ಮುಖ್ಯ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳಿಂದಲ್ಲೇ ಗೊಂದಲ: ನ್ಯಾಯವಾದಿ ಶೆಟ್ಟರ್‌

ಮುಖ್ಯ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳಿಂದಲ್ಲೇ ಗೊಂದಲ: ನ್ಯಾಯವಾದಿ ಶೆಟ್ಟರ್‌ Confusion over widening of main road from officials themselves: Lawyer Shettar

ಮುಖ್ಯ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳಿಂದಲ್ಲೇ ಗೊಂದಲ: ನ್ಯಾಯವಾದಿ ಶೆಟ್ಟರ್‌



ಬ್ಯಾಡಗಿ 13:  ಪಟ್ಟಣದ ಮುಖ್ಯರಸ್ತೆಯಅಗಲೀಕರಣಕ್ಕೆ ಕಳೆದ 14 ವರ್ಷಗಳಿಂದ ನಮ್ಮ ಮನೆಗಳನ್ನು ಉಳಿಸಿಕೊಳ್ಳಲು ಸತತವಾಗಿ ಹೋರಾಟ ಮಾಡಿದ್ದು ನಮಗೆ ಸೂಕ್ತವಾದ ಪರಿಹಾರ ಹಾಗೂ ಅಗಲೀಕರಣದ ಅಳತೆಯು 33 ಅಡಿ ಲಿಖಿತವಾಗಿ ಸಮ್ಮತಿ ಸೂಚಿದಾಗ ನಾವೆಲ್ಲಒಪ್ಪಿಕೊಂಡು ಅಗಲೀಕರಣಕ್ಕೆ ಬೆಂಬಲ ನೀಡಿದ್ದೆವುಆದರೆ ಅಧಿಕಾರಿಗಳು 6 ಮೀಟರ್ 18 ಅಡಿಗಳಷ್ಟು ಸೆಟ್ ಬ್ಯಾಕ್ ಬಿಡಬೇಕೆನ್ನುವ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮಲ್ಲಿಯೇಗೊಂದಲ ಸೃಷ್ಟಿಯಾಗುತ್ತಿರುವುದಾಗಿ ಮುಖ್ಯರಸ್ತೆಯಅಗಲೀಕರಣದ ಅಂಗಡಿ ಮಾಲೀಕ ನ್ಯಾಯವಾದಿ ಸಿದ್ದಲಿಂಗಪ್ಪ ಶೆಟ್ಟರ್ ಆರೋಪಿಸಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು ಕಳೆದ ತಿಂಗಳು ರಸ್ತೆ ಆಗಲಿ ಕರಣ ಸಮಿತಿಯವರು ಹಾಗೂ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸುಮಾರು 6 ದಿನಗಳು ಮುಖ್ಯೆರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಿದ್ದರು. ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ಮಾಜಿ ಶಾಸಕರುಗಳು.ಮುಖೈ ರಸ್ತೆಅಗಲೀಕರಣದ ಪರ ಹೋರಾಟಗಾರರು ಸೇರಿದಂತೆ ಪಟ್ಟಣದ ಸಾರ್ವಜನಿಕರ ಬೇಡಿಕೆಅಂತ ಹೈಕೋರ್ಟ್‌ ನಲ್ಲಿರುವದಾವೇಯನ್ನು 72 ಜನರು ವಾಪಸ್‌ತೆಗೆದುಕೊಂಡಿದ್ದು ಇದೀಗ ಸೆಟ್ ಬ್ಯಾಕ್ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹೊಸ ವಿವಾದ ಸೃಷ್ಟಿಸಿದ್ದಾರೆ ಎಂದರು.ಇದ್ಯಾವ ನ್ಯಾಯ ಸಾರ್ವಜನಿಕರ ಬೇಡಿಕೆಯಂತೆ ಮುಖ್ಯರಸ್ತೆ ಆಗಲಿ ಕಾರಣಕ್ಕೆ ಈಗಾಗಲೇ 33 ಅಡಿಗೆ ನಾವೆಲ್ಲರೂಒಪ್ಪಿಕೊಂಡಿದ್ದು ಇದೀಗ 18 ಅಡಿಗಳಷ್ಟು ಸೆಟ್ ಬ್ಯಾಕ್ ವಿಚಾರ ನಮಗೆ ಮತ್ತೆ ನೋವು ತಂದಿದೆ. ಹದಿನೆಂಟು ಅಡಿಗಳಷ್ಟು ಮತ್ತೆಅಗಲೀಕರಣವಾದರೆ ಮುಖ್ಯೆರಸ್ತೆಯಲ್ಲಿನ ನಮ್ಮೆಲ್ಲರಯಾವುದೇ ಅಂಗಡಿಗಳು ಮನೆಗಳು ಉಳಿಯಲು ಸಾಧ್ಯವಿಲ್ಲ ನಮ್ಮ ವ್ಯಾಪಾರವನ್ನೇ ಬಂದು ಮಾಡಿ ನಾವು ಬೀದಿಗೆ ಬೀಳಬೇಕಾಗುತ್ತದೆ ಅಂದು ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಮತ್ತು ಸಾರ್ವಜನಿಕರು ಸಮ್ಮುಖದಲ್ಲಿ ಕೇಳಿದ 33 ಅಡಿಗಳಷ್ಟು ಜಾಗವನ್ನು ನಾವು ಬಿಡಲುಒಪ್ಪಿಕೊಂಡಿದ್ದೆವು. ಆದರೆ ಇದೀಗ ಈ ರೀತಿ ಮಾಡುತ್ತಿರುವುದು ನಮಗೆ ಯಾವ ನ್ಯಾಯಎಂದು ವರ್ತಕ ಸಂತೋಷ ಹೊಸಂಗಡಿ ಕೇಳಿದರು. ಹೊಸ ವಿವಾದ ಸೃಷ್ಟಿ, ನ್ಯಾಯವಾದಿ ಪ್ರದೀಪ್ ಸದ್ದಲಗಿ ಮಾತನಾಡಿ ಮುಖ್ಯರಸ್ತೆಅಗಲೀಕರಣಕ್ಕೆ 18 ಅಡಿಗಳಷ್ಟು ಸೆಟ್ ಬ್ಯಾಕ್ ಮಾಡುತ್ತಿರುವುದುರಾಜ್ಯದಯಾವುದೇ ಭಾಗದಲ್ಲಿಯೂಇದನ್ನು ಪಾಲನೆ ಮಾಡಲಾಗಿಲ್ಲ, ಹಲವಾರು ಪಟ್ಟಣಗಳಲ್ಲಿ ಸರ್ಕಾರಿ ಕಟ್ಟಡಗಳೇ ಈ ನಿಯಮಗಳನ್ನು ಪಾಲನೆ ಮಾಡಿಲ್ಲ ನಿಯಮಗಳಿಲ್ಲದೆ ಕಟ್ಟಡಗಳನ್ನು ನಿರ್ಮಿಸಲಾಗಿದೆ ಮುಖ್ಯರಸ್ತೆಅಗಲಿಕರಣಕ್ಕೆ ಮುಕ್ತಿ ಸಿಗುವಷ್ಟರಲ್ಲಿಯೇ ಜಿಲ್ಲಾಧಿಕಾರಿಗಳು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಕೂಡಲೇ ಮುಖ್ಯರಸ್ತೆಯನ್ನ ಪರೀಶೀಲನೆ ಮಾಡಿಗೊಂದಲವನ್ನು ತಿಳಿಗೊಳಿಸಿ 33 ಅಡಿಗಳಷ್ಟು ಮಾತ್ರಅಗಲೀಕರಣ ಮಾಡಬೇಕೆಂದು ಹೇಳಿದರು.  

