ವಿದ್ಯುತ್ ಕಂಬ, ಪರಿವರ್ತಕಗಳಿಗೆ ಸುತ್ತಿರುವ ಬಳ್ಳಿ, ಗಿಡಗಂಟಿ ತೆರವುಗೊಳಿಸಿ
Clear the wires and bushes surrounding the electric poles and transformers.
ವಿದ್ಯುತ್ ಕಂಬ, ಪರಿವರ್ತಕಗಳಿಗೆ ಸುತ್ತಿರುವ ಬಳ್ಳಿ, ಗಿಡಗಂಟಿ ತೆರವುಗೊಳಿಸಿ
ಮಾಂಜರಿ 05: ಚಿಕ್ಕೋಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಳೆದೆರಡು ತಿಂಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಬಳ್ಳಿ, ಗಿಡಗಂಟಿಗಳು ಹೇರಳವಾಗಿ ಬೆಳೆದು ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳಿಗೆ ಸುತ್ತಿಕೊಂಡಿದ್ದು, ಅಪಾಯಕ್ಕೆ ಅಹ್ವಾನ ನೀಡುತ್ತಿವೆ.
ಸಂಕೇಶ್ವರ - ಜೇವರ್ಗಿ, ಮುಧೋಳ-ನಿಪ್ಪಾಣಿ ಹೆದ್ದಾರಿ ಬದಿಯ ಹಲವು ವಿದ್ಯುತ್ ಪರಿಕರಗಳಿಗೆ ಬಳ್ಳಿ ಸುತ್ತಿಕೊಂಡಿದೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ -ಇದೆ.
ವಿದ್ಯುತ್ ಪರಿಕರಗಳಿಗೆ ಹಬ್ಬಿದ ಈ ಬಳ್ಳಿ ನೋಡಲು ಅಂದವಾಗಿಯೇ ಕಾಣುತ್ತಿದೆ. ಆದರೆ, ಇದರ ಮೂಲಕ ನೆಲದಲ್ಲಿ ವಿದ್ಯುತ್ ಪ್ರವಹಿಸಿದರೆ ಜನರು-ಜಾನುವಾರುಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.
ದುರಸ್ತಿ ಕೆಲಸಕ್ಕೂ ಕಷ್ಟ: ಚಿಕ್ಕೋಡಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ -ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ಕಂಬಕ್ಕೆ ಮರಗಳು ತಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಇನ್ನೂ ವಿದ್ಯುತ್ ಪರಿಕರಗಳಿಗೆ ಬಳ್ಳಿ ಸುತ್ತಿಕೊಂಡ ಕಾರಣ, ಯಾವುದೇ ದುರಸ್ತಿ ಕಾರ್ಯ ಕೈಗೊಳ್ಳಲು ಹೆಸ್ಕಾಂ ಸಿಬ್ಬಂದಿ ಪರದಾಡುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಳ್ಳಿಯೇ ಜೀವಕ್ಕೆ ಎರವಾಗುವ ಸಾಧ್ಯತೆ ಇದೆ.ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿಕರಗಳು ಹೆದ್ದಾರಿ ಬದಿಯೇ ಇರುವುದರಿಂದ ವಾಹನಗಳ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ. ತ್ವರಿತವಾಗಿ ಇದನ್ನು ತೆರವುಗೊಳಿಸಿ ಸುರಕ್ಷತೆಗೆ ಒತ್ತು ನೀಡಬೇಕು ಎಂಬ ಅಗ್ರಹ ಕೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 