ಅಹಿಂದ್ ಜಪಿಸುವ ಕಾಂಗ್ರೆಸ್ ಪಕ್ಷ: ನಿಜ ಕಾರ್ಯಕರ್ತರನ್ನು ಕಡೆಗಣಿಸಿರೋದು ಸರಿಯಲ್ಲ, ಸಭೆ ನಂತರ ನನ್ನ ಮುಂದಿನ ನಡೆ- ಡಾ.ಕುಬೇರ​‍್ಪ

ಅಹಿಂದ್ ಜಪಿಸುವ ಕಾಂಗ್ರೆಸ್ ಪಕ್ಷ: ನಿಜ ಕಾರ್ಯಕರ್ತರನ್ನು ಕಡೆಗಣಿಸಿರೋದು ಸರಿಯಲ್ಲ, ಸಭೆ ನಂತರ ನನ್ನ ಮುಂದಿನ ನಡೆ- ಡಾ.ಕುಬೇರ​‍್ಪ Congress party chants Ahind: It is not right to ignore real workers, my next move will be after the

                   ರಾಣಿಬೆನ್ನೂರು 4 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದಾಗ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಮತ್ತು ಪದವೀಧರರ ಘಟಕದ ರಾಜ್ಯಾಧ್ಯಕ್ಷರಾಗಿ ರಾಜ್ಯದಾದ್ಯಂತ ಇಡೀ ರಾಜ್ಯದ ತುಂಬೆಲ್ಲ ಪ್ರವಾಸ ಕೈಗೊಂಡು ಸಂಘಟನೆ ಮಾಡಿದ್ದೇವೆ. ಭಾರತ ಜೋಡೋ, ಮನೆ ಮನೆಗೆ ಕಾಂಗ್ರೆಸ್, ಸ್ವಾತಂತ್ರ್ಯ ನಡೆಗೆ, ಅಭಿಯಾನಗಳು ಮುಂತಾದ ಕಾರ್ಯಗಳಲ್ಲಿ ಸಾಕಷ್ಟು ಸಮಯ ಮತ್ತು ಹಣ ಖರ್ಚು ಮಾಡಿ ಸಂಘಟನೆಯಲ್ಲಿ ದುಡಿದಿದ್ದೇನೆ ಹೀಗಿರುವಾಗ ಪಕ್ಷ ಅಭ್ಯರ್ಥಿ ಘೋಷಣೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಆಕಾಂಕ್ಷಿ  ಅಭ್ಯರ್ಥಿ ಡಾ. ಆರ್‌. ಎಂ. ಕುಬೇರ​‍್ಪ ಕಾಂಗ್ರೆಸ್ ನಡೆಯನ್ನು ಖಂಡಿಸಿದ್ದಾರೆ.

               ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ತಮ್ಮ ತೀರ್ವ ಸಮಾಧಾನ ವ್ಯಕ್ತಪಡಿಸಿರುವ ಡಾ. ಕುಬೇರ​‍್ಪ ಅವರು, ಪದವೀಧರ ಕ್ಷೇತ್ರದ 2020ರಲ್ಲಿ ಚುನಾವಣೆಗೆ  ಸ್ಪರ್ಧಿಸಲು   ಅಭ್ಯರ್ಥಿಗಳೇ ಇಲ್ಲದಂತಹ ಸಂದರ್ಭದಲ್ಲಿ ಪಕ್ಷದ ಆದೇಶದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪಕ್ಷಕ್ಕೆ ಗೌರವ ತಂದುಕೊಟ್ಟಿದ್ದೇನೆ. 28 ಎಂಎಲ್‌ಎ ಕ್ಷೇತ್ರಗಳಲ್ಲಿ ಕೇವಲ 3 ಎಂ ಎಲ್ ಎ ಗಳು ಇದ್ದಾಗ, ಅಂದು ರಾಜ್ಯದಲ್ಲಿ ಮೋದಿ ಹವಾ ಇದ್ದಾಗ, ಈಗ ಟಿಕೆಟ್ ಕೇಳುವವರು, ಟಿಕೆಟ್ ಪಡೆದುಕೊಂಡಿರುವವರು ಎಲ್ಲಿ ಹೋಗಿದ್ದರು? ಪಕ್ಷಕ್ಕೆ ಇವರ ಕೊಡುಗೆ ಏನು? ಎಂದು ಡಾ.ಕುಬೇರ​‍್ಪ ಬಲವಾಗಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನನ್ನು ಕಡೆಗಣಿಸಿರುವುದು ತುಂಬಾ ನೋವಾಗಿದೆ. ನನಗಾಗಿರುವ ಈ ನಷ್ಟವನ್ನು ತುಂಬಿಕೊಡಲು ಪಕ್ಷ ನನಗೆ ತಕ್ಷಣವೇ ಸೂಕ್ತವಾದ ಸ್ಥಾನಮಾನವನ್ನು ಕೊಟ್ಟು,  ಮುಂಬರುವ ಚುನಾವಣೆಗೆ ನನಗೆ ಟಿಕೆಟ್ ನೀಡುವ ಭರವಸೆ ನೀಡದಿದ್ದರೆ, ಈಗ ಟಿಕೆಟ್ ಪಡೆದರು ಅಭ್ಯರ್ಥಿಯ ಗೆಲುವು ಸಾಧ್ಯವಿಲ್ಲ ಎಂಬ ಸಂದೇಶವನ್ನು ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರು ತುಂಬಾ ಗಂಭೀರ ಸೂಚನೆಯನ್ನು ನನಗೆ ನೀಡಿದ್ದಾರೆ.  

                   ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಕ್ಷ ಟಿಕೆಟ್ ನೀಡಲು ಮಾನದಂಡವಾದರ ಯಾವವು? ನಾಲ್ಕು ಮತಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಪಕ್ಷ ಯಾವ ಮಾನದಂಡ ಅನುಸರಿಸಿದೆ? ಎನ್ನುವುದೇ ತಿಳಿಯುತ್ತಿಲ್ಲ.4 ಅಭ್ಯರ್ಥಿಗಳಲ್ಲಿ ಒಬ್ಬರು ರಾಜ್ಯಾಧ್ಯಕ್ಷರ ಜಾತಿಯವರು ಇನ್ನುಳಿದ  3 ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮಾತೆತ್ತಿದರೆ ಅಹಿಂದ ಎಂದು ಜಪಿಸುವ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ನ್ಯಾಯದ ನೆನಪಾಗಲಿಲ್ಲವೇ?. ನಾನು ರಾಜ್ಯದಲ್ಲಿ ಅಹಿಂದ್  ಸಂಸ್ಥಾಪಕ ಬೆವರು ಸುರಿಸಿ ಗಳಿಸಿದ ಹಣ ಖರ್ಚು ಮಾಡಿ ಅಹಿಂದ್ ಕಟ್ಟಿ ಬೆಳೆಸಿದವನು. ನನ್ನಂತಹ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕಡೆಗಣಿಸಿದರೆ, ಪ್ರಾಮಾಣಿಕ ಕಾರ್ಯಕರ್ತರಿಗೆ ವಿಷ ನೀಡಿದಂತಲ್ಲವೇ?. ಎಂದು ಪ್ರಶ್ನಿಸಿರುವ ಕುಬೇರ​‍್ಪ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಹಾಗೂ ಪ್ರಾಮಾಣಿಕ ಕಾರ್ಯಕರ್ತರ ಕಡೆಗಣನೆ ಆದಾಗ, ಅನ್ಯಾಯವಾದ ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಒಂದು ಫೋನ್ ಮಾಡಿ ಕನಿಷ್ಠ ಸಾಂತ್ವನ- ಧೈರ್ಯ ಹೇಳುವಂತ ಸಂಸ್ಕೃತಿಯೇ ಇಲ್ಲದೇ ಇರುವುದು ನನಗೆ ತುಂಬಾ ನೋವಾಗಿದೆ. ಎಂದು ಕಾಂಗ್ರೆಸ್ ಪಕ್ಷ ಮತ್ತು ನಾಯಕರ ಧೋರಣೆ ವಿಷಾದಿಸಿದ್ದಾರೆ. ಅಭ್ಯರ್ಥಿಗಳ ಬಗ್ಗೆ ಸರ್ವೇ ಮಾಡಿಸಿ ಎಂದು ಹೇಳಿದ್ದೆ.  

                     ಟಿಕೆಟ್ ಗಾಗಿ ಅರ್ಜಿ ಹಾಕಿದ ಒಟ್ಟು ಅಭ್ಯರ್ಥಿಗಳಲ್ಲಿ 3 ಜನರ ಲಿಸ್ಟ್‌ ಮಾಡಿದೆ ಮೇಲೆ ಒಂದು ಮತಕ್ಷೇತ್ರದಲ್ಲಿ ಸರ್ವೇ ಮಾಡಿಸಿ ಇದರಲ್ಲಿ ಯಾರ ಪರವಾಗಿ ಮತದಾರರು ಒಲವಿದೆಯೋ ಅಂತವರಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೆ. ನನ್ನ ಈ ಅಭಿಪ್ರಾಯದ ವಿರುದ್ಧ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಸಹಿತ ಪರಿಚಯವಿಲ್ಲದ ಹಾಗೂ ಯಾವ ಕಾರ್ಯಕರ್ತರಿಗೂ ಪರಿಚಯವಿಲ್ಲದ  ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಸಣ್ಣ ಪುಟ್ಟ ಜಾತಿಯ ನನ್ನಂತಹ ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಜೊತೆಗೆ ಬರಲು ಹೇಗೆ ಸಾಧ್ಯ?. ಎಂದು ಪಕ್ಷದ ಹಿರಿಯರು ಪರಾಮರ್ಶೆ ಮಾಡಬೇಕು ಎಂದು ಡಾ. ಕುಬೇರ​‍್ಪ ಅವರು ನೀಡಿರುವ ಪ್ರಕಟಣೆಯಲ್ಲಿ ಓತ್ತಾಯಿಸಿದ್ದಾರೆ. ನನ್ನ ಮುಂದಿನ ನಡೆ: ಟಿಕೆಟ್ ಘೋಷಣೆಯಾದ ಕ್ಷಣದಿಂದ ನನ್ನ ಮತ ಕ್ಷೇತ್ರದ ಸಾವಿರಾರು  ಕಣ್ಣೀರು  ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೃಷಿ ಮಾಡಿರುವ ನನಗೆ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ನನ್ನ ಸಾರ್ವಜನಿಕ ಜೀವನಕ್ಕೆ ತ್ಯಾಗ ಮಾಡಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ನನ್ನ ಬೆಂಬಲಿಗರ ಜೊತೆ ಸಭೆ ಮಾಡಿ  ಅವರೆಲ್ಲರ ತೀರ್ಮಾನದಂತೆ ನನ್ನ ಮುಂದಿನ ರಾಜಕೀಯ ನಡೆ ನಿರ್ಧರಿಸಲು ತೀರ್ಮಾನ ಮಾಡಿದ್ದೇನೆ ಎಂದು ಡಾ. ಆರ್‌.ಎಂ. ಕುಬೇರ​‍್ಪ ಅವರು ಪ್ರಕಟಣೆಯಲ್ಲಿ ಸ್ಪಷ್ಟೀಕರಿಸಿದ್ದಾರೆ.