ವಿದ್ಯಾರ್ಥಿನಿಯರ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಸಂವಹನ ಕೌಶಲ್ಯ ಅತ್ಯಂತ ಪ್ರಮುಖವಾಗಿದೆ
Communication skills are very important for the growth and development of students
ಮಾಂಜರಿ 07: ವಿದ್ಯಾರ್ಥಿನಿಯರ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಸಂವಹನ ಕೌಶಲ್ಯ ಅತ್ಯಂತ ಪ್ರಮುಖವಾಗಿದೆ. ಜನರೊಂದಿಗೆ ಹೆಚ್ಚು ಸಂವಹನ ಮಾಡಿದಷ್ಟೂ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದು ಕೆಎ??? ಸಂಸ್ಥೆಯ ಚಿಕ್ಕೋಡಿಯ ಬಸಪ್ರಭು ಕೋರೆ ಪದವಿ ಮಹಾವಿದ್ಯಾಲಯದ ಉಪಪ್ರಚಾರರಾದ ಸುಧೀರ ಕೋಠಿವಾಲೆ ಹೇಳಿದರು. ರವಿವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಸಂಸ್ಥೆಯ ಪದವಿ ಮಹಾವಿದ್ಯಾಲಯ ವತಿಯಿಂದ ಇಲ್ಲಿಯ ಶಿವಾಲಯದಲ್ಲಿ ಆಯೋಜಿಸಲಾದ ವೇದಂ 1.0
ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೃತ್ಯ, ಸ್ವರ ಸಂಗಮ, ಪ್ರಬಂಧ,ಮೆಹಂದಿ, ರಸಪ್ರಶ್ನೆ, ರಂಗೋಲಿ, ರೀಲ್ಸ್ ಮೇಕಿಂಗ್ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಪಾಟೀಲ್ ವಹಿಸಿದ್ದರು ಅತಿಥಿಯಾಗಿ ಪ್ರಾಚಾರ್ಯ ಮಾರುತಿ ಕನ್ನಡ ಎ ಕೆ ಪಾಟೀಲ್ ಹಾಜರಿದ್ದರು
ಆಧುನಿಕ ದಿನಮಾನಗಳಲ್ಲಿ ಜ್ಞಾನದ ಜೊತೆಗೆ ಇಂದು ಜಗತ್ತಿನಲ್ಲಿ ಎ. ಐ ಡೇಟಾ ಸೈನ್ಸ್ ಕ್ರಾಂತಿ ಎಬ್ಬಿಸುತ್ತಿದೆ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ವಿಜ್ಞಾನದ ಅವಿಷ್ಕಾರಗಳು ಮುಂದಿನ ಪೀಳಿಗೆಗೆ ಉದ್ಯೋಗಾವಕಾಶ ಸೃಷ್ಟಿಸುವುದರ ಜೊತೆಗೆ ಸ್ಪರ್ಧಾತ್ಮಕ ಕಲಿಕೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ನವೀನ ಕೌಶಲ್ಯ ವೃದ್ಧಿಸಿಕೊಳ್ಳಲು ತಮ್ಮನ್ನು ತೆರೆದುಕೊಳ್ಳಬೇಕು ಎಂದು ಉಪ ಪ್ರಾಚಾರ್ಯ ಸುಧೀರ್ ಕೋಠಿವಾಲೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸುರೇಶ ಎಸ್.ಪಾಟೀಲ ಮಾತುಗಳಲ್ಲಿ ಸಾಕ್ಷರತೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಂತಹ ಸ್ಪರ್ಧೆಗಳನ್ನು ಏರಿ್ಡಸುವ ಮುಖಾಂತರ ಜ್ಞಾನ ಕೌಶಲ್ಯ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಇಂತಹ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರಣ್ಣಾ ಕೋರೆಯವರ ಸಾರತ್ಯದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಸ್ನೇಹಿಯಾಗಿ ಇಂತಹ ಸುವೇದಿಕೆಯ ಮುಖಾಂತರ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಹಾಕಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಹಾಗೂ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉಪಯೋಗ ಎಂದರು.
ಕಾರ್ಯಕ್ರಮದ ಉಪಸ್ಥಿತಿ ಸ್ಥಾನವನ್ನು ಪ್ರಾಚಾರ್ಯರು ಪ್ರೊ.ಎಂ.ಎಸ್. ಕಾನಡೆ ಇವರು ವಹಿಸಿದ್ದರು ಪ್ರೊ.ಎನ್.ಆರ್. ಉಮರಾಣಿ ಸ್ವಾಗತಿಸಿದರು. ಪ್ರೊ. ಎ. ಕೆ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರೊ. ಆರ್. ಎ. ಕೆರಗುಟ್ಟೆ ಸರ್ವರನ್ನು ವಂದಿಸಿದರು. ಪ್ರೊ ಜೆ. ಎ.ಕಾನಡೆ ಪ್ರಶಸ್ತಿ ಪತ್ರ ಗಳ ವಿತರಣಾ ಕಾರ್ಯಕ್ರಮವನ್ನು ನಡೆಸಿದರು ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಪ್ರೊ. ಆರ್.ಎಸ್. ಪೀರಣ್ಣವರ್ ಮತ್ತು ಸೃಷ್ಟಿ ಎಸ್.ಚಿಕಲಿ ಕಾರ್ಯಕ್ರಮವನ್ನು ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 