ಸಮುದಾಯ ಭವನವು ಧಾರ್ಮಿಕ ಚಟುವಟಿಕೆಗಳ ಕೇಂದ್ರ ಬಿಂದು : ಭರತ್ ಬೊಮ್ಮಾಯಿ

ಸಮುದಾಯ ಭವನವು ಧಾರ್ಮಿಕ ಚಟುವಟಿಕೆಗಳ ಕೇಂದ್ರ ಬಿಂದು : ಭರತ್ ಬೊಮ್ಮಾಯಿ Community hall is the focal point of religious activities: Bharat Bommai

ಲೋಕದರ್ಶನ ವರದಿ 

ಶಿಗ್ಗಾವಿ 26 : ಗ್ರಾಮದ ಸಮುದಾಯ ಭವನಕ್ಕೆ ಅನುದಾನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಂಜೂರು ಮಾಡಿರುವುದು ಗ್ರಾಮಸ್ಥರ ಪಾಲಿಗೆ ಸಂತಸದ ವಿಷಯವಾಗಿದೆ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಹೇಳಿದರು.  ತಾಲೂಕಿನ ಮೋಟಳ್ಳಿ ಗ್ರಾಮದ ಬಸವೇಶ್ವರ ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅಡಿಯಲ್ಲಿ 8 ಲಕ್ಷ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಸಾಂಸ್ಕೃತಿಕ ಸಮುದಾಯ ಭವನವು ಗ್ರಾಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಲಿದೆ.

ಗ್ರಾಮೀಣ ಅಭಿವೃದ್ಧಿಗೆ ಸದಾ ಆದ್ಯತೆ ನೀಡುತ್ತಿದ್ದು, ಗ್ರಾಮಗಳ ಸವಾಂರ್ಗೀಣ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿದೆ ಅಲ್ಲದೇ ಎಲ್ಲರ ಸಹಕಾರದಿಂದ ಮಾದರಿ ಗ್ರಾಮವನ್ನಾಗಿ ನಿರ್ಮಿಸೋಣ ಎಂದರು   ಈ ಸಂದರ್ಭದಲ್ಲಿ ಭಾಜಪ ತಾಲೂಕ ಅಧ್ಯಕ್ಷ ವಿಶ್ವನಾಥ್ ಹರವಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಹರಿ ಕಟ್ಟಿ, ಇರಸಂಗಪ್ಪ ಜೋಳದ, ಚನ್ನವೀರಯ್ಯ ಹಿರೇಮಠ, ಬಸನಗೌಡ ಮೇಲಿನಮನಿ, ನಾಗಪ್ಪ ತುಪ್ಪದ, ರೇಣುಕನಗೌಡ ಪಾಟೀಲ, ರಾಜೇಶ್ ದೊಡ್ಡಮನಿ, ನಿಶಿಮ್ಮಗೌಡ ಪೊಲೀಸ್‌ ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.