ಲೋಕದರ್ಶನ ವರದಿ
ಬೆಳಗಾವಿ, 5: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಸ್ವ ಉದ್ಯೋಗ ಆಸಕ್ತ ಮಹಿಳೆಯರಿಗೆ 6 ದಿನಗಳ ಉಚಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭ ದಿ.4ರಂದು ಜರುಗಿತು.
ಕಾರ್ಯಕ್ರಮದ ಮುಖ್ಯ ಅಥಿತಿ ಸ್ಥಾನವನ್ನು ವಹಿಸಿದಂತದ ಶ್ರೀ ವಿಜಯದೇವ ಅಸುಂಡಿ ಕೃಷಿ ಅಭಿವೃದ್ಧಿ ಅಧಿಕಾರಿ, ಕ್ಷೇತ್ರಿಯ ಕಾಯರ್ಾಲಯ, ಸಿಂಡಿಕೇಟ ಬ್ಯಾಂಕ ಬೆಳಗಾವಿ ಇವರು ಮಾತನಾಡುತಾ, ತಾವೆಲ್ಲ 6 ದಿನಗಳ ತರಬೇತಿಯನ್ನು ಪಡೆದಿದ್ದಿರಿ, ತರಬೇತಿಯ ಅವಧಿಯಲ್ಲಿ ತಾವುಗಳು ಹಲವಾರು ವಿಷಯಗಳನ್ನು ತಿಳಿದುಕೊಂಡಿರುವಿರಿ ಆದರೆ ಕೇವಲ ತರಬೇತಿಯನ್ನು ಮಾತ್ರ ಪಡೆದರೆ ಸಾಲದು, ತರಬೇತಿಯಲ್ಲಿ ತಿಳಿಸಿದ ಎಲ್ಲ ವಿಷಯಗಳನ್ನು ನಿಮ್ಮ ನಿಮ್ಮ ಕೆಲಸಕಾರ್ಯಗಳಲ್ಲಿ ಬಳಸಿಕೊಂಡು ತರಬೇತಿಯ ಸದುಪಯೋಗ ಪಡೆಸಿಕೊಳ್ಳಿ, ದೈರ್ಯದಿಂದ ಕಾರ್ಯ ನಿರ್ವಹಿಸಿ, ಸ್ವಾವಲಂಬಿಗಳಾಗಿ ಬದುಕಿ,
ಕಾರ್ಯಕ್ರಮದ ಮತ್ತೋರ್ವ ಅಥಿತಿ ಸ್ಥಾನವನ್ನು ವಹಿಸಿದ ಶ್ರೀ ಪ್ರಭಾಕರ ನಾಯ್ಕ ಯೊಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬೆಳಗಾವಿ ಇವರು ಮಾತನಾಡುತ್ತಾ, ತಾವೆಲ್ಲರೂ ಸಿಂಡ್ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪಡೆದಿರುವಿರಿ, ಶ್ರಮವಹಿಸಿ ಶ್ರದ್ದೆಯಿಂದ ಕೆಲಸಮಾಡಿ, ಕೌಶಲ್ಯ ಅರಿತಂತಹ ವ್ಯಕ್ತಿ ಸ್ವ ಉದ್ಯೋಗ ಮಾಡಬಹುದು ಎಂದು ತಿಳಿಸಿದರು. ಹಾಗೂ ನಿಮ್ಮೊಂದಿಗೆ ಯಾವಾಗಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಾಕಾಲ ನೆರವಿಗೆ ಇದ್ದೇ ಇರುತ್ತೆ. ಆದ ಕಾರಣ ತರಬೇತಿಯ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡ ಮಟ್ಟದ ಉದ್ಯಮಿಗಳಾಗಿ ಬೆಳೆಯಿರಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದಂತಹ ಸಂಸ್ಥೆಯ ನಿದರ್ೇಕರಾದ ಶ್ರೀ ಲಕ್ಷ್ಮಿಕಾಂತ ಪಾಟೀಲ ಇವರು ಮಾತನಾಡುತ್ತಾ ತಾವೆಲ್ಲರೂ 6 ದಿನಗಳ ತರಬೇತಿಯನ್ನು ತುಂಬಾ ಅಚ್ಚುಕಟ್ಟಾಗಿ ಪಡೆದಿರುವಿರಿ, ಆದರೆ ಇಲ್ಲಿಗೆ ನಿಮ್ಮ ಕೆಲಸ ಮುಗಿಯುದಿಲ್ಲ ಹೋರತಾಗಿ ಇಲ್ಲಿಂದ ನಿಮ್ಮ ಕೆಲಸವು ಪ್ರಾರಂಭವಾಗುತ್ತದೆ. ಆದ ಕಾರಣ ತಾವು ವಿನಾಕಾರಣ ದುಂದುವೆಚ್ಚ ಮಾಡದೇ, ನಿವೂ ಉಳಿತಾಯ ಮಾಡುವ ಮನೊಭಾವನೆಯನ್ನು ಬೆಳೆಸಿಕೊಳ್ಳಿ. ಹಾಗೂ ಮುಂದಿನ ದಿನಗಳಲ್ಲಿ ಸಂಸ್ಥೆಯೋದಿಗೆ ಸಂರ್ಪಕದಲ್ಲಿರಿ, ಕೇವಲ ನಿವಷ್ಟೆ ಕೆಲಸ ಮಾಡದೇ ಇತರರಿಗೂ ಕೆಲಸ ನೀಡಿ ಎಂದು ತಿಳಿಸಿದರು. ಆದ ಕಾರಣ ಇಲ್ಲಿ ಕಲಿಸಿದ ಎಲ್ಲಾ ವಿಷಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಅಭಿವೃದ್ಧಿಶೀಲ ವ್ಯಕ್ತಿಯಾಗಿ ಎಂದು ಶುಭಹಾರೈಸಿದರು.
ಕೊನೆಯದಾಗಿ ತರಬೇತಿಯಲ್ಲಿ ಪಾಲ್ಗೊಂಡ ಶಿಭಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು, ನಂತರ ಮುಖ್ಯ ಅಥಿತಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕಿಯಾದ ಶ್ರೀಮತಿ ರಾಜೇಶ್ವರಿ ದೇವಲಾಪೂರ ಇವರು ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಯವರಾದ ಶ್ರೀ ಬಸವರಾಜ ಕುಬಸದ ಅಬ್ಬುಲ್ ರಜಾಕ ಉಪಸ್ಥಿತರಿದ್ದರು.