ಸ್ಪರ್ಧಾತ್ಮಕ ಪರೀಕ್ಷೆಗಳ ಐಎಎಸ್, ಕೆಎಎಸ್, ಐಪಿಎಸ್ ತರಬೇತಿ ಕಾರ್ಯಾಗಾರ
Competitive Exams IAS, KAS, IPS Training Workshop
ಬೀಳಗಿ 06 : ಬದುಕಿನ ಸಾವಿರಾರು ಕನಸುಗಳಿಗೆ ದಾರಿಯನ್ನು ಕಂಡುಕೊಳ್ಳಲು ಮಾರ್ಗದರ್ಶನ ಸಿಗುವ ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಪವಿತ್ರ ಘಟ್ಟ ಎಂದು ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಡಿ. ವಿ. ಗುರುಪ್ರಸಾದ ಸಲಹೆ ನೀಡಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಯ ಸಭಾಭವನದಲ್ಲಿ ಶುಕ್ರವಾರ ಪದವಿ ವಿದ್ಯಾರ್ಥಿಗಳಿಗಾಗಿ ಏರಿ್ಡಸಿದ್ದ ಲೋಕಸೇವ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಐಎಎಸ್, ಕೆಎಎಸ್, ಐಪಿಎಸ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಮಾತನಾಡಿ 33 ವರ್ಷಗಳ ಹಿಂದೆ ಸ್ಥಾಪಿಸಿದ ಈ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರು, ವೈದ್ಯರು, ಇಂಜಿನಿಯರರು, ವಿಜ್ಞಾನಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ ಅದೇ ರೀತಿ ಐಎಎಸ್, ಕೆಎಎಸ್, ಐಪಿಎಸ್ ಅಧಿಕಾರಿಗಳು ಈ ಸಂಸ್ಥೆಯಿಂದ ಹೊರಬರಲಿ ಎನ್ನುವ ಸದುದ್ದೇಶದಿಂದ ಈ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ್ದೆವೆ ಎಂದರು
ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರಾದ ವಾಯ್. ಎಮ್. ಬೊರ್ಜಿ, ಡಿ. ಎನ್. ಪಾಟೀಲ, ಆರ್. ಎಸ್. ಪಾಟೀಲ, ಬಿ. ಪಿ. ಪಾಟೀಲ, ವಿಠ್ಠಲ ನಿಂಬಾಳಕರ, ಶರಣಪ್ಪ ಅಗ್ನಿ, ವಿರೇಂದ್ರ ಪಾಟೀಲ, ಸಂತೋಷ ಜಂಬಗಿ, ಸಿಪಿಐ ಎಚ್ ಬಿ. ಸಣಮನಿ, ಕಾರ್ಯದರ್ಶಿ ಶಂಕರಗೌಡ ಪಾಟೀಲ, ಆಡಳಿತಾಧಿಕಾರಿ ವ್ಹಿ.ಎಸ್.ಮೇಟಿ, ಪ್ರಾಚಾರ್ಯ ಎಲ್. ಎಚ್. ಕತ್ತಿ, ಜಿ. ಆರ್. ಪಾಟೀಲ, ಶ್ರೀಮತಿ ಎಮ್. ಎಸ್. ಕಲಬುರ್ಗಿ, ಶ್ರೀಮತಿ ಎಮ್. ಬಿ. ವೆಂಕಟಾಪೂರ, ಮುಖ್ಯೋಪಾಧ್ಯಾಯ ಆರ್. ಎಸ್. ನಂದವಾಡಗಿ, ಮಲ್ಲಿಕಾರ್ಜುನ ಅಬ್ಬಿಗೇರಿ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 