ಪತ್ರಿಕಾ ಭವನ ನಿರ್ಮಾಣಕ್ಕೆ ಹಾಗೂ ಪ್ರಾಮಾಣಿಕ ಸೇವೆ ಬದ್ಧ : ಪ್ರಕಾಶಕುಂಬಾರ
Committed to building a newspaper house and honest service: Prakash Kumbara
ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕು ಕೇಂದ್ರವಾಗಿದ್ದರೂ ಇದೂವರೆಗೆ ಪತ್ರಿಕಾ ಭವನ ನಿರ್ಮಾಣವಾಗಿಲ್ಲ. ತಮ್ಮ ಅಧಿಕಾರವಧಿಯಲ್ಲಿ ಪತ್ರಿಕಾ ಭವನ ನಿರ್ಮಾಣ ಹಾಗೂ ಪತ್ರಕರ್ತರಿಗೆ ದೊರೆಯುವ ವಿಶೇಷ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಶ್ರಮಿಸಿ ಒದಗಿಸುವುದಾಗಿ ನೂತನ ಅಧ್ಯಕ್ಷ ಪ್ರಕಾಶ ಕುಂಬಾರ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಅವಧಿಗೆ ನೂತನಅಧ್ಯಕ್ಷರಾಗಿ ಪ್ರಕಾಶ ಬಸಪ್ಪ ಕುಂಬಾರ ಹಾಗೂ ಉಪಾಧ್ಯಕ್ಷರಾಗಿ ಮಾಧವಾನಂದ ಪ್ರಭುಕೋಪರ್ಡೆ ಪದಗ್ರಹಣ ಸಂದರ್ಭದಲ್ಲಿ ಮಾತನಾಡಿದರು.
ಉಪಾಧ್ಯಕ್ಷ ಮಾಧವಾನಂದ ಪ್ರಭು ಕೋಪರ್ಡೆ ಮಾತನಾಡಿ, ಹೋಬಳಿ ಮಟ್ಟದಲ್ಲಿ ತಾತ್ಕಾಲಿಕವಾಗಿ ಕಾನಿಪ ಕಚೇರಿಗಳು ಕಾರ್ಯನಿರ್ವಹಿಸಲು ರಾಜಕಾರಣಿಗಳುಸೇರಿದಂತೆ ಅಧಿಕಾರಿಗಳು ನೆರವು ನೀಡಿದ್ದಾರೆ. ಆದರೆ ತಾಲೂಕು ಕೇಂದ್ರವಾಗಿರುವ ನಮ್ಮಲ್ಲಿ ಪತ್ರಕರ್ತರುತೀರಾ ಸಾಧುಗಳಾಗಿದ್ದರಿಂದ ಇಲ್ಲವೇ ಬೇಡುವ ಸ್ವಭಾವದ ಹಿಂಜರಿಕೆಯಿಂದ ಜನಪ್ರತಿನಿಧಿ ಗಳನ್ನಾಗಲೀ, ಅಧಿಕಾರಿಗಳನಾಗಲೀ ಇದೂವರೆಗೆ ನಿವೇಶನವಿದ್ದರೂ ಒತ್ತಾಯಿಸದ್ದರಿಂದ ನಮ್ಮಲ್ಲಿ ಪತ್ರಿಕಾ ಭವನ ಆಗಿಲ್ಲ. ಜನಪ್ರತಿನಿಧಿಗಳ, ಧುರೀಣರು, ದಾನಿಗಳು ನೆರವಿನ ಭರವಸೆ ನೀಡಿದ್ದು, ಸಂಘಕ್ಕೆ ಕಾಯ್ದಿಟ್ಟಜಾಗೆಯಲ್ಲಿ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘದಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಲ್ಲಿಕಾರ್ಜುನ ತುಂಗಳರನ್ನು ಸನ್ಮಾನಿಸಲಾಯಿತು. ಪತ್ರಕರ್ತರಾದ ಶಿವಾನಂದ ಮಹಾಬಲಶೆಟ್ಟಿ, ವಿಶ್ವಜಕಾಡದೇವರ, ಬಸಯ್ಯ ವಸ್ತ್ರದ, ಕಿರಣ ಆಳಗಿ, ಯಶವಂತ ವಾಘಮೋರೆ, ಯಶವಂತ ವಾಜಂತ್ರಿ, ವಿಶ್ವನಾಥ ಆಳಗಿ, ಬಸವರಾಜ ಪಟ್ಟಣ, ಶಂಭುಗುಣಕಿಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 