ಲೋಕದರ್ಶನ ವರದಿ
ಕುಮಟಾ 22: ಮಹಿಳೆಯರಲ್ಲಿಯ ಮೌನ, ಶಾಂತಿ, ಶಕ್ತಿಯಾಗಿ ಹೊರಹೊಮ್ಮಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬಿಜೆಪಿಗೆ ಮಹಿಳೆಯರ ನೈತಿಕ ಶಕ್ತಿ ದೊಡ್ಡ ಬಲ. ಮಹಿಳೆಯರು ಎಂದೂ ಸೋಲಿನ ಮುಖ ಕಾಣ ಬಯಸುವುದಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ಪಟ್ಟಣದ ಬಿಜಪೆಪಿ ಕಚೇರಿಯ ಕಾಯರ್ಾಲಯದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋಚರ್ಾ ಏರ್ಪಡಿಸಿದ್ದ ಕರಾವಳಿ ತಾಲೂಕುಗಳ ಮಹಿಳಾ ಕಾರ್ಯಕತರ್ೆಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಮಹಿಳೆಯರೆಲ್ಲರು ಜಾಗ್ರತರಾಗಿದ್ದಾರೆ. ಮಹಿಳೆಯರು ಎದ್ದು ನಿಂತಲೆಲ್ಲ ಧನಾತ್ಮಕ ಬದಲಾವಣೆಗಳಾಗಿವೆ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇದೆಲ್ಲವನ್ನು ತಿಳಿದಿರುವ ನಮ್ಮ ಪಕ್ಷ ಮಹಿಳಾ ಮೋಚರ್ಾಗಳನ್ನು ಹುಟ್ಟು ಹಾಕಿದೆಯೇ ಹೊರತು ನಮ್ಮ ಪಕ್ಷದ ಬ್ಯಾನರ್ ಕಟ್ಟಲು ಜನಬೇಕು ಎಂಬ ಉದ್ದೇಶದಿಂದ ಕಾರ್ಯಕತರ್ೆಯರನ್ನಾಗಿ ಸ್ವೀಕರಿಸಲಿಲ್ಲ. ಮಹಿಳೆಯರು ಸಂಘಟಿತರಾದರೆ ಸಾಮಾಜಿಕ ಕ್ರಾಂತಿಯಾಗುತ್ತದೆ. ಮಹಿಳಾ ಆಂದೋಲನಗಳು ನಡೆದಾಗ ನಿಶ್ಚಿತವಾಗಿ ಜಯ ಸಿಕ್ಕಿರುವದು ಇತಿಹಾಸ ಒತ್ತಿ ಹೇಳುತ್ತದೆ.
ಮಹಿಳೆಯರಲ್ಲಿಯ ಕ್ರಾಂತಿ ಎಲ್ಲರಲ್ಲಿ ಜಾಗೃತಿ ಮೂಡಿಸುತ್ತದೆ. ಕತ್ತಿ, ಬಂದೂಕಿನಿಂದ ಆಗದ ಕ್ರಾಂತಿ ಮಹಿಳೆಯರ ಗಟ್ಟಿ ಮನಸ್ಸಿನಿಂದ ಸಾಧ್ಯ. ರಾಮಾಯಣ ಕೌರವ, ಪಾಂಡವರಿಂದ ನಡೆದಿರುವದಲ್ಲ. ಅದು ದ್ರೌಪದಿಯಿಂದ ನಡೆದಿರುವದು. ಹಾಗೆ ರಾಮಾಯಣಕ್ಕೆ ಸೀತೆ ಕಾರಣ. ಮಹಿಳೆಯರಲ್ಲಿಯ ಮೌನ, ಶಾಂತಿ, ಶಕ್ತಿಯಾಗಿ ಹೊರಹೊಮ್ಮಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಕಾಂಗ್ರೇಸ್ ಪಕ್ಷದಲ್ಲಿ ರಾಷ್ಟೀಯತೆ ಇಲ್ಲ. ಹೀಗಾಗಿ ಆ ಪಕ್ಷದಿಂದ ಹೊರ ಬಂದವರು ಧರ್ಮ, ದೇಶಕ್ಕಾಗಿ ಬಿಜೆಪಿ ಕಟ್ಟಿರುವದು. ದೇಶ ಆಥರ್ಿಕವಾಗಿ ಬಲೀಷ್ಟಗೊಳ್ಳುತ್ತಿದೆ. ಆದರೆ ನೆಮ್ಮದಿ ಇಲ್ಲದ ಸಮೃದ್ಧಿಯಿಂದ ಯಾವ ಪ್ರಯೋಜನವೂ ಇಲ್ಲ. ಮೋದಿ ಭಯದಿಂದ ವಿರೋಧಿಗಳು ಮಹಾಗಟಬಂಧನದ ಮೂಲಕ ಒಟ್ಟಾಗುತ್ತಿದ್ದಾರೆ. ಅವರೆಲ್ಲ ಮನೆ ಮುರುಕರು. ರಾಜಕೀಯ ಸಿದ್ದಾಂತವಿಲ್ಲದ ಅವರು ಮೂಲೆಗುಂಪಾಗುತ್ತಾರೆ ಎಂದು ಟೀಕಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಬದ್ದತೆ ಇರುತ್ತದೆ. ಅವರು ಕೈಗೆತ್ತಿಕೊಳ್ಳುವ ಎಲ್ಲ ಕೆಲಸಗಳು ಅಚ್ಚುಕಟ್ಟಾಗಿ ನೆರವೇರಿಸುತ್ತಾರೆ. ಮುಂಬರುವ ಲೋಕ ಸಮರಕ್ಕೆ ನಾವೆಲ್ಲರೂ ಸಜ್ಜಾಗಬೇಕಾಗಿದೆ. ಅನಂತಕುಮಾರ ಹೆಗಡೆ ವಿರುದ್ಧ ಕಾಂಗ್ರೇಸ್ ಪಕ್ಷದಲ್ಲಿ ಸ್ಪಧರ್ಿಸುವವರೇ ಇಲ್ಲ. ಹೀಗಾಗಿ ಅವರ ಗೆಲುವಿಗೆ ಯಾವುದೇ ಅಡೆತಡೆಗಳಿಲ್ಲ. ವಿರೋಧಿ ಪಕ್ಷಗಳಲ್ಲಿ ಅವರನ್ನು ಎದುರಿಸುವ ಸಾಮಥ್ರ್ಯವಿಲ್ಲ. ಅಲ್ಲದೇ ಜನತೆ ಕೂಡ ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಕನಸ್ಸನ್ನು ಹೊತ್ತಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಮುಖಂಡ ವಿನೋದ ಪ್ರಭು, ತಾಲೂಕಾಧ್ಯಕ್ಷ ಕುಮಾರ ಮಾರ್ಕಂಡೆ, ಎಸ್ ಎನ್ ಹೆಗಡೆ ಹಾಗೂ ಮಹಿಳಾ ಮೋಚರ್ಾದ ಪದಾಧಿಕಾರಿಗಳಾದ ಆಶಾ ನಾಯ್ಕ, ಆರತಿ ಗೌಡ, ಮಾಲತಿ ಹುಲಸ್ವಾರ ಹಾಗೂ ಇತರರು ಉಪಸ್ಥಿತರಿದ್ದರು. ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ರೇಖಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ತಾಲೂಕಾ ಮಹಿಳಾ ಅಧ್ಯಕ್ಷೆ ನಾಗವೇಣಿ ಹಗಡೆ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯಕದಶರ್ಿಗಳಾದ ಜಯಾ ನಾಯ್ಕ ನಿರೂಪಿಸಿದರೆ, ಅನುಪಮಾ
ವಂದಿಸಿದರು.
ಈ ಸಂದರ್ಭದಲ್ಲಿ 5 ಕರಾವಳಿ ತಾಲೂಕುಗಳ ಸಾವಿರಾರು ಬಿಜೆಪಿ ಮಹಿಳಾ ಕಾರ್ಯಕತರ್ೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.