ವರ್ತಕರಾದ ಪರಶುರಾಮ್ ನೀಲಗಿರಿ ಮಾತನಾಡಿ ಈಗಾಗಲೇ ನ್ಯಾಯಾಲಯದಲ್ಲಿ 77 ಮುಖ್ಯರಸ್ತೆಯ ಮಾಲೀಕರುದಾವೇಡಿದ್ದುಅದರಲ್ಲಿ 72 ಮಾಲೀಕರುದಾವನ್ನು ವಾಪಸ್‌ತೆಗೆದುಕೊಂಡಿದ್ದೆವೆಇನ್ನುಐದು ಮಾಲೀಕರುಒಪ್ಪಿಗೆ ನೀಡಿಲ್ಲಅವರನ್ನು ನಾವೆಲ್ಲರೂ ಮನವೂಲಿಸಲು ಯತ್ನ ಮಾಡುತ್ತಿದ್ದೇವೆಆದರೆ ಇದೀಗ ಹುಟ್ಟಿರುವ ವಿವಾದವು ಮತ್ತೆ ಮುಖ್ಯರಸ್ತೆಅಗಲೀಕರಣಕ್ಕೆ ಬ್ರೇಕ್ ಬೀಳುವ ಹಾಗಿದೆ ಹಾಗಾಗಿ ಕೂಡಲೇ ಸ್ಥಳೀಯ ಶಾಸಕರು ಮಾಜಿ ಶಾಸಕರು ಹೋರಾಟ ಸಮಿತಿಯವರುಇದಕ್ಕೆ ನಾಂದಿ ಹಾಡಬೇಕಾಗಿದೆಎಂದು ಹೇಳಿದರು. ಈ ಸಂದರ್ಭದಲ್ಲಿ ವಿಶ್ವನಾಥ್‌ಅಂಕಲ್‌ಕೋಟಿ.ರಾಕೇಶ್‌ಜೈನ್ ಎಂಎಂ ಹೊಸಮನಿ, ಗಂಗಾಧರ ತಿಳುವಳ್ಳಿ, ಮಾರುತಿಜಾದವ್, ಮಾಲ್ತೇಶ್‌ಉಮಾಪತಿ, ಪ್ರಕಾಶ್‌ಅಂಕಲಕೊಟಿ. ಮಾರುತಿಜಾದವ್, ನಂದೀಶ್ ವೀರನಗೌಡ್ರ್‌.ಎಂ.ಎಲ್ ಪಾಟೀಲ್, ಎಂ ಸಿ ಗಡಾದ.ವಿನಾಯಕ್‌ದಾಸರ. ಹಾಗೂ ಅನೇಕ ಮಾಲೀಕರು ಉಪಸ್ಥಿತರಿದ್ದರು.