ಕೊಲೊಂಬೋ 22: ಕೊಲೊಂಬೋ ವಿಮಾನ ನಿಲ್ದಾಣದ ಬಳಿ 9ನೇ ಬಾಂಬ್​ ನಿಷ್ಕ್ರಿಯಗೊಳಿಸಿದ ಪೊಲೀಸರು

ಕೊಲೊಂಬೋ 22: ಈಸ್ಟರ್​ ಸಂಭ್ರಮಾಚರಣೆಯಲ್ಲಿದ್ದ ಶ್ರೀಲಂಕಾ ಜನತೆಗೆ ಭಾನುವಾರ ಕರಾಳ ದಿನವಾಗಿದೆ. ಕೊಲೊಂಬೋದ ಮೂರು ಚರ್ಚ್​ ಹಾಗೂ ಐಷಾರಾಮಿ ಹೊಟೇಲ್​ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದಾಗಿ 290ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ಈವರೆಗೆ 24 ಜನರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜೊತೆಗೆ ಕೊಲೊಂಬೋ ಮುಖ್ಯ ವಿಮಾನ ನಿಲ್ದಾಣದ ಬಳಿ  ಸ್ಪೋಟಿಸಲು ಇಟ್ಟಿದ್ದ 9ನೇ ಬಾಂಬ್​ರ ಅನ್ನು ರಕ್ಷಣಾ ಅಧಿಕಾರಿಗಳು ನಿಷ್ಕ್ರಿಯಗೊಳಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಭಾನುವಾರ ರಾತ್ರಿ ಈ ಬಾಂಬ್​ ಪತ್ತೆಯಾಗಿದ್ದ ​ ಸುಧಾರಿತ ಪೈಪ್​ ಬಾಂಬ್​  ಅನ್ನು ವಾಯು ಸೇನಾ ಅಧಿಕಾರಿಗಳು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಇದು ನಾಡಾ ಬಾಂಬ್​ ಎಂದು ಎಎಫ್​ಪಿ ವರದಿ ಮಾಡಿದೆ.

ಭಾನುವಾರ ನಡೆದ ಕರಾಳ ಘಟನೆ ಬಳಿಕ 24 ಜನರನ್ನು ಶಂಕೆ ಮೇಲೆ ಬಂಧಿಸಲಾಗಿದ್ದು, ಇವರೆಲ್ಲಾ ಒಂದೇ ಗುಂಪಿನವರು ಎಂದು ತಿಳಿದುಬಂದಿದೆ.

ಎಂಟರಲ್ಲಿ ಎರಡು ದಾಳಿಗಳು ಆತ್ಮಾಹುತಿ ದಾಳಿಯಿಂದ ನಡೆದಿದೆ. ಒಬ್ಬ ಆತ್ಮಾಹುತಿ ದಾಳಿಕೋರನಿದ್ದ ಮನೆಗೆ ಪೊಲೀಸರು ನುಗ್ಗಿದಾಗ ಆತ ಸ್ಪೋಟಿಸಿಕೊಂಡ ಪರಿಣಾಮ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಾಯವಾಗಿದೆ, ಆದರೂ ಪ್ರಯಾಣಿಕರಿಗೆ ಅನುಕೂಲವಾಗಲು ವಿಮಾನ ಹಾರಾಟ ನಡೆಸಲಾಗುತ್ತಿದೆ. ಇನ್ನು ವಿಮಾನ ನಿಲ್ದಾಣಕ್ಕೆ 4 ಗಂಟೆ ಮುಂಚೆ ಹಾಜರಾಗುವಂತೆ ತಿಳಿಸಲಾಗಿದೆ. ಬಿಗಿ ಭದ್ರತೆಯ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ.

ಶ್ರೀಲಂಕಾವನ್ನು ಬೆಚ್ಚಿಬೀಳಿಸಿದ ಈ ಪೈಶಾಚಿಕ ಕೃತ್ಯವನ್ನು ಯಾರು ನಡೆಸಿದ್ದಾರೆ ಎಂಬುದು ತಿಳಿದುಬಂದಿಲ್ಲ. ಇನ್ನು ಈ ದಾಳಿಯ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತು ಕೊಂಡಿಲ್ಲ.