ಶೀತ, ಗಾಳಿ, ಚಳಿ: ಮಕ್ಕಳ ಆರೋಗ್ಯಕ್ಕಾಗಿ 2 ಗಂಟೆೆ ಲೇಟ್ ಆಗಿ ಶಾಲೆ ಪ್ರಾರಂಭಿಸಬೇಕು
Cold, windy, chilly: School should start 2 hours late for children's health
ಶೀತ, ಗಾಳಿ, ಚಳಿ: ಮಕ್ಕಳ ಆರೋಗ್ಯಕ್ಕಾಗಿ 2 ಗಂಟೆೆ ಲೇಟ್ ಆಗಿ ಶಾಲೆ ಪ್ರಾರಂಭಿಸಬೇಕು
ವಿಜಯಪುರ20: ವಿಜಯಪುರ ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕಂದಾಯ ಇಲಾಖೆಯ ಸ್ವಾಯತ್ತ ಸಂಸ್ಥೆ) ವಿಜಯಪುರ ಜಿಲ್ಲೆಯಲ್ಲಿ ತೀವ್ರವಾದ ಶೀತಗಾಳಿ ಬೀಡುವ ಸಾಧ್ಯತೆಯಿರುತ್ತದೆ ತಾಪಮಾನ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿರುತ್ತಾರೆ. ಇದರ ಹಿನ್ನೆಲೆ ಸಾರ್ವಜನಿಕರು ಬೆಳಿಗ್ಗೆ ಸೋಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ನಗರದ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಹಮಿದ ಮುಶ್ರೀಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಹಾಗೂ ಬೆಳಿಗ್ಗೆ 7 ಘಂಟೆಗೆ ಪ್ರಾರಂಭವಾಗುವ ಶಾಲೆಯ ಸಮಯವನ್ನು ಬದಲಿಸಿ 2 ಗಂಟೆಗೆ ಲೇಟ್ ಆಗಿ ಪ್ರಾರಂಭಿಸಬೇಕು. ಇದರಿಂದ ಮಕ್ಕಳ ಆರೋಗ್ಯ ಸುಧಾರಿಸಬಹುದು.ಮಕ್ಕಳ ಶಾಲೆಗೆ ಕಳುಹಿಸುವ ಸಲುವಾಗಿ ಪಾಲಕರು ನಸುಕಿನ ಜಾವ 5 ಘಂಟೆಗೆ ಚಳಿಯಲ್ಲಿ ಎದ್ದುಅವರತಯಾರಿಗಾಗಿ ಶ್ರಮಿಸಬೇಕಾಗುತ್ತದೆ. ಮಕ್ಕಳಿಗೆ ತಯಾರು ಮಾಡಿ 7 ಘಂಟೆಗೆ ಬಸ್‌ನಲ್ಲಿ ಕಳುಹಿಸದರೆ ನಸುಕಿನ ಜಾವತುಂಬಾ ಚಳಿ ಇರುವುದರಿಂದ ಮಕ್ಕಳಿಗೆ ಶೀತ ಜಾಸ್ತಿಯಾಗುವ ಸಾಧ್ಯತೆಇರುತ್ತದೆಆದಕಾರಣ ಶಾಲೆಯ ಸಮಯವನ್ನು 2 ಘಂಟೆತಡವಾಗಿ ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿಶ್ರೀನಾಥ ಪೂಜಾರಿ, ಫಯಾಜಕಲಾದಗಿ, ಶಕೀಲ ಸುತಾರ, ಚನ್ನುಕಟ್ಟಿಮನಿ, ತಾಜೀಂಪೀರಜಹಾಗೀರದಾರ, ಹಾಜಿ ಪಿಂಜಾರ, ಸಾಜೀದ ಬಾಗವಾನ, ಬಾಲಾಜಿ ಕಾಂಬಳೆ ಮುಂತಾದವರುಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 