ಸಮ್ಮೇಳನದ ಲಾಂಛನ, ಪ್ರಚಾರ ಸಾಮಗ್ರಿ ಬಿಡುಗಡೆ
Conference logo and promotional materials released
ಬೀಳಗಿ 15: ಹಲವಾರು ವಿಶೇಷತೆಗಳಿಗೆ ಹೆಸರಾದ ಕೃಷ್ಣಾ ನದಿ ತೀರದ 12ನೇ ಶತಮಾನದ ಶಿವಶರಣರಾದ ಬಕ್ಕೇಶ್ವರರು ನಡೆದಾಡಿದ ಪುಣ್ಯಭೂಮಿಯಲ್ಲಿ ನೆಲಮೂಲ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕಲೆ, ಕಲಾವಿದರನ್ನು ಪೋಷಿಸಲು ಕನ್ನಡ ಜಾನಪದ ಸಮ್ಮೇಳನವು ಜರುಗುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಯಲಿದೆ ಎಂದು ಬಕ್ಕೇಶ್ವರ ಮಠದ ಬಕ್ಕಯ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಾಡಗಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ, ಮಹಿಳಾ ತಾಲೂಕು ಘಟಕ, ವಲಯ ಘಟಕ ಬಾಡಗಿ ಹಾಗೂ ಬಾಡಗಿ ಗ್ರಾಮಸ್ಥರ ಸಹಯೋಗದಲ್ಲಿ ಡಿಸೆಂಬರ್ 19 ರಂದು ಜರುಗಲಿರುವ ‘ಬೀಳಗಿ ತಾಲೂಕು ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಲಾಂಛನ ಮತ್ತು ಪ್ರಚಾರ ಸಾಮಗ್ರಿಗಳ ಬಿಡುಗಡೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಬೇರು ಈ ಗ್ರಾಮದಲ್ಲಿರುವುದರಿಂದ ಕನ್ನಡ ಜಾನಪದ ಸಮ್ಮೇಳನವು ಅರ್ಥಪೂರ್ಣವಾಗಿ ಹಿರಿಯ ಜಾನಪದ ಕಲಾವಿದ ಪುಂಡಲೀಕಪ್ಪ ಗುಂ. ಗಾಣಿಗೇರ ಸರ್ವಾಧ್ಯಕ್ಷತೆಯಲ್ಲಿ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ನಡೆಯಲಿದೆ. ಸಮ್ಮೇಳನದ ಯಶಸ್ವಿಗೆ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀಮಠದ ಪೂಜ್ಯರು, ಗ್ರಾಮಸ್ಥರು ಶ್ರಮಿಸುತ್ತಿದ್ದಾರೆಂದು ಹೇಳಿದರು.
ನಮ್ಮ ಗ್ರಾಮೀಣ ಪರಿಸರದ ಜಾನಪದ ಕಲೆಗಳು ಇಂದಿನ ಟಿವಿ, ಸಿನಿಮಾ, ಡಿಜಿಟಲ್ ಮಾಧ್ಯಮಗಳ ನಡುವೆ ಸಿಲುಕಿ ಒಂದಿಷ್ಟು ಮರೆಯಾದಂತೆ ಕಂಡರೂ, ಜಾನಪದ ಕಲೆಗಳು ಘಮಗುಟ್ಟುವ ಹೂವಾಗಿ ನಮ್ಮನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಿವೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ ಅವು ಬಾಡದಂತೆ ಪೋಷಿಸುವ, ಕಲಾವಿದರಿಗೆ ವೇದಿಕೆ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಬಕ್ಕೇಶ್ವರ ಮಠದ ಶಿವಾನಂದ ಸ್ವಾಮೀಜಿ, ಸಂಗಯ್ಯ ಸ್ವಾಮೀಜಿ, ಶಶಿಧರಶಾಸ್ತ್ರಿ ಹಿರೇಮಠ, ಬಸಯ್ಯಶಾಸ್ತ್ರಿ ಹಿರೇಮಠ, ಪ್ರಾಚಾರ್ಯ ಡಾ. ಎಸ್. ಕೆ. ಬಂಗಾರಿ, ಕಜಾಪ ತಾಲೂಕಾಧ್ಯಕ್ಷ ಬಸವರಾಜ ನಾಯ್ಕ, ಎಂ. ಎಂ. ಗೌಡನ್ನವರ, ಲಕ್ಷ್ಮಣ ಮೊಖಾಶಿ, ವಿಠ್ಠಲ ಕರಿಗಾರ, ಶಿವಪ್ಪ ಗುರಾಣಿ, ಲಕ್ಷ್ಮಣ ಕುಸ್ತಿ, ಸುರೇಶ ಜೀರ, ಹುಸೇನಸಾಬ ರಾಜಪಾಲೆ, ರವೀಂದ್ರ ಜೀರ, ಭೀಮಪ್ಪ ಅಗಸರ, ಶಕುಂತಲಾ ದೇಸಾಯಿ ಮತ್ತಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 