ಕಾರವಾರ 14: ಕರಾವಳಿ ಉತ್ಸವ -2018 ಆಚರಿಸುತ್ತಿರುವುದು ಸ್ವಾಗತಾರ್ಹ. ಕನ್ನಡ ಸಂಸ್ಕೃತಿಯನ್ನು ಮತ್ತು ಕನ್ನಡಿಗರ ಬದುಕಿನ ಶ್ರೀಮಂತಿಕೆಯನ್ನು ಪ್ರದಶರ್ಿಸಲು ಮತ್ತು ಪ್ರವಾಸಿಗರನ್ನು ಆಕಷರ್ಿಸಲು ಇಂಥ ಉತ್ಸವಗಳು ಬೇಕು. ಉತ್ಸವದಲ್ಲಿ ಕಲಾವಿದರಿಗೆ ಅವಕಾಶ ನೀಡುವಾಗ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಪ್ರದೇಶದ ಕನ್ನಡ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕನರ್ಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಬುಧುವಾರ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಹಿಟ್ನಾಳ ಅವರಿಗೆ ಲಿಖಿತ ಮನವಿ ನೀಡಿದ ಅವರು ಗಡಿ ಪ್ರದೇಶವಾದ ಕಾರವಾರದಲ್ಲಿ ಕನ್ನಡದ ವಾತಾವರಣ ಮತ್ತು ಕನ್ನಡ ಭಾಷೆ ಬೆಳೆಸಲು ಕಾರವಾರದ ಕರಾವಳಿ ಉತ್ಸವ ಸಹಕಾರಿಯಾಗಿದೆ. ಹಾಗೆಯೇ ಕರಾವಳಿ ಉತ್ಸವದ ವೇದಿಕೆಯಲ್ಲಿ ಹೊರ ರಾಜ್ಯದ ಕಲಾವಿದರಿಗೆ ಹೆಚ್ಚಿನ ಅವಕಾಶ ಬೇಡ. ರಾಜ್ಯದ ಕಲಾವಿದರಿಗೆ ಹೆಚ್ಚಿನ ಅವಕಾಶ ಇರಲಿ ಎಂದು ಮನವಿ ಮಾಡಿಕೊಂಡರು. ಉತ್ಸವದಲ್ಲಿ ಸ್ಥಳೀಯ ಆಟಗಳು, ಅಡುಗೆ,ವಸ್ತು ಪ್ರದರ್ಶನ, ಕಲಾ ಪ್ರದರ್ಶನಗಳು, ಶ್ವಾನ ಪ್ರದರ್ಶನ ಯಶಸ್ವಿಯಾಗುತ್ತಾ ಬಂದಿವೆ. ಉತ್ಸವದ ನಿಮಿತ್ತು ನೂರಾರು ಪ್ರವಾಸಿಗರು ಕಾರವಾರಕ್ಕೆ ಬರುತ್ತಾರೆ. ಇದರಿಂದ ಪ್ರವಾಸೋದ್ಯಮವೂ ಪ್ರಗತಿಯತ್ತ ಸಾಗಿದೆ. ಕರಾವಳಿ ಉತ್ಸವ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಹಾಗಾಗಿ ಉತ್ಸವವನ್ನು ಅದ್ಧೂರಿಯಾಗಿ ಮಾಡಿ. ರಾಜ್ಯದ ಕಲಾವಿದರಿಗೆ ಹೆಚ್ಚಿನ ಆಧ್ಯತೆ ಇರಲಿ ಎಂದು ಭಾಸ್ಕರ ಹಾಗೂ ಇತರೆ ಪದಾಧಿಕಾರಿಗಳು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ , ಸಲಹೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ವಿಷಯವನ್ನು ತರಲಾಗುವುದು ಎಂದರು.