ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪುಣ್ಯಸ್ಮರಣೆ
Commemoration of Sardar Vallabhbhai Patel
ಯಮಕನಮರಡಿ 15: ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಪುಣ್ಯಸ್ಮರಣೆ ದಿನ ಆಚರಿಸಲಾಯಿತು.
1875 ರಿಂದ 1950 ಅವರ ಕಾಲಾವಧಿ ಆಗಿದ್ದು ಭಾರತದ ಸ್ವಾತಂತ್ರ್ಯದ ಹೋರಾಟದ ಪ್ರಮುಖ ನಾಯಕರು ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವರು ಮತ್ತು ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡಿದ್ದಾರೆ ಬ್ಯಾರಿಸ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ ಗಾಂಧೀಜಿಯವರ ನಗದೀಕರಣ ಆಂದೋಲನದಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ಜೀವನ ಮತ್ತು ಹೋರಾಟಗಳು ಬಾಲ್ಯ ಮತ್ತು ಶಿಕ್ಷಣ ಅಕ್ಟೋಬರ್ 31 1875 ರಂದು ಗುಜರಾತ್ ನಲ್ಲಿ ಜನಿಸಿದರು. ಬ್ಯಾರಿಸ್ಟರ್ ಪದವಿ ಪಡೆದ ನಂತರ ಭಾರತಕ್ಕೆ ಮರಳಿದರು ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಿದ್ದರು. ರೈತರ ಚಳುಗಳಾದ ಖೇಡಾ. ಬಾಡ್ರೋಲಿ. ಮುಂತಾದ ಕಡೆಗಳಲ್ಲಿ ರೈತರ ಚಳುವಳಿ ಭಾಗವಹಿಸಿದ್ದರಿಂದ ಸರ್ದಾರ್ ಎಂಬ ಬಿರುದು ದೊರಕಿತು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಜೈಲುವಾಸ ಅನುಭವಿಸಿದರು.
ಸ್ವಾತಂತ್ರ್ಯ ನಂತರ ಸೇವೆ ರಾಷ್ಟ್ರೀಯ ಏಕೀಕರಣ ಭಾರತದ ಉಕ್ಕಿನ ಮನುಷ್ಯ ಅವರ ಕಠಿಣ ನಿರ್ಧಾರ ರಾಷ್ಟ್ರದ ಬಗೆಗಿನ ಬದ್ಧತೆಯಿಂದಾಗಿ ಭಾರತದ ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡರು. ಸವಿಧಾನ ರಚನಾ ಸಭೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ರಾಷ್ಟ್ರೀಯ ಏಕತಾ ದಿವಸವನ್ನು ಅವರ ಜನ್ಮದಿನವಾದ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ಗುಜರಾತ್ ವಡೋದರಾದಲ್ಲಿ ಅವರ ಸೇವೆಯನ್ನು ಪರಿಗಣಿಸಿ ನಿರ್ಮಿಸಲಾಗಿದೆ. ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಅವರ ನಿಧನದ ನಂತರ ನೀಡಲಾಗಿದೆ. ಇವರು ಡಿಸೆಂಬರ್ 15 1950 ರಂದು ಹೃದಯಾಘಾತದಿಂದ ನಿಧನರಾದರು..
ಎಸ್. ಆರ್.ತಬರಿ ಇವರು ಕಾರ್ಯಕ್ರಮ ನಿರೂಪಿಸುತ್ತ ಮಾತನಾಡಿ ತಮ್ಮ ಪ್ರಾಸ್ತಾವಿಕ ನುಡಿಗಳನ್ನು ತಿಳಿ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷ್ಯಸ್ಥಾನವನ್ನು ಪ್ರಾಚಾರ್ಯರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 