ಅಶೋಕ ವೃತ್ತದಲ್ಲಿ ವೆನೆಜುವೆಲಾ ಮೇಲಿನ ಅಮೆರಿಕನ್ ಸಾಮ್ರಾಜ್ಯಶಾಹಿಗಳ ಮಿಲಿಟರಿ ದಾಳಿಯನ್ನು ಖಂಡಿಸಿ
Condemn the military attack by American imperialists on Venezuela at Ashoka Circle
ಕೊಪ್ಪಳ 05: ನಗರದ ಅಶೋಕ ವೃತ್ತದಲ್ಲಿ ವೆನೆಜುವೆಲಾ ಮೇಲಿನ ಅಮೆರಿಕನ್ ಸಾಮ್ರಾಜ್ಯಶಾಹಿಗಳ ಮಿಲಿಟರಿ ದಾಳಿಯನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಎಡ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ವೆನುಜುವೆಲಾ ದೇಶದ ಜನರೊಂದಿಗೆ ನಾವಿದ್ದೇವೆ ಎಂದು ಘೋಷಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ’ಯುದ್ಧೋನ್ಮಾದದಲ್ಲಿ ಮುಳುಗಿರುವ ಅಮೆರಿಕನ್ ಸಾಮ್ರಾಜ್ಯಶಾಹಿಗಳು ವೆನೆಜುವೆಲಾ ಮೇಲೆ ನಡೆಸಿರುವ ಅತ್ಯಂತ ಹೇಯ ಹಾಗೂ ಮಾನವತೆಯ ವಿರೋಧಿ ಮಿಲಿಟರಿ ದಾಳಿಯನ್ನು ಖಂಡಿಸಸೋಣ ಎಂದರು. ಇಲ್ಲಿ ಎಡ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಈ ಆಕ್ರಮಣದ ವಿರುದ್ಧ ಧ್ವನಿ ಎತ್ತಿದ್ದು ಸ್ವಗತಾರ್ಹ.
ಈ ದಾಳಿ ಕೇವಲ ವೆನೆಜುವೆಲಾದ ಮೇಲಿನ ಆಕ್ರಮಣವಲ್ಲ; ಇಡೀ ಲ್ಯಾಟಿನ್ ಅಮೆರಿಕದ ಸ್ವಾಯತ್ತತೆ, ಜನತಂತ್ರ ಮತ್ತು ಸ್ವತಂತ್ರ ಅಸ್ತಿತ್ವದ ಮೇಲೆ ನಡೆದ ದಾಳಿಯಾಗಿದೆ ಎಂದು ಹೇಳಿದರು. ಸಿಪಿಐ ಎಂಎಲ್ ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ. ಎಚ್. ಪೂಜಾರ ಮಾತನಾಡಿ ’ವೆನೆಜುವೆಲಾದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದಲೇ ಅಮೆರಿಕನ್ ಸಾಮ್ರಾಜ್ಯಶಾಹಿಗಳು ನಿರಂತರವಾಗಿ ರಾಜಕೀಯ, ಆರ್ಥಿಕ ಹಾಗೂ ಈಗ ಮಿಲಿಟರಿ ಹಸ್ತಕ್ಷೇಪ ನಡೆಸುತ್ತಿದ್ದಾರೆ.
ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸಿ ತಮ್ಮ ಕೈಗೊಂಬೆ ಆಡಳಿತಗಳನ್ನು ಹೇರುವ ಈ ನೀತಿ ಹೊಸದಲ್ಲ’ ಎಂದರು. ಎಸ್.ಯು.ಸಿ.ಐ(ಸಿ) ಯ ಶರಣು ಗಡ್ಡಿ ಮಾತನಾಡಿ ’ಲ್ಯಾಟಿನ್ ಅಮೆರಿಕದ ಇತಿಹಾಸವೇ ಅಮೆರಿಕದ ಈ ಸಾಮ್ರಾಜ್ಯಶಾಹಿ ದೌರ್ಜನ್ಯಗಳ ಜೀವಂತ ಸಾಕ್ಷಿಯಾಗಿದೆ. ಈ ಮಿಲಿಟರಿ ದಾಳಿ ಅಂತರರಾಷ್ಟ್ರೀಯ ಕಾನೂನುಗಳಿಗೆ, ರಾಷ್ಟ್ರಗಳ ಸ್ವಾಯತ್ತತೆಗೆ ಹಾಗೂ ವಿಶ್ವಶಾಂತಿಯ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಶಾಂತಿ ಮತ್ತು ಮಾನವ ಹಕ್ಕುಗಳ ಹೆಸರಿನಲ್ಲಿ ಯುದ್ಧ ಸಾರುವ ಅಮೆರಿಕದ ದ್ವಂದ್ವ ನೀತಿ ಜಗತ್ತಿನ ಜನರ ಮುಂದೆ ಮತ್ತೊಮ್ಮೆ ಬಯಲಾಗಿದೆ.
ಯುದ್ಧದಿಂದ ನಾಶವಾಗುವುದು ಸಾಮಾನ್ಯ ಜನರ ಜೀವನ; ಲಾಭ ಪಡೆಯುವುದು ಆಯುಧ ವ್ಯಾಪಾರಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳೇ ಎಂಬ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ. ಈ ಅಪರಾಧಿಕ ದಾಳಿಯ ವಿರುದ್ಧ ದೇಶದ ಹಾಗೂ ಜಗತ್ತಿನ ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ, ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ಶಕ್ತಿಗಳು ಐಕ್ಯರಾಗಿ ಎದ್ದು ನಿಲ್ಲಬೇಕು. ದಾಳಿಗೊಳಗಾದ ವೆನೆಜುವೆಲಾದ ಜನರೊಂದಿಗೆ ನಿಂತು, ಅಮೆರಿಕನ್ ಸಾಮ್ರಾಜ್ಯಶಾಹಿ ಪಡೆಗಳು ಲ್ಯಾಟಿನ್ ಅಮೆರಿಕದಿಂದ ತಕ್ಷಣ ಹಿಂದಕ್ಕೆ ಸರಿಯಬೇಕು ಎಂದು ಒತ್ತಾಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಎಡ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕೊಪ್ಪಳ ವೆನೆಜುವೆಲಾದ ಜನರ ನ್ಯಾಯಸಮ್ಮತ ಹೋರಾಟದೊಂದಿಗೆ ತನ್ನ ಸಂಪೂರ್ಣ ಏಕಾತ್ಮತೆಯನ್ನು ಘೋಷಿಸುತ್ತದೆ.
ಸಾಮ್ರಾಜ್ಯಶಾಹಿ ಯುದ್ಧೋನ್ಮಾದದ ವಿರುದ್ಧ ಜನಹೋರಾಟಗಳನ್ನು ತೀವ್ರಗೊಳಿಸುವ ಮೂಲಕ ಮಾತ್ರ ಶಾಂತಿ, ಜನತಂತ್ರ ಮತ್ತು ಮಾನವೀಯ ಮೌಲ್ಯಗಳನ್ನು ರಕ್ಷಿಸಲು ಸಾಧ್ಯ.ಸಾಮ್ರಾಜ್ಯಶಾಹಿಗಳಿಗೆ ಸೋಲು ಹಿ ಜನರ ಹೋರಾಟಕ್ಕೆ ಜಯ! ಯುದ್ಧಕ್ಕೆ ವಿರೋಧ ಹಿ ಶಾಂತಿಗೆ ಬೆಂಬಲ! ಮಾಡೋಣ ಎಂದರು. ಹೋರಾಟದಲ್ಲಿ ಟಿಯುಸಿಐ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಮಹಾದೇವಪ್ಪ ಮಾವಿನಮಡು ಎನ್ ಸಿ ಎಲ್, ಗವಿಸಿದ್ದಪ್ಪ ಹಲಿಗಿ, ಎಐಯುಕೆಎಸ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ಪಿಯುಸಿಎಲ್ ಮಹಾಂತೇಶ ಕೊತಬಾಳ,ಮೌನೇಶ್ ಮ್ಯಾಗಳಮನಿ, ಗಿಣಿಗೇರ ನಾಗರೀಕ ಹೋರಾಟ ಸಮಿತಿ ಹನುಮಂತ ಕಟಿಗಿ, ಶಿವಪ್ಪ ಜೆಲ್ಲಿ, ಮಂಜುನಾಥ ಕವಲೂರು, ಕವಿಯತ್ರಿ ಪುಷ್ಪಲತಾ ಏಳುಬಾವಿ ಇತರರು ಪಾಲ್ಗೊಂಡರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 