ನಕಲಿ ದಾಖಲೆಗಳನ್ನು ನೀಡಿ ಸಂದ್ಯಾ ಸುರಕ್ಷಾ ಮತ್ತು ವಿಶೇಷಚೇತನರ ಮಾಶಾನನ ಪಡೆಯುತ್ತಿರುವದನ್ನು ಖಂಡಿಸಿ
Condemn Sandhya Suraksha and the Special Needs Department for obtaining protection by providing fak
ನಕಲಿ ದಾಖಲೆಗಳನ್ನು ನೀಡಿ ಸಂದ್ಯಾ ಸುರಕ್ಷಾ ಮತ್ತು ವಿಶೇಷಚೇತನರ ಮಾಶಾನನ ಪಡೆಯುತ್ತಿರುವದನ್ನು ಖಂಡಿಸಿ
ಹಾವೇರಿ 1: ಮಾನ್ಯ ತಾಲೂಕು ದಂಡಾಧಿಕಾರಿಗಳು ಹಾವೇರಿ ರವರ ಮುಖಾಂತರ ಮಾನ್ಯ ಉಪವಿಭಾಗಾಧಿಕಾರಿಗಳು ಹಾವೇರಿ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಜಿಲ್ಲಾ ಅಧ್ಯಕ್ಷರು ಮನವಿ ನೀಡಿ ಮಾತನಾಡಿ ಹಾವೇರಿ ಜಿಲ್ಲಾದ್ಯಂತ ನಕಲಿ ದಾಖಲೆಗಳನ್ನು ಸರ್ಕಾರಕ್ಕೆ ನೀಡಿ ಸಂದ್ಯಾ ಸುರಕ್ಷಾ ಮತ್ತು ವಿಶೇಷಚೇತನರ ಮಾಶಾಶನ ಪಡೆಯುತ್ತಿದ್ದು ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ ಮಾನ್ಯರೇ 2018-19 ನೇ ಸಾಲಿನಿಂದ 2024 ರವರೆಗೆ ಸರ್ಕಾರಕ್ಕೆ ನಕಲಿ ದಾಖಲೆಗಳನ್ನು ನೀಡಿ ಈ ಮಾಶಾಸನ ಪಡೆಯುತ್ತಿರುವವರಿಗೆ ಸರ್ಕಾರದಿಂದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಅದರಲ್ಲಿ ಜಿಲ್ಲಾ ವಿಭಾಗೀಯ ಅಧಿಕಾರಿಗಳು ಶ್ರವಣದೋಷ ತಜ್ಞರು, ಅಂಧತ್ವ ತಜ್ಞರು, ಮಾನಸಿಕ ತಜ್ಞರು ಹಾಗೂ ಕೀಲು ಎಲುಬು ಮತ್ತು ಮೂಳೆ ತಜ್ಞರು ಹಾಗೂ ವಯಸ್ಸಿನ ದೃಢೀಕರಣ ನೀಡುವ ತಜ್ಞರು ಒಳಪಟ್ಟಂತೆ ಸಮಿತಿ ರಚನೆ ಮಾಡಿ 2018-2024 ರವರೆಗೆ ಆಗಿರುವ ವಿಶೇಷಚೇತನರು ಮತ್ತು ಸಂದ್ಯಾಸುರಕ್ಷದಡಿ ಮಾಶಾಸನ ಪಡೆಯುತ್ತಿರುವವರನ್ನು ಪರೀಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ವಿಶೇಷಚೇತನರು ಮತ್ತು ಸಂದ್ಯಾ ಸುರಕ್ಷದಡಿ ಅರ್ಜಿ ಸಲ್ಲಿಸಿದಾಗ ನೀಡಿರುವ ದಾಖಲೆಗಳನ್ನು ಕುಲಂಕೂಷವಾಗಿ ಪರೀಶೀಲನೆ ಮಾಡದೇ ಮಂಜೂರಾತಿ ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಮತ್ತು ಅಕ್ರಮ ಎಸಗಿರುವ ತಪ್ಪಿತಸ್ತ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಒಂದು ವೇಳೆ ಒಂದು ತಿಂಗಳ ಒಳಗಾಗಿ ಸಮಿತಿ ರಚನೆ ಮಾಡಿ ನಕಲಿ ಫಲಾನುಭವಿಗಳನ್ನು ಕಂಡು ಹಿಡಿದು ನಿಜವಾದ ಫಲಾನುಭವಿಗಳಿಗೆ ನ್ಯಾಯಒದಗಿಸಿಕೊಡಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಹಶೀಲ್ದಾರ ಕಾರ್ಯಾಲಯದ ಎದುರುಗಡೆ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಮಾನ್ಯ ತಹಶೀಲ್ದಾರರ ಮೂಲಕ ಮಾನ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಬದಲ್ಲಿ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಮರಾಠೆ, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾಬಾಯಿ ಲಮಾಣಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಖಲಂದರ ಎಲೆದಹಳ್ಳಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಯುಸೂಫ ಸೈಕಲಗಾರ, ಜಿಲ್ಲಾ ಜಂಟಿ ಕಾರ್ಯದರ್ಶಿ ಈರ್ಪ ಅಂಗಡಿ, ಹಾವೇರಿ ತಾಲೂಕು ಅಧ್ಯಕ್ಷ ರಾಜೇಸಾಬ ಮಾನೆಗಾರ, ಹಿರೇಕೆರೂರ ತಾಲೂಕು ಅಧ್ಯಕ್ಷ ಪ್ರಕಾಶ ಡೊಂಬರ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷ ರಾಮಚಂದ್ರ್ಪ ಹಿಂಡಸಗಟ್ಟಿ, ಶಿಗ್ಗಾಂವ್ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ಬ್ಯಾಡಗಿ ತಾಲೂಕು ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಹಾವೇರಿ ಮಹಿಳಾ ತಾಲೂಕು ಅಧ್ಯಕ್ಷ ನಾಗಮ್ಮ ಕಾಳೇರ,
ಮೆಹಮೂದ ಮುಲ್ಲಾ, ದಾದಾಪೀರ ಮಲ್ಲಾಡದ, ರೇಷ್ಮಾ ಬೀರಬ್ಬಿ ಅನ್ನಪೂರ್ಣ ಅರಿಕೇರಿ, ದೇವರಾಜ ತಳವಾರ, ರವಿ ಮಾಮನಿ, ಹೊನ್ನೂರಸಾಬ ಕೊಪ್ಪಳ, ಮಹಾವೀರ ಹಳ್ಳಿಯವರ, ದೇವೆಂದ್ರ ಹಾನಗಲ್ಲ, ಅಬ್ದುಲಖಾದರ ಕೊಲ್ಲಾಪೂರ ರಜಾಕ ಪುರದಗೇರಿ, ಅಜ್ಮತುಲ್ಲಾ ಎಲೆದಹಳ್ಳಿ. ಇನ್ನೂ ಮುಂತಾದವರು ಉಪಸ್ಥಿತರಿದ್ದರು
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 