ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಅಧಿಕಾರಿಗಳ ಹಾಗೂ ರೈತರ ಮಧ್ಯೆ ಜಟಾಪಟಿ
Clashes between land acquisition officials and farmers of the Upper Krishna Project
ಇಂಡಿ 23 : ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕೃಷ್ಣಾ ಮೇಲ್ದಂಡೆ ಯೋಜನೆ ಇಂಡಿ ರೈಲ್ವೆ ಸ್ಟೇಷನ್. ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ -3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನವಾಗುವ ಜಮೀನುಗಳಿಗೆ ಒಪ್ಪಂದದ ಐ ತಿರ್ಷ್ಪು ರಚಿಸುವ/ಹೆಚ್ಚಿನ ಪರಿಹಾರ ಧನಕ್ಕಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ರಾಜಿ ಸಂಧಾನ ಸಭೆ ವಿಷೇಶ ಭೂಸ್ವಾಧೀನ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಹಾಗೂ ಇಂಡಿ ಉಪವಿಭಾಗಾಧಿಕಾರಿ ಗುರುಸ್ವಾಮಿ ನೇತೃತ್ವದಲ್ಲಿ ಗ್ರಾಮ ಸಭೆ ಜೋಡಗುಡಿಯಲ್ಲಿ ನಡೆಯಿತು. ಆದರೆ ಸಭೆ ಮೊದಲು ಶಾಂತಿಯುತವಾಗಿ ನಡೆಯುತ್ತಿತ್ತು ಆದರೆ ಸಿಹಿ ಮಾಡಿಕೊಳ್ಳಲು ರೈತರ ಬಳಿ ಬಂದಾಗ ರೈತರು ನಾವು ಸಿಹಿ ಮಾಡಲ್ಲ ನಾವು ಈಗಾಗಲೇ ಕೋರ್ಟ್ ಗೆ ಹೋಗಿದ್ದೆ ಕೋರ್ಟ್ ಆದೇಶ ಏನು ನೀಡುತ್ತದೆ ಅದಕ್ಕೆ ಬಂದ ಎಂದು ರೈತರು ಹೇಳಿದರು.
ಆಗ ವಿಶೇಷ ಭೂಸ್ವಾಧೀನಾಧಿಕಾರಿಗಳ ಜಿಲ್ಲಾ ಅಧಿಕಾರಿಗಳು ಕೊರ್ಟ್ ಪರಿಹಾರ ವಾಪಸ್ ಪಡೆಯಲು ಮುಂದಾದಾಗ ನೀವು ಏನು ಮಾಡುತ್ತಿರಿ ಎಂದ ಹೇಳಿಕೆಗೆ ಬೇಸತ್ತ ರೈತರು ವಿಷೇಶ ಭೂಸ್ವಾಧೀನ ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಲು ಮುಂದಾದರು. ಕೆಲ ಅಧಿಕಾರಿಗಳು ರೈತರನ್ನು ಬೆದರಿಸಲು ಮುಂದಾರು. ಅದರಲ್ಲಿ ಒಬ್ಬ ಅಧಿಕಾರಿ ರೈತರ ಮೇಲೆ ದಬ್ಬಾಳಿಕೆ ಮಾಡಲು ಮುಂದಾದಗ ರೈತ ಪಿತ್ತು ನೆತ್ತಿಗೆ ಏರಿ ಹೊಳೆಯಿತು. ಎಲ್ಲಾ ರೈತರು ಅಧಿಕಾರಿ ಮೇಲೆ ಮುಗಿಬಿದ್ದರು.ಗಲಾಟೆ ಗದ್ದಲದ ನಡುವೆ ಸಭೆ ಅರ್ಧಕ್ಕೆ ಮೊಟಕು ಗೊಳಿಸಲಾಯಿತು.ಆದರೆ ಇದು ಗ್ರಾಮ ಸಭೆಯೋ ಅಥವಾ ರೈತರನ್ನು ಒಂದು ರೀತಿಯಲ್ಲಿ ಬೇದರಿಸುವ ಸಭೆ ಆಗಿದೆ ಎಂಬುದು ತಿಳಿಯದಂತೆ ಆಯಿತು ಈ ಸಭೆ.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 