಡಿದ ಅವರು ಜನರಿಗೆ ಅನೇಕ ತೊಂದರೆ ಇರುವ ಕಾರಣ ಕಾರ್ಯಾಲಯ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡಲಾಯಿತು. ಶಾಸಕ ಮಾಡುವ ಉದ್ದೇಶ ಅಧಿಕಾರಿಗಳು ಮತ್ತು ಸಾರ್ವಜನಿಕ ನಡುವೆ ಮದ್ಯಸ್ಥಿಕೆಯನ್ನು ವಹಿಸಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದು. 21 ರಂದು ಅಧಿಕಾರಿಗಳ ಕೆ.ಡಿ.ಪಿ ಸಭೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ ಜನತಾದರ್ಶನ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿ, ಕಾರ್ಯದರ್ಶಿ ಸಭೆ, ಮೂರು ಪುರಸಭೆ ವ್ಯಾಪ್ತಿಯ ರಸ್ತೆ, ಗಟಾರು, ಸ್ವಚ್ಚತೆಯ ಜೊತೆಗೆ ಮೂಲಭೂತ ಸೌಲಭ್ಯಗಳ ಬಗ್ಗೆ ಸದಸ್ಯರ ಸಭೆ, ವಸತಿ ಶಾಲೆಗಳಿಗೆ ಅನೀರಿಕ್ಷತ ಬೇಟಿ ಹಾಗೂ ಅಧಿಕಾರಿಗಳು ಸಹಿತ ಬೇಟಿ ನೀಡಿ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು , ಪೋಲಿಸ ಅಧಿಕಾರಿಗಳು ಸಭೆ ಮಾಡಿ ಓಸಿ ಹಾಗೂ ಮಟಕಾ ಹಾವಳಿ ಕಡಿಮೆ ಮಾಡಬೇಕಾಗಿದೆ, ಅಕ್ರಮ ಸರಾಯಿ ಮಾರುವವರಿಗೆ ಕ್ರಮ ತೆಗೆದುಕೊಳ್ಳುವ ಕೆಲಸವಾಗಬೇಕಾಗಿದೆ, ಪಂಚ ಗ್ಯಾರಂಟಿ ಯೋಜನೆ ಸಭೆ ಮಾಡಿ ಇನ್ನೂ ಯಾವ ಫಲಾನುಭವಿಗಳು ಇದರ ಸದುಪಯೋಗ ಪಡೆದಿಲ್ಲ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಆಸ್ಪತ್ರೆಗಳಲ್ಲಿ ಹೆರಿಗೆಗೆ ಹಣವನ್ನು ತೆಗೆದುಕೊಳ್ಳುತ್ತಾರೆ. ವಸತಿ ಸಮಸ್ಯೆ ಜೀ ಪ್ಲಸ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುತ್ತೇನೆ ಎಂದರು.
ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಇನ್ನೂ ಮೂರು ವರ್ಷಗಳ ಕಾಲ ನಮ್ಮದೇ ಸರಕಾರ ಇರುವ ಕಾರಣ ನೊಂದ ಹಾಗೂ ಹಸಿವಿನಿಂದ ಬಂದಂತಹ ಫಲಾನುಭಾವಿಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಜಿಲ್ಲಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಪರಿಹಾರ ಒಮ್ಮೆಲೆ ಸಿಗುವುದಿಲ್ಲ ತಾಳ್ಮಿಯಿಂದ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಿರಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ದನಂಜಯ, ಇಓ ಕುಮಾರ ಮಣ್ಣವಡ್ಡರ, ಬ್ಲಾಕ ಅದ್ಯಕ್ಷ ಬಿ.ಸಿ.ಪಾಟೀಲ, ಎಂ.ಜೆ.ಮುಲ್ಲಾ, ಗುಡ್ಡಪ್ಪ ಜಲದಿ, ಶೇಖಣ್ಣಾ ಮಣಕಟ್ಟಿ, ಕರೀಂ ಮೊಗಲಲ್ಲಿ, ಬಾಬರ ಬಾವಜೀ. ಪ್ರೇಮಾ ಪಾಟೀಲ, ವಸಂತಾ ಬಾಗೂರ, ಗೌಸಖಾನ ಮುನಶಿ, ಜಾಫರಖಾನ ಪಠಾಣ, ಮುಕ್ತಾರ ತಿಮ್ಮಾಪೂರ, ಮುನ್ನಾ ಲಕ್ಷೇಶ್ವರ, ಸುದೀರ ಲಮಾಣಿ, ಶ್ರೀಕಾಂತ ಪೂಜಾರ, ಶಂಬುಲಿಂಗಪ್ಪ ಆಜೂರ, ಶಿವಾನಂದ ಕುನ್ನೂರ, ಅಶೋಕ ಕಬನೂರ, ಮಲ್ಲಮ್ಮ ಸೋಮನಕಟ್ಟಿ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 