ಸನ್ಮತಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ದಿನಾಚರಣೆ
Commerce Day celebrated at Sanmati College
ಸನ್ಮತಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ದಿನಾಚರಣೆ
ಕಾಗವಾಡ 05: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಸಹಕಾರ ಶಿಕ್ಷಣ ಸಮಿತಿಯ ಪದವಿ ಪೂರ್ವ ಮತ್ತು ಪದವಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ದಿ. 04 ರಂದು ವಾಣಿಜ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇತ್ತೀಚಿಗೆ ಸುವರ್ಣ ನ್ಯೂಜ್ ಅವರಿಂದ ಹೆಲ್ತಕೇರ್ ಎಕ್ಸಲನ್ಸಿ ಅವಾರ್ಡ ಪಡೆದುಕೊಂಡ ಅಥಣಿಯ ಡಾ. ಸತೀಶ ಮುಗ್ಗನ್ನವರ ಭಾಗವಹಿಸಿ, ಮಾತನಾಡಿ, ಇಂದಿನ ಯುಗದ ವಾಣಿಜ್ಯ, ಹೊಸ ವ್ಯವಹಾರಗಳು, ಡಿಜಿಟಲೈಜೇಶನ್ ಮತ್ತು ಅಂತರರಾಷ್ಟ್ರೀಯ ಮಟ್ಟದ ವ್ಯವಹಾರಗಳ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಪ್ರಾಂಶುಪಾಲ ಬಾಹುಬಲಿ ಬನಜವಾಡೆ ವಾಣಿಜ್ಯ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಸತೀಶ ಮುಗ್ಗನ್ನವರ ಅವರಿಗೆ ಹೆಲ್ತಕೇರ್ ಎಕ್ಸಲನ್ಸಿ ಅವಾರ್ಡ ದೊರೆತದ್ದಾಕ್ಕಾಗಿ ಸನ್ಮಾನಿಸಲಾಯಿತು.
ವಾಣಿಜ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ವಾಣಿಜ್ಯ ಚಟುವಟಿಕೆಗಳಾದ ಲೋಗೋ ನಿರ್ಮಾಣ, ಜಾಹೀರಾತು ಮಾಡುವುದು, ಹೊಸ ವ್ಯವಹಾರಗಳ ವಿಚಾರಗೋಷ್ಠಿ, ವಾಣಿಜ್ಯ ರಸಪ್ರಶ್ನೆಗಳ ಸ್ಪರ್ಧೆಗಳನ್ನು ಹಮ್ಮಿಕೊಂಡು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾ ವಿತರಿಸಲಾಯಿತು.
ಈ ವೇಳೆ ಸನ್ಮತಿ ಸಹಕಾರ ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಸದಸ್ಯರಾದ ನೇಮಗೌಡಾ ಘೇನಪ್ಪಗೋಳ, ಪ್ರಕಾಶ ಘೇನಪ್ಪಗೋಳ, ಪ್ರಾಂಶುಪಾಲ ಬಾಹುಬಲಿ ಬನಜವಾಡೆ, ವಾಣಿಜ್ಯ ವಿಭಾಗದ ಮುಖ್ಯಸ್ಥ ವಿನಾಯಕ ಕಡೋಲೆ, ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ, ಸೇರಿದಂತೆ ಕಾಲೇಜಿನ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸ್ವಾತಿ ಜಟಗೌಡಾ ಸ್ವಾಗತಿಸಿದರು. ಬಿ.ಎಸ್. ಮಿರಗಿ ನಿರೂಪಿಸಿದರು. ಎಸ್.ಆರ್. ಪರುತಗಲ್ಲೆ ಸನ್ಮಾನ ನಡೆಸಿಕೊಟ್ಟರು. ಅಮೃತಾ ಜಾಧವ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 