ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ : ವಿಶ್ವಾಸ ವೈದ್ಯ

ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ : ವಿಶ್ವಾಸ ವೈದ್ಯ Clarification on false news published in newspapers: Vishwas Vaidya

ಸವದತ್ತಿ, 08 : ಪಟ್ಟಣದ ಜಿ. ಜಿ. ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನನಲ್ಲಿ ರೀತಿಯ ಅವ್ಯವಹಾರ ನಡೆದಿದೆ ಎಂದು ನ. 30 ರಂದು ಪತ್ರಿಕೆಗಳಲ್ಲಿ ಬಸವರಾಜ ತಳವಾರ ಅವರು ಮಾಡಿದ ಆಪಾದನೆಗಳಿಗೆ ಸುಳ್ಳು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ ಸ್ಪಷ್ಟಿಕರಣ ನಿಡುತ್ತಿದ್ದೆನೆ ಎಂದು ಶಾಸಕ ವಿಶ್ವಾಸ ವೈದ್ಯ ಅವರು ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು ಈ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಆರ್‌. ಪಿ. ಕೌಜಲಗಿ ಇವರು ಸರಕಾರಿ ಮತ್ತು ಅರೆಸರಕಾರಿ ಶುಲ್ಕವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಾಮಾನುಸಾರ ಪಡೆದು ವಿದ್ಯಾರ್ಥಿಗಳಿಗೆ ರಶೀದಿಗಳನ್ನು ನೀಡಿದ್ದಾರೆ ಹಾಗೇಯೆ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಗ್ರಾಮೀಣ ಮತ್ತು ಬಡ ಮಕ್ಕಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ರೂ.1800 ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರೂ. 2200 ಗಳನ್ನು ಪಡೆದು ವಿದ್ಯಾರ್ಥಿಗಳಿಗೆ ರಶೀದಿ ನೀಡಿ ಸಿಬಿಸಿ ಖಾತೆಗೆ ಜಮೆ ಮಾಡಲಾಗಿದೆ.

ಹಾಗೂ ತುಂಬಾ ಹಣಕಾಸಿನ ತೊಂದರೆ ಇರುವ ವಿದ್ಯಾರ್ಥಿಗಳಿಗೆ ಸಿಬಿಸಿ ಉಪಾಧ್ಯಕ್ಷರೊಂದಿಗೆ ಚರ್ಚಿಸಿ ಸಿಬಿಸಿ ಶುಲ್ಕ ವಿನಾಯಿತಿ ನೀಡಲಾಗಿದೆ ಹೀಗೆ ಜಮೆಯಾದ ಮೊತ್ತವನ್ನು ಶ ಅಮೃತಲಾಲ್ ಚೋಪ್ರಾ ಉಪಾಧ್ಯಕ್ಷರು ಸಿ.ಬಿ.ಸಿ ಹಾಗೂ ಪ್ರಾಚಾರ್ಯರ ಜಂಟಿ ಸಹಿಯೊಂದಿಗೆ ಹಣ ತೆಗೆದು ಕಾಲೇಜಿನ ಸಿಬಿಸಿ ಅವರ ಅನುಮತಿಯೊಂದಿಗೆ ನೇಮಕ ಮಾಡಿಕೊಂಡ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಅವರ ಮಾಸಿಕ ಗೌರವ ಧನ ನೀಡಲು ಹಾಗೂ ಕಾಲೇಜಿನ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. 

ದಿನಪತ್ರಿಗಳಲ್ಲಿ ವರದಿಯಾದ ಅಪಾದನೆಗಳನ್ನು ಕುರಿತು ತಿಳಿಯಲು ಆಗಮಿಸಿದ ಬೆಳಗಾವಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು ಸಿಬಿಸಿ ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಪರೀಶೀಲಿಸಿ ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತಪ್ಪುಗಳು ನಡೆದಿಲ್ಲವೆಂದು ತಿಳಿಸಿದ್ದಾರೆ. ಅಲ್ಲದೇ ಸಿ.ಬಿ.ಸಿ ಉಪಾಧ್ಯಕ್ಷರು ಸಹ ಅದನ್ನು ಮನಗಂಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸವದತ್ತಿಯ ಮಾನ್ಯ ತಹಶೀಲ್ದಾರರು ಮಲ್ಲಿಕಾರ್ಜುನ ಹೆಗನ್ನವರ ಹಾಗೂ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಕಾಲೇಜಿಗೆ ಅನೀರಿಕ್ಷಿತವಾಗಿ ಭೇಟಿ ನೀಡಿ ಎಲ್ಲ ವಿದ್ಯಾರ್ಥಿ ಹಾಗೂ ಉಪನ್ಯಾಸಕರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಶುಲ್ಕ ಪಡೆಯುವ ಹಾಗೂ ಹಣಕಾಸಿನ ವಿಷಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲವೆಂದು ವರದಿಯನ್ನು ನೀಡಿದ್ದಾರೆ ಮತ್ತು ಕಾಲೇಜಿನ ಪ್ರಾಚಾರ್ಯರು ಅತಿಥಿ ಉಪನ್ಯಾಸಕರನ್ನು ಲಭ್ಯವಿದ್ದ ಅರ್ಜಿಗಳ ಆಧಾರದ ಮೇಲೆ ಸಿಬಿಸಿ ಪದಾಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಹತೆ ಹಾಗೂ ಸಾಕಷ್ಟು ಅನುಭವ ಹೊಂದಿದ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡು ಈ ಶೈಕ್ಷಣಿಕ ಅವಧಿಯ ಕೊನೆಯವರೆಗೆ ಅವರ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. 

ಬಡ ವರ್ಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುಂತೆ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗದವರು ಸಾಮಗ್ರಿಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಜೊತೆಗೆ ಹಲವಾರು ದಿನಪತ್ರಿಕೆಗಳನ್ನು ತಂದು ವಿದ್ಯಾರ್ಥಿಗಳಿಗೆ ಓದಲು ಪೂರೈಸಲಾಗುತ್ತದೆ. ಮತ್ತು ಉತ್ತಮ ಗ್ರಂಥಾಲಯದ ವ್ಯವಸ್ಥೆಯನ್ನು ಕಾಲೇಜು ಹೊಂದಿದೆ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತವಾಗಿ ಬೆಳಿಗ್ಗೆ 8.30 ರಿಂದ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ನೀಟ್ / ಜೆಇಇ /ಸಿಇಟಿ ಗೆ ಸಂಬಂಧಿಸಿದಂತೆ ಸಾಕಷ್ಟು ಪುಸ್ತಕಗಳು ಲಭ್ಯಇವೆ. ಪ್ರತಿ ತಿಂಗಳು 2 ಮತ್ತು 4 ನೇ ಶನಿವಾರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬೆಳಗಾವಿ ಜಿಲ್ಲಾ ಪಂಚಾಯತಿಯಿಂದ ನೀಟ್ / ಜೆಇಇ /ಸಿಇಟಿ ಪ್ಯಾಕ್ಟಿಸ್ ಪರೀಕ್ಷೆಗಳನ್ನು ನಡೆಸಿ ಮರು ದಿನವೇ ಫಲಿತಾಂಶವನ್ನು ನೀಡಲಾಗುತ್ತದೆ.

ಈ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಉತ್ತಮ ಫಲಿತಾಂಶ ಹೊಂದಿ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.ವಿಜ್ಞಾನ ವಿಭಾಗದ ನುರಿತ ಉಪನ್ಯಾಸಕರೊಂದಿಗೆ ಚರ್ಚಿಸಿ ಸರಕಾರದಿಂದ ಬಂದ ಅನುದಾನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕಯಂತ್ರದ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಪ್ರಯೋಗಾಲಯಗಳ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ 70 ಕ್ಕಿಂತ ಹೆಚ್ಚು ಬಡ ಮತ್ತು ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿದ್ದು, ಎಸ್‌.ಎಸ್‌.ಎಲ್‌.ಸಿ ಯಲ್ಲಿ ಕಡಿಮೆ ಫಲಿತಾಂಶ ಹೊಂದಿದ 2 ಮತ್ತು 3 ನೇ ಹಂತದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ದಾಖಲಾತಿ ಹೊಂದಿ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ ಕಾಲೇಜು ಉತ್ತಮ ಮೈದಾನ ವ್ಯವಸ್ಥೆ ಹೊಂದಿದ್ದು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪತ್ಯೇತರ, ಎನ್‌.ಎಸ್‌.ಎಸ್‌. ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ.

ಅಲ್ಲದೆ ಸರಕಾರದಿಂದ ತರಲಾಗಿರುವ 1.5 ಕೋಟಿ ಅನುದಾನದ ಅಡಿಯಲ್ಲಿ ಕಾಲೇಜಿನ ಭೌತಿಕ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿ ಇದೆ.ಪ್ರಭಾರಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಆರ್‌.ಪಿ.ಕೌಜಲಗಿ ಇವರು ಪ್ರಭಾರ ವಹಿಸಿಕೊಂಡ ನಂತರ ಕಾಲೇಜಿನಲ್ಲಿ ಸಾಕಷ್ಟು ಭೌತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಮತ್ತು ಸಕಾರಾತ್ಮಕ ಬದಲಾವಣೆಗಳಾಗಿದ್ದು, ಕಾಲೇಜು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ದಯವಿಟ್ಟು ನಮ್ಮ ಸರಕಾರಿ ಕಾಲೇಜು ಯಾವುದೇ ಹಣಕಾಸಿನ ಅವ್ಯವಹಾರಗಳು ಇಲ್ಲದೇ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ. ವಾಯ್‌. ಎಂ. ಯ್ಯಾಕೋಳ್ಳಿ, ಆರ್‌. ಎಸ್‌. ಭಜಂತ್ರಿ, ಮಾಜಿ ಸದಸ್ಯ ಎಸ್‌. ಎಸ್‌. ನವಲಗುಂದ, ಕಾಲೇಜು ಸಿಬ್ಬಂದಿಯಾದ ಎಸ್