ಲೋಕದರ್ಶನ ವರರಿ
ಹಳಿಯಾಳ: ಮುಂಗಾರು ಮಳೆ ಆರಂಭವಾಗುವುದಕ್ಕಿಂತ ಮುಂಚೆ ಹಳಿಯಾಳ ಪಟ್ಟಣದಾದ್ಯಂತ ಸ್ವಚ್ಛತಾ ಆಂದೋಲನದ ಅಂಗವಾಗಿ ಆಡಳಿತ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಶ್ರಮದಾನ ಹಮ್ಮಿಕೊಳ್ಳುವ ಬಗ್ಗೆ ಮಂಗಳವಾರ ತಾಲೂಕ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀಮರ್ಾನ ಕೈಗೊಳ್ಳಲಾಗಿದೆ.
ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ವಚ್ಛತೆಯ ಬಗ್ಗೆ ತಾವು ಕೈಗೊಂಡಿರುವ ಕ್ರಮದ ಬಗ್ಗೆ ಪುರಸಭೆಯ ಇಂಜಿನೀಯರ್ ಜಿ.ಆರ್. ಹರೀಶ ಹಾಗೂ ನೈರ್ಮಲ್ಯಾಧಿಕಾರಿ ಪರಶುರಾಮ ಶಿಂಧೆ ವಿವರಿಸಿದರು. ಪೌರಕಾಮರ್ಿಕ ಸಿಬ್ಬಂದಿಗಳ ಕೊರತೆಯ ನಡುವೆ ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಿಸುವ ಕಾರ್ಯ ಮಾಡಲು ಪುರಸಭೆ ಪ್ರಯತ್ನಿಸುತ್ತಿದೆ. ಸರಕಾರದ ನಿಯಮಾವಳಿಗಳಂತೆ ಹೆಚ್ಚುವರಿ ಕಾಮರ್ಿಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಪಟ್ಟಣದಲ್ಲಿ ಒಟ್ಟು 120 ಕಿ.ಮೀ. ಚರಂಡಿಯಿದ್ದು ಈ ಪೈಕಿ 70 ಕಿ.ಮೀ. ಯಷ್ಟು ಚರಂಡಿಯಲ್ಲಿ ಅಲ್ಲಲ್ಲಿ ಸಮಸ್ಯೆ ಉದ್ಭವಿಸದಂತೆ ಸ್ವಚ್ಛತೆಯ ಕೆಲಸ ಮಾಡಲಾಗಿದೆ. ಮಳೆಗಾಲದಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಈಗಲೇ ಪ್ರಯತ್ನಿಸಲಾಗುತ್ತದೆ. ನಾಗರಿಕರಿಂದ ಮನೆಗಳಿಂದ ಹಸಿಕಸ ಹಾಗೂ ಒಣಕಸ ಎಂದು ಪ್ರತ್ಯೇಕವಾಗಿ ಬೇರ್ಪಡಿಸಿ ಪಡೆದಿರುವ ಕಸವನ್ನು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುತ್ತಮುತ್ತಲ ಇತರ ಊರುಗಳಿಗೆ ಹೋಲಿಸಿದರೆ ಹಳಿಯಾಳ ಪಟ್ಟಣವು ಸ್ವಚ್ಛತೆಯಲ್ಲಿ ಉತ್ತಮವಾಗಿದ್ದು ಈ ಸ್ವಚ್ಛತೆಯ ಪರಿಸರ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಸಭೆ ಅಭಿಪ್ರಾಯ ಪಟ್ಟಿತು. ಊರು ದಿನೇ-ದಿನೇ ಅಭಿವೃದ್ಧಿ ಪಥದತ್ತ ಹೊರಟಿದೆ. ಇಂತಹ ಸಂದರ್ಭದಲ್ಲಿ ಬಝಾರ ರಸ್ತೆ, ಬಸ್ ನಿಲ್ದಾಣ ಮಾರ್ಗ ಮೊದಲಾದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಓಡಾಟ ಹಾಗೂ ಕೆಲ ಬೀದಿಬದಿ ಅಂಗಡಿಕಾರರ ಅಸಹಕಾರದಿಂದ ಸುಗಮ ಸಂಚಾರ ಕಷ್ಟಕರವಾಗಿದ್ದು, ಇದರಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಈ ಅವ್ಯವಸ್ಥೆ ಸರಿಪಡಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಬಿಡಾಡಿ ದನಗಳು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರರು ಪುರಸಭೆಯವರು ಬಿಡಾಡಿ ದನಗಳಿಗೆ ಒಂದೆಡೆ ಕೂಡಿ ಹಾಕುವಂತಾಗಲು ಕೊಂಡವಾಡೆ ವ್ಯವಸ್ಥೆ ಮಾಡುವಂತೆ ಪುರಸಭೆಗೆ ಸೂಚಿಸಿದರು.
ಸ್ವಚ್ಛತಾ ಆಂದೋಲನದ ಅಂಗವಾಗಿ ಪ್ರತಿ ಕಾಯರ್ಾಲಯದವರು ತಮ್ಮ ಪ್ರಾಂಗಣದ ಒಳಗಡೆ ಹಾಗೂ ಹೊರಗಡೆ ಸ್ವಚ್ಛತೆಯನ್ನು ಮಾಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಜೂನ್ 7 ರಿಂದ ಪ್ರತಿದಿನ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಸ್ವಚ್ಛತಾ ಶ್ರಮದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕು. ಕೆಲ ಕೆರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಖಾಸಗಿಯವರ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ತೆರವುಗೊಳಿಸುವಂತೆ ಆಯಾ ನಿವೇಶನದ ಮಾಲೀಕರಿಗೆ ಪುರಸಭೆಯಿಂದ ನೊಟೀಸ್ ನೀಡಬೇಕು. ಇಲ್ಲದಿದ್ದರೆ ದಂಡ ಹಾಕುವ ಬಗ್ಗೆ ಎಚ್ಚರಿಸಬೇಕು ಎಂದು ಸಭೆ ಠರಾಯಿಸಿತು.
ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಪುರಸಭೆ ಸದಸ್ಯರಾದ ಶಾಂತಾ ಹಿರೇಕರ, ಸಂಗೀತಾ ಜಾಧವ, ಸಂತೋಷ ಘಟಕಾಂಬ್ಳೆ, ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಯಲ್ಲಪ್ಪಾ ಕೆಸರೇಕರ, ನವೀನ ಕಾಟಕರ, ಪ್ರಭಾಕರ ಗಜಾಕೋಶ, ಶಮೀಮಬಾನು ಜಂಬುವಾಲೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಹಿಟ್ಟಣಗಿ, ಸಾರಿಗೆ ಘಟಕದ ವ್ಯವಸ್ಥಾಪಕ ಲೇಶಪ್ಪಾ ರಾಠೋಡ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿದರ್ೇಶಕ ಡಾ. ಕೆ.ಎಂ. ನದಾಫ, ಪಿಡಬ್ಲ್ಯೂಡಿಯ ಇಂಜಿನೀಯರ್ ಸುದರ್ಶನ ಹೊನ್ನಾವರ, ಸಹಾಯಕ ಕೃಷಿ ನಿದರ್ೇಶಕ ನಾಗೇಶ ನಾಯ್ಕ, ಹಿರಿಯ ನಾಗರಿಕರಾದ ಶ್ರೀಕಾಂತ ಹೂಲಿ, ಡಿ.ಎಂ. ಸಾವಂತ, ಶಿವಾನಂದ ಶೆಟ್ಟಿ, ಗಣಪತಿ ಗಂಗಾಧರ, ಕಮಲ್ ಸಿಕ್ವೇರಾ, ಜೀಜಾಮಾತಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಕನರ್ಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷ ಚಂದ್ರಕಾಂತ ದುವರ್ೆ, ಲಯನ್ಸ್ ಕ್ಲಬ್ನ ಅಧ್ಯಕ್ಷ ಮಹಾಂತೇಶ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು.
ಡಿಜೆ ಸದ್ದಿನ ಕಿರಿಕಿರಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧಾರ
ಇತ್ತೀಚಿನ ದಿನಗಳಲ್ಲಿ ವಿವಿಧ ಮೆರವಣಿಗೆಗಳಲ್ಲಿ ಡಿಜೆ ವಾದ್ಯದ ಕರ್ಕಶ ಧ್ವನಿ ಕೇಳಿಬರುತ್ತಿದ್ದು ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಶಬ್ದ ಮಾಲಿನ್ಯದಿಂದ ಊರಿನ ವಾತಾವರಣ ಹದಗೆಡುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಸಭೆಯಲ್ಲಿ ಅನೇಕರು ತಮ್ಮ ಜನಪರ ಆಗ್ರಹ ವ್ಯಕ್ತಪಡಿಸಿದರು. ಈ ಬಗ್ಗೆ ಸಿಪಿಐ ಬಿ.ಎಸ್. ಲೋಕಾಪುರ ಮಾತನಾಡಿ ವಾಸ್ತವಿಕ ಸಂಗತಿಗಳನ್ನು ವಿವರಿಸಿದರು. ಸಾರ್ವಜನಿಕರ ಸಹಕಾರವಿದ್ದರೆ ಈ ಡಿಜೆ ಕಿರಿಕಿರಿಯನ್ನು ಮಟ್ಟ ಹಾಕಬಹುದು ಎಂದು ಸ್ಪಷ್ಟಪಡಿಸಿದರು.
ಕಾರ್ಯಾಲಯಗಳ ಪ್ರಾಂಗಣದ ಒಳ-ಹೊರಗೆ ಅವರವರೇ ಸ್ವಚ್ಛತೆ ಮಾಡುವುದು. ಬಝಾರ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಡಿಜೆ ಶಬ್ದಮಾಲಿನ್ಯ ತಡೆಗಟ್ಟುವುದು. ಬಿಡಾಡಿ ದನಗಳನ್ನು ಕೊಂಡವಾಡೆಗೆ ಹಾಕುವುದು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ಮಾಡುವುದನ್ನು ಸಭೆಯಲ್ಲಿ ನಿರ್ಣಯಿಸಲಾಯಿತು.