ಮೀಸಲಾತಿ ಸಮೀಕ್ಷೆ ಜವಾಬ್ದಾರಿಯಿಂದ ನಡೆಸಿ: ಇ.ಓ ಭಾರತಿ ಚಲುವಯ್ಯ
Conduct reservation survey responsibly: EO Bharathi Chaluvaiah
ಮೀಸಲಾತಿ ಸಮೀಕ್ಷೆ ಜವಾಬ್ದಾರಿಯಿಂದ ನಡೆಸಿ: ಇ.ಓ ಭಾರತಿ ಚಲುವಯ್ಯ
ದೇವರ ಹಿಪ್ಪರಗಿ 31: ಗೌರವಾನ್ವಿತ ನ್ಯಾಯಮೂರ್ತಿ ಡಾ. ಎಚ್. ಎನ್. ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಕಾರ್ಯವನ್ನು ಗಣತಿದಾರರು ಹಾಗೂ ಮೇಲ್ವಿಚಾರಕರು ಬಹಳಷ್ಟು ಜವಾಬ್ದಾರಿತದಿಂದ ತಮಗೆ ವಹಿಸಿದ ಸಮೀಕ್ಷೆ ಕಾರ್ಯವನ್ನು ಮಾಡಬೇಕು ಎಂದು ಇ.ಓ ಭಾರತಿ ಚಲುವಯ್ಯ ಹೇಳಿದರು. ಪಟ್ಟಣದ ಕೆ.ಜಿ.ಎಸ್. ಶಾಲೆ ಮತಗಟ್ಟೆ ಸಂಖ್ಯೆ 28, 29, 30ಕ್ಕೆ ಶನಿವಾರದಂದು ಭೇಟಿ ನೀಡಿ ಸಮೀಕ್ಷೆ ಕಾರ್ಯದ ಬಗ್ಗೆ ಗಣತಿದಾರರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಕುಟುಂಬ ಈ ಸಮೀಕ್ಷೆಯಿಂದ ಹೊರಗೂಳಿಯಬಾರದು.
ಪ್ರತಿ ಕುಟುಂಬವು ಈ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಗಣತಿದಾರರು ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಪ್ರತಿಶತ 100ಕ್ಕೆ 100ರ ರಷ್ಟು ಸರ್ವೆ ಕಾರ್ಯ ಪೂರ್ಣಗೊಳ್ಳಬೇಕು ಎಂದು ಹೇಳಿದರು ಹಾಗೂ ಆನ್ಲೈನ್ ಮೂಲಕ ಹೊಸ ಜಾತಿ ಸಮೀಕ್ಷೆಯಲ್ಲಿ ಸೇರಿಸಿ ಕೊಳಲು ಅವಕಾಶ ನೀಡಲಾಗಿದೆ ಅದರ ಸದುಪಯೋಗ ಪಡೆದುಕೊಳ್ಳಲು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಾ.ಪಂ. ಸಹಾಯಕ ನಿರ್ದೇಶಕರು ಉದ್ಯೋಗ ಖಾತ್ರಿ ಶಾಂತಗೌಡ ನ್ಯಾಮಣ್ಣವರ, ತಾ.ಪಂ ಯೋಜನಾಧಿಕಾರಿ ಶ್ರೀನಿವಾಸ ಪವಾರ, ತಾಂತ್ರಿಕ ಸಹಾಯಕರು ಸಿದ್ದು ಕಾಂಬಳೆ, ಗಣತಿ ದಾರರಾದ ಜಿ.ಎಸ್. ಬಿರಾದಾರ, ಮಹಾನಂದ ಕುಂಬಾರ, ಬಿ.ಎಸ್. ಗಬ್ಬೂರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 