ಶಿಕ್ಷಕರ ವ್ಯಕ್ತಿತ್ವ ವಿಕಾಸಕ್ಕೆ ಸಹಪಠ್ಯ ಸ್ಪರ್ಧೆ ಸಹಕಾರಿ - ಬಿಇಓ ಮುಜಾವರ

ಶಿಕ್ಷಕರ ವ್ಯಕ್ತಿತ್ವ ವಿಕಾಸಕ್ಕೆ ಸಹಪಠ್ಯ ಸ್ಪರ್ಧೆ ಸಹಕಾರಿ - ಬಿಇಓ ಮುಜಾವರ Co-curricular competition helps in personality development of teachers - BEO Mujawara

              ಇಂಡಿ 08:  ವಿದ್ಯಾರ್ಥಿಗಳಂತೆಯೇ ಶಿಕ್ಷಕರಿಗೂ ಸಹಪಠ್ಯ ಚಟುವಟಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಿದಾ ಅನ್ನಿಸ್ ಮುಜಾವರ ಹೇಳಿದರು. ಸೋಮವಾರದಂದು ಪಟ್ಟಣದ ಗುರುಭವನದಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ 2025-26 ನೇ ಸಾಲಿನ ತಾಲೂಕ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವರ್ಷ ವೀಡೀ ತರಗತಿ ಬೋಧನೆಯಲ್ಲಿ ನಿರತರಾಗುವ ಶಿಕ್ಷಕರು, ತಮ್ಮಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅಭಿವ್ಯಕ್ತಿಗೊಳಿಸಲು ಶಿಕ್ಷಕರ ಕಲ್ಯಾಣ ನಿಧಿಯು ಉತ್ತಮ ಅವಕಾಶ ಕಲ್ಪಿಸಿದೆ. ಶಿಕ್ಷಕರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಶಿಕ್ಷಕರು ನಿರಂತರ ವಿದ್ಯಾರ್ಥಿಗಳಿದ್ದಂತೆ. ಅವರಿಗೆ ಕಲಿಕೆಯೇ ಬಂಡವಾಳ.

            ಇದರಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವುದರಿಂದ ಹೆಚ್ಚು ಕ್ರಿಯಾಶೀಲತೆ ಬೆಳೆಯುತ್ತದೆ. ಇದಕ್ಕೆ ಶಿಕ್ಷಕರ ಸಹಪಠ್ಯ ಸ್ಪರ್ಧೆಗಳು ಸಹಾಯಕವಾಗಿವೆ ಎಂದರು. ನೋಡಲ್ ಅಧಿಕಾರಿ,ಇಸಿಓ ಆನಂದ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ ಟಿ ಪಾಟೀಲ, ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಎಸ್ ವ್ಹಿ ಹರಳಯ್ಯ, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎಚ್ ಕೆ ಮಾಳಗೊಂಡ, ಜಿಲ್ಲಾ ಕಾರ್ಯದರ್ಶಿ ನಿಜಣ್ಣ ಕಾಳೆ,ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಕೋಳೆಕರ, ಜಿಲ್ಲಾಧ್ಯಕ್ಷ ಚಂದ್ರಶೇಖರ ಹಕಾರಿ, ಎಸ್ ಸಿ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಬಿ ಎಂ ವಠಾರ, ಎನ್ ಜಿ ಓ ನಿರ್ದೇಶಕ ರವಿ ಗಿಣ್ಣಿ, ಮಲ್ಲಮ್ಮ ಗಿರಣಿವಡ್ಡರ, ಬಿ ಸಿ ಭಗವಂತಗೌಡರ, ಶಿಕ್ಷಣ ಸಂಯೋಜಕರಾದ ಎನ್ ಪಿ ಪೂಜಾರಿ, ಪವಾಡೆಪ್ಪ ದಳವಾಯಿ, ಬಿ ಆರ್ ಪಿ ಗಳಾದ ಅಶೋಕ ರಾಠೋಡ, ಆಂಜನೇಯ ಸ್ವಾಮಿ ಹೊಸಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಪ್ರಶಾಂತ ತಳವಾರ ನಿರೂಪಿಸಿದರು. ವೈ ಜಿ ಬಿರಾದಾರ ಸ್ವಾಗತಿಸಿದರು.