ಶ್ರೀ ಅಯ್ಯಪ್ಪ ಸ್ವಾಮಿ ಮಹೋತ್ಸವದ ಸಮಾರೋಪ
Conclusion of the Sri Ayyappa Swamy Mahotsava
ಬೆಳಗಾವಿ 26: ಇಲ್ಲಿನ ನಾನಾವಾಡಿಯ ಆಶ್ರಯ ಕಾಲೋನಿಯ ಶ್ರೀ ಅಯ್ಯಪ್ಪ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಕಳೆದ ಡಿಸೆಂಬರ್ 21 ರಿಂದ ಆರಂಭವಾಗಿರುವ 54ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹೋತ್ಸವವು ಮುಂಬರುವ ಭಾನುವಾರ ಸಮಾರೋಪಗೊಳ್ಳಲಿದೆ.
ಡಿ. 21 ರಂದು ಧ್ವಜಾರೋಹಣ ನಡೆದ ಬಳಿಕ ಪ್ರತಿದಿನ ಬೆಳಿಗ್ಗೆ ಉಷಾ ಪೂಜೆ ಮತ್ತು ಬೆಳಿಗ್ಗೆ 7 ರಿಂದ 11 ರವರೆಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಹಾಗೆಯೇ ಪ್ರತಿದಿನ ಸಂಜೆ 5 ರಿಂದ 7 ರವರೆಗೆ ವಿಶೇಷ ಪೂಜೆಗಳು ಜರುಗುತ್ತಿವೆ.
ಶನಿವಾರದ (ಡಿಸೆಂಬರ್ 27) ಕಾರ್ಯಕ್ರಮಗಳು: ನಾಳೆ ಶನಿವಾರ ಸಂಜೆ 5 ರಿಂದ 7 ಗಂಟೆಯವರೆಗೆ ಅರ್ಚನೆ, ಸಂಜೆ 5:30 ರ ನಂತರ ಭಕ್ತಿಗೀತೆ ಗಾಯನ ನಡೆಯಲಿದೆ. ಸಂಜೆ 6:30 ಕ್ಕೆ ಮಿಲಿಟರಿ ಮಹಾದೇವ ದೇವಸ್ಥಾನದಿಂದ ರಥದ ಮೂಲಕ ’ತಾಳಪೊಲಿ’ ಮೆರವಣಿಗೆ ಹೊರಡಲಿದೆ. ನಂತರ ರಾತ್ರಿ 8:30 ಕ್ಕೆ ಕೇರಳದ ಕಣ್ಣೂರಿನಿಂದ ಆಗಮಿಸಿದ ತಂಡದಿಂದ ’ಚೆಂಡೆಮೇಳ’ ಹಾಗೂ ಭಕ್ತಾದಿಗಳ ಭವ್ಯ ಮೆರವಣಿಗೆ ನಡೆಯಲಿದೆ.
ಭಾನುವಾರದ (ಡಿಸೆಂಬರ್ 28) ಸಮಾರೋಪ: ಮಹೋತ್ಸವದ ಸಮಾರೋಪವು ಭಾನುವಾರ ನಡೆಯಲಿದ್ದು, ಅಂದು ಬೆಳಿಗ್ಗೆ 6 ಗಂಟೆಗೆ ಉಷಾ ಪೂಜೆ, ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12 ರವರೆಗೆ ’ಪಡಿ ಪೂಜೆ’ ಮತ್ತು ಮಧ್ಯಾಹ್ನ 12:30 ರ ನಂತರ ಮಹಾಪ್ರಸಾದ ವಿನಿಯೋಗವಿರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ಕಮಿಟಿಯ ಪರವಾಗಿ ವಿನಂತಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 