ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ: ಪರೀಶೀಲನೆ
Complaints to Lokayukta officials, visit to Sub-Registrar's office: Review
ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ: ಪರೀಶೀಲನೆ
ಹುಕ್ಕೇರಿ 08: ಹುಕ್ಕೇರಿ ಮತ್ತು ಸಂಕೇಶ್ವರ ಉಪನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ಪ್ರತ್ಯೇಕ ಎರಡು ಆಸ್ತಿಗಳನ್ನು ಖರೀದಿ ಮತ್ತು ಮಾರಾಟ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪ್ರಕರಣದ ಕುರಿತು ಪರೀಶೀಲನೆ ನಡೆಸಿದ ಘಟನೆ ನಡೆದಿದೆ.
ಗುರುವಾರದಂದು ಉಪ ನೋಂದಣಾಧಿಕಾರಿಗಳ ಕಚೇರಿಗೆ ದೂರುದಾರರೊಂದಿಗೆ ಆಗಮಿಸಿದ ಲೋಕಾಯುಕ್ತ ನ್ಯಾಯಾಧೀಶ ರಾಮನಾಥ ಚವ್ಹಾಣ ಅವರು ಖೊಟ್ಟಿ ದಾಖಲೆಗಳ ಮೂಲಕ ನಡೆದ ಖರೀದಿ ಪ್ರಕ್ರಿಯೆ ಸಮಪೂರ್ಣ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು ತಪ್ಪಿತಸ್ಥರ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಕರಣ:ತಾಲೂಕಿನ ಕುರಣಿ ಗ್ರಾಮದ ದುಂಡಪ್ಪಾ ಶಂಕರ ಕುದನೂರಿ ಅವರ ಮಾಲೀಕತ್ವದ ಸ.ನಂ: 183/1ಬ 1 ಎ.13ಗುಂಟೆ ಜಮೀನನ್ನು ದಿ:18-10-2025ರಂದು ಸಂಕೇಶ್ವರ ಉಪ ನೋಂದಣಿ ಕಚೇರಿಯಲ್ಲಿ ಖೊಟ್ಟಿ ಆಧಾರ ಕಾರ್ಡ ಸಲ್ಲಿಸಿದ ಅದೇ ಕುರಣಿ ಗ್ರಾಮದ ಶಿವರುದ್ರ ಪ್ರಧಾನಿ ಕುದನೂರಿ ಇತನು ನಾನೇ ದುಂಡಪ್ಪಾ ಶಂಕರ ಕುದನೂರಿ ಎಂದು ನೋಂದಣಾಧಿಕಾರಿಗಳ ಮುಂದೆ ಹಾಜರಾಗಿ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದ ಗುರುಸಿದ್ದ ಕೆಂಪಣ್ಣಾ ಮಡಿವಾಳ ಅವರಿಗೆ ಮಾರಾಟ ಮಾಡಿರುವನು. ಇದಕ್ಕೆ ಸಾಕ್ಷಿಯಾಗಿ ನೊಗನಿಹಾಳ ಗ್ರಾಮದ ದಸ್ತಗೀರ ಗುಲಾಬಸಾಬ ಮಕಾನದಾರ ಮತ್ತು ಆನಂದ ಶಂಕರ ಕುಂಬಾರ ಇವರು ಸಹಿ ಮಾಡಿದ್ದಾರೆಂದು ಪಿರ್ಯಾಧಿಯಲ್ಲಿ ನಮೂದಿಸಿರುವನು.
ಈ ಸಂಗತಿ ಇತ್ತೀಚೆಗೆ ನನ್ನ ಮೊಮ್ಮಕ್ಕಳು ಪಹಣಿ(ಉತಾರ) ಪತ್ರಿಕೆ ತೆಗೆಸಲು ಹೋದಾಗ ನಿಮ್ಮ ಜಮೀನು ಮಾರಾಟ ಆಗಿದೆ ಎಂದು ತಿಳಿಸಿದ ಬಳಿಕೆ ನಮಗೆ ಗೊತ್ತಾಗಿದೆ.ಅದರಿಂದ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪಿರ್ಯಾಧಿ ನೀಡಿರುವುದಾಗಿ ಹೇಳಿದನು.
ಇದೇ ತೆರನಾಗಿ ಕುರಣಿ ಗ್ರಾಮದ ಸ.ನಂ: 198/1 1ಎ 17 ಗುಂಟೆ ಜಮೀನ ಮಾಲೀಕಳಾದ ಮಹಾದೇವಿ ಶಿವಪುತ್ರಯ್ಯಾ ಹಿರೇಮಠ ಇವಳ ಬದಲಾಗಿ ಬೇರೊಬ್ಬಳನ್ನು ಹುಕ್ಕೇರಿ ಉಪನೋಂದಣಾಧಿಕಾರಿಗಳ ಮುಂದೆ ಹಾಜರು ಮಾಡಿ ತಾಲೂಕಿನ ಶಿರಢಾಣ ಗ್ರಾಮದ ಗಿರಿಮಲ್ಲಯ್ಯಾ ಕೆಂಪಯ್ಯಾ ನಿರ್ವಾಣಿ ಅವರು ಖೊಟ್ಟಿ ದಾಖಲೆ ಸಲ್ಲಿಸಿ ಖರೀದಿಸಿರುವರು ಎಂದು ಪೋಲಿಸ್ ಮತ್ತು ಲೋಕಾಯುಕ್ತರಿಗೆ ದೂರು ದಾಖಲಾದ ಕಾರಣ ಇಂದು ಲೋಕಾಯುಕ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಹುಕ್ಕೇರಿ ಉಪನೋಂದಣಾಧಿಕಾರಿ ಕಚೇರಿಗಳಿಗೆ ಭೇಟಿ ನೀಡಿರುವರು.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ವಿವಿಧ ಇಲಾಖೆಗಳ ಕಚೇರಿಗಳಿಗೆ ಅನೀರಿಕ್ಷಿತ ಭೇಟಿ ನೀಡಿ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಹುಕ್ಕೇರಿ ತಾಲೂಕಾಮಟ್ಟದ ತಹಶೀಲ್ದಾರ ಕಚೇರಿ, ಸಬ್ ರಜಿಸ್ಟ್ರಾರ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಭೇಟಿ ನೀಡಿ ಕಡತ ಪರೀಶೀಲನೆ ನಡೆಸಿದ್ದಾರೆ.
ನ್ಯಾಯಾಧೀಶ ರಾಮನಾಥ ಚವ್ಹಾಣ, ಬಾಗಲಕೋಟ ಲೋಕಾಯುಕ್ತ ಇನಸ್ಪೆಕ್ಟರ್ ಬಿ.ಎ.ಬಿರಾದಾರ, ಬೆಂಗಳೂರು ಲೋಕಾಯುಕ್ತ ಇನಸ್ಪೆಕ್ಟರ್ ಅಮರೇಶ ಜಯಕರ, ಉಪನೋಂದಣಾಧಿಕಾರಿ ಮಹೇಶ ಬಾನಿಮಠ ಮತ್ತು ಫಿರ್ಯಾದುರಾರು ಹಾಗೂ ಈ ಪ್ರಕರಣವನ್ನು ಲೋಕಾಯುಕ್ತರಿಗೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಕಾಶ ಮೈಲಾಖೆ ಇತರರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 