ರಾಣೆಬೆನ್ನೂರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಸವಾಲು ಮತ್ತು ಅವಕಾಶಗಳು ಕಾರ್ಯಾಗಾರ

ರಾಣೆಬೆನ್ನೂರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಸವಾಲು ಮತ್ತು ಅವಕಾಶಗಳು ಕಾರ್ಯಾಗಾರ Competitive Exams Challenges and Opportunities Workshop in Ranebennur

ರಾಣೆಬೆನ್ನೂರು : ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಸ್ಪರ್ಧಾತ್ಮಕವಾಗಿ ಪ್ರಗತಿ ಸಾಥಿಸುವುದು ಅಗತ್ಯವಿದೆ ಎಂದು ಸಂಪನ್ಮೂಲ ವ್ಯಕ್ತಿ ನವೀನ್ ಕುಮಾರ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.  

 ಅವರು ಗುರುವಾರ ಇಂದಿನ ಬಿ.ಎ. ಜೆ.ಎಸ್‌.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯದ  ಐಕ್ಯೂಎಸಿ, ಧಾರವಾಡ ಕೆರಿಯಾರ್ ಗೈಡೆನ್ಸ್‌ ಮತ್ತು ಪ್ರೆಸ್ ಮೆಂಟ್ ಕೋಶ ಹಾಗೂ ಕ್ಲಾಸಿಕ್ ಕೆ. ಎ. ಎಸ್‌. ಐ. ಎ. ಎಸ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲು ಮತ್ತು ಅವಕಾಶಗಳು ವಿಷಯ ಕುರಿತು ಮಾತನಾಡಿದರು.  

 ಜ್ಞಾನ, ವಿಜ್ಞಾನ, ಮತ್ತು ವಿಫುಲ ತಂತ್ರಜ್ಞಾನ ನಮ್ಮ ಸುತ್ತಲೂ ಆವರಿಸಿಕೊಂಡಿದೆ ಇದರ ಪರಿಣಾಮ ನಮ್ಮಲ್ಲಿ ನಿತ್ಯ ನಿರಂತರ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. ಜ್ಞಾನಾರ್ಜನೆ ಹೊಂದಬೇಕಾದರೆ ಸೂಕ್ಷ್ಮ ಮನಸ್ಸು ಮತ್ತು ಜಾಣ್ಮೆ ಹಾಗೂ ಕಲಿಕೆಯ ಆಸಕ್ತಿ, ನಿರಂತರ ಪಠ್ಯಕ್ರಮಗಳ ವಿಶ್ಲೇಷಣೆ ನಡೆಯುತ್ತಲೇ ಇರಬೇಕಾಗುತ್ತದೆ ಎಂದರು.  

     ಸಾಧನೆಗೆ ಯಾವುದೇ ಮೇರೆ ಇಲ್ಲ. ಸಾಧನೆಗೆ ಗುರಿ ಮತ್ತು ಗೊತ್ತುಗಳು ಮಾತ್ರ ಬೇಕಾಗುತ್ತದೆ ಎಂದು ವಿವರಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಕೇಂದ್ರಗಳು ನಮ್ಮೆಲ್ಲರ ಪರಿಪೂರ್ಣ ಜ್ಞಾನಾರ್ಜನೆ ಹಾಗೂ ಉದ್ದೇಶಿತ ಗುರಿ   ಮುಟ್ಟಲು ರಹದಾರಿಗಳಂತೆ  ಸಹಕಾರಿಗಳಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಲ್ಲಿವೆ ಎಂದರು.  

 ಇನ್ನೊರ್ವ ಸಂಪನ್ಮೂಲ ವ್ಯಕ್ತಿ ರಾವ್ ಸಾಬ್ ಪೂಜಾರ ಅವರು ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾಗತಿಕ ಸವಾಲುಗಳು ಎದುರಿಸುವಿಕೆ ಕುರಿತು ಮಾತನಾಡಿದರು.  

 ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಸುರೇಶ್ ಬಣಕಾರ್ ಅವರು, ಉನ್ನತ ಶೈಕ್ಷಣಿಕ ಪ್ರಗತಿಗೆ ನಿತ್ಯ ನಿರಂತರ ಅಧ್ಯಯನ ಅಗತ್ಯವಿದ್ದು ಆ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಆತ್ಮವಿಶ್ವಾಸದಿಂದ ಮುನ್ನಡೆದು, ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭಾವಂತರ ಮಾಹಿತಿ ಮತ್ತು ಮಾರ್ಗದರ್ಶನ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದರು.  

 ವೇದಿಕೆಯಲ್ಲಿ ಉಪನ್ಯಾಸಕರಾದ ಡಾ. ರಾಜೀವ್ ಆರ್‌. ಎಂ, ಡಾ.ಪುಷ್ಪಾಂಜಲಿ ಕಾಂಬಳೆ, ಪ್ರೊ, ಸಂತೋಷ್ ಭಜಂತ್ರಿ ಸೇರಿದಂತೆ ಮತ್ತು ಇತರೆ ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು. ಕಾವ್ಯಾ ಆರ್‌. ಎಸ್‌. ಸಂಗಡಿಗರು ಪ್ರಾರ್ಥಿಸಿದರು. ಶಿವಲೀಲಾ ಮುಗದೂರ ಸ್ವಾಗತಿಸಿ, ಡಾಕ್ಟರ್ ದೇವರಾಜ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಸಿ, ನಿರೂಪಿಸಿ ವಂದಿಸಿದರು.