ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಕ್ಷತಾಗೆ ಅಭಿನಂದನೆ

ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಕ್ಷತಾಗೆ ಅಭಿನಂದನೆ Congratulations to Akshata for clearing the CA exam.


ಹುಬ್ಬಳ್ಳಿ  06: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ವಿದ್ಯಾನಗರದ ಬಸವರಾಜ ಕುರಹಟ್ಟಿ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ  ನವದೇಹಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸಿದ ಚಾರ್ಟರ್ಡ್‌ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಕ್ಷತಾ ಮಲ್ಲಿಕಾರ್ಜುನ ನರೇಗಲ್ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ   ಶಾಲು, ಮಾಲಾರೆ​‍್ಣ ಮಾಡಿ,  ಗ್ರಂಥ ನೀಡಿ ಪ್ರೀತಿ, ಆತ್ಮೀಯತೆಯಿಂದ ಆಶೀರ್ವಾದ ರೂಪದಲ್ಲಿ ಹೃದಯ ಪೂರ್ವಕವಾಗಿ ಗೌರವಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ ಶುಭಕೋರಿದರು. ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಪ್ರಮುಖರು, ಪ್ರಾಚಾರ್ಯ ಡಾ. ಮಹೇಶ ಡಿ. ಹೊರಕೇರಿ, ಪತ್ರಕತ9ರು, ಸಾಹಿತಿ ಅರುಣ ಕುಮಾರ ಹಬ್ಬು, ಅವರು ಮಾತನಾಡಿದರು.ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ9ದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಬಸವರಾಜ ಕುರಹಟ್ಟಿ, ಅವರು ವಂದಿಸಿದರು.ಸುಜಯ ಸುರೇಶ ಹೊರಕೇರಿ, ಸೋಹನ ಸುರೇಶ ಹೊರಕೇರಿ, ಜಗದೀಶ ನರೇಗಲ್, ಚನ್ನಬಸಪ್ಪ ಧಾರವಾಡ ಶೆಟ್ಟರ, ಹರೀಶ ದೇಶಪಾಂಡೆ, ಈರಣ್ಣ ಕೋಲಕರ, ಬಾಬಣ್ಣ ಹಡಗಲಿ, ಭಾವನಾ ಕುರಹಟ್ಟಿ, ವಿಜಯಲಕ್ಷ್ಮೀ ಮ.ನರೇಗಲ್, ಅಪೂರ್ವ ನರೇಗಲ್, ಹೇಮಾವತಿ ಕುಂದಗೋಳ, ಗಂಗನಗೌಡ ಪಾಟೀಲ, ರಾಜಣ್ಣ ಮೆಣಸಿನಕಾಯಿ, ಪ್ರವೀಣ ಕುಂದಗೋಳ, ಬಸವರಾಜ ಕುಂದಗೋಳ, ಚಂದ್ರು ಪೂಜಾರ, ಸಿಮಿಕೇರಿ, ದಯಾನಂದ ಬೆಳ್ಳಿಗಟ್ಟಿ, ಬಾಬು ಹಲಾ9ಪೂರ, ಮುಂತಾದವರು ಇದ್ದರು.ಅಕ್ಷತಾ ಮಲ್ಲಿಕಾರ್ಜುನ ನರೇಗಲ್‌ಅವರು ಹುಬ್ಬಳ್ಳಿಯ ಬಡಿಗೇರ ಓಣಿಯ ನಿವಾಸಿಯಾಗಿದ್ದಾರೆ. ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪೂರೈಸಿದ್ದಾಳೆ.ಪಿಯು ಹಾಗೂ ಬಿ.ಕಾಂ.ಪದವಿಯನ್ನುಕೆ.ಎಲ್‌.ಇ ಕಾಮರ್ಸ್‌ ಕಾಲೇಜಿನಲ್ಲಿ ಕಲಿತಿದ್ದಾಳೆ.ಸಿಎ ಪರೀಕ್ಷೆಯ ತರಬೇತಿ ಹಾಗೂ ತಯಾರಿಯನ್ನು ಬೆಂಗಳೂರಿನಲ್ಲಿ ಮಾಡಿದ್ದಾಳೆ.ವಿವಿಧ ವಿಷಯಗಳ ತಜ್ಞರ ಅಅ ಆನ್ಲೈನ್ ಮೂಲಕ ಪಡೆದಿದ್ದಾಳೆ.  ಸಿಎ ಅರ್ಟಿಕಲ್ ಸಿಪ್ನ್ನು ಪಿಡಬ್ಲೂಸಿ ಯಿಂದ ಪಡೆದಿದ್ದಾಳೆ.ಅಕ್ಷತಾ ಮಲ್ಲಿಕಾರ್ಜುನ ನರೇಗಲ್‌ಅವರ ಮುಂದಿನ ಜೀವನ ಭಾರತೀಯ ಲೆಕ್ಕಪರಿಶೋಧಕರ ಸಾಲಿನಲ್ಲಿ ಯಶಸ್ವಿಯಾಗಿ ನೇರವೇರಲಿ ಎಂದು ಹಾರೈಸೋಣ.