ಕಾಲೇಜು ವಿದ್ಯಾರ್ಥಿಗಳಿಂದ ಹಿರಣ್ಯಕೇಶಿ ನದಿಯಲ್ಲಿ ಸ್ವಚ್ಛತಾ ಅಭಿಯಾನ
College students launch cleanliness drive in Hiranyakeshi River
ಕಾಲೇಜು ವಿದ್ಯಾರ್ಥಿಗಳಿಂದ ಹಿರಣ್ಯಕೇಶಿ ನದಿಯಲ್ಲಿ ಸ್ವಚ್ಛತಾ ಅಭಿಯಾನ
ಯಮಕನಮರಡಿ 12: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬಡಕುಂದ್ರಿ ಹೊಳೆಮ್ಮ ದೇವಸ್ಥಾನದ ಆವರಣ ಹಾಗೂ ಹಿರಣ್ಯಕೇಶಿ ನದಿ ದಂಡೆಯ ಸ್ವಚ್ಛತಾ ಕಾರ್ಯ ಹಾಗೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾಲೇಜಿನಿಂದ ವಿಶೇಷ ಖಾಸಗಿ ಬಸ್‌ನಲ್ಲಿ ತೆರಳಿದ ಎನ್.ಎಸ್.ಎಸ್.ಸ್ವಯಂ ಸೇವಕರು ನಿಸ್ವಾರ್ಥತೆಯಿಂದ ನದಿಯ ಸುತ್ತಮುತ್ತಿನ ಕಸ ಪ್ಲಾಸ್ಟಿಕ್ ಹಾಗೂ ನದಿಯ ದಂಡೆಯಲ್ಲಿ ಭಕ್ತರು ಎಸೆದಿದ್ದ ಬಟ್ಟೆಗಳನ್ನು ನದಿಗೆ ಇಳಿದು ಸ್ವಚ್ಛಗೊಳಿಸಿದರು.
ಕಾರ್ಯಕ್ಕೆ ಕಾರ್ಯಕ್ರಮ ಅಧಿಕಾರಿ ಬಿ.ಬಿ.ಕೊಡ್ಲಿ ಹಾಗೂ ಸಹ ಕಾರ್ಯಕ್ರಮ ಅಧಿಕಾರಿ ಎಸ್.ಆರ್.ತಬರಿ ಕೈ ಜೋಡಿಸಿ ನದಿ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವಸ್ತ್ರಗಳನ್ನು ಹೊರತೆಗೆದು ಸ್ವಚ್ಛಗೊಳಿಸಿದರು. ಅದರಂತೆ ದೇವಸ್ಥಾನದ ಆವರಣ ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಸ್ವಯಂ ಸೇವಕರ ಈ ಸ್ವಚ್ಛತಾ ಕಾರ್ಯದ ವಿಶೇಷತೆಯನ್ನು ಹೊಳೆಮ್ಮ ದೇವಸ್ಥಾನದ ಟ್ರಸ್ಟಿಗಳು ಹಾಗೂ ಗ್ರಾಮಸ್ಥರು ಕೊಂಡಾಡಿ ಕೃತಜ್ಞತೆ ಸಲ್ಲಿಸಿದರು.
ಈ ವಿಶೇಷ ಸ್ವಚ್ಛತಾ ಕಾರ್ಯಕ್ರಮದ ನಂತರ ಅಲ್ಲಿಗೆ ಬರುವ ಭಕ್ತರಿಗೆ ನದಿಯ ನೀರಿನಲ್ಲಿ ಬಟ್ಟೆಗಳನ್ನು ಬಿಸಾಡದಂತೆ ಹಾಗೂ ನದಿ ತೀರವನ್ನು ಸ್ವಚ್ಛವಾಗಿಡುವಂತೆ ಜಾಗೃತಿ ನೀಡಲಾಯಿತು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಬಿ.ಬಿ.ಕೊಡ್ಲಿ ಹಾಗೂ ಎಸ್.ಆರ್.ತಬರಿ ಸ್ವಯಂ ಸೇವಕರನ್ನು ಹುರಿದುಂಬಿಸುತ್ತ ಸ್ವಚ್ಛತಾ ಕಾರ್ಯ ಯಶಸ್ವಿಗೊಳಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 