ಮೃತನ ಪನ್ಪತ್ನಿ ಗಿರಿಜಮ್ಮ ಹಾಗೂ ಕುಟುಂಬಕ್ಕೆ ಕಾಂಗ್ರೇಸ್ ಪಕ್ಷದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಣೆ

Congress party distributes Rs 5 lakh compensation cheque to deceased's five wives Girijamma and fam

ಮೃತನ ಪನ್ಪತ್ನಿ ಗಿರಿಜಮ್ಮ ಹಾಗೂ ಕುಟುಂಬಕ್ಕೆ  ಕಾಂಗ್ರೇಸ್ ಪಕ್ಷದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಣೆ

ರಾಣಿಬೆನ್ನೂರ 10 :  ಕಾಂಗ್ರೇಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ಸಂಕಷ್ಟದಲ್ಲಿ ನಾವಿದ್ದೇವೆ ಎಂಬುದನ್ನು ತೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮಾನವೀತೆಯನ್ನು ಯಾರೂ ಮರೆಯುಂತಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.  

   ತಾಲೂಕಿನ ನದಿಹರಳಳ್ಳಿ ಗ್ರಾಮದಲ್ಲಿ ರವಿವಾರ ಬೆಳಗಾವಿ ಅಧಿವೇಶನಕ್ಕೆ ತೆರಳಿದ್ದ ಕಾಂಗ್ರೇಸ್ ಕಾರ್ಯಕರ್ತ ಬಸಪ್ಪ ಪಾಮೇನಹಳ್ಳಿ ಹೃದಾಘಾತದಿಂದ ನಿಧನ ಹೊಂದಿದ ಮೃತನ ಪನ್ಪತ್ನಿ ಗಿರಿಜಮ್ಮ ಹಾಗೂ ಕುಟುಂಬಕ್ಕೆ  ಕಾಂಗ್ರೇಸ್ ಪಕ್ಷದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು. 

    ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ ಕಾಂಗ್ರೇಸ್ ಅಧಿವೇಶನ ನಡೆಸಿದ ಸವಿ ನೆನಪಿಗಾಗಿ ಹಾಗೂ ಶತಮಾನ ಕಂಡ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷ ಹಮ್ಮಿಕೊಂಡಿದ್ದ ಬೆಳಗಾವಿ ಅಧಿವೇಶನಕ್ಕೆ ತೆರಳಿದ್ದ ಕಾಂಗ್ರೇಸ್ ಕಾರ್ಯಕರ್ತ ಬಸಪ್ಪ ಪಾಮೇನಹಳ್ಳಿ ಹೃದಾಘಾತದಿಂದ ನಿಧನ ಹೊಂದ ವಿಷಯವನ್ನು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ದೂರವಾಣಿಯ ಮೂಲಕ ತಿಳಿಸಿದಾಗ ಅವರು ಮರು ಮಾತನಾಡದೆ ಅವರ ಕುಟುಂಬಕ್ಕೆ ಪಕ್ಷದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ತಿಳಿಸಿ ಎಂದಿದ್ದರು. ಇಂದು ನುಡಿದಂತೆ ನಡೆದ ಧೀಮಂತ ನಾಯಕ ಅವರು ಎಂದರು.    ಗ್ರಾಪಂ ಅಧ್ಯಕ್ಷೆ ಸವಿತಾ ಭಜಾರಿ, ತಾಪಂ ಮಾಜಿ ಅಧ್ಯಕ್ಕ ರವಿಂದ್ರಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಮರದ ಬಸನಗೌಡ, ಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ. ಕಾರ್ಯಕರ್ತರಾದ ಚಂದ್ರಣ್ಣ ಬೇಡರ, ಭಿಮೇಶ ಕುಡಪಲಿ, ಕರಬಸಪ್ಪ ಶಿವಪೂಜೆ, ಸಣ್ಣತಮ್ಮಪ್ಪ ಬಾರ್ಕಿ, ಮಂಜನಗೌಡ ಪಾಟೀಲ ಸೇರಿ ಅನೇಕ ಕಾರ್ಯಕರ್ತರು ಇದ್ದರು.ಫೊಟೊ:10ಆರ್‌ಎನ್‌ಆರ್04ರಾಣಿಬೆನ್ನೂರ: ತಾಲೂಕಿನ ನದಿಹರಳಳ್ಳಿ ಗ್ರಾಮದ ಕಾಂಗ್ರೇಸ್ ಕಾರ್ಯಕರ್ತ ಬಸಪ್ಪ ಪಾಮೇನಹಳ್ಳಿ ಬೆಳಗಾವಿ ಅಧಿವೇಶನಕ್ಕೆ ತೆರಳಿದ ಸಂದರ್ಭದಲ್ಲಿ ಹೃದಾಘಾತದಿಂದ ನಿಧನ ಹೊಂದಿದ ಕುಟುಂಬಕ್ಕೆ  ಕಾಂಗ್ರೇಸ್ ಪಕ್ಷದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಚೆಕ್‌ನ್ನು  ಶಾಸಕ ಪ್ರಕಾಶ ಕೋಳಿವಾಡ ವಿತರಿಸಿದರು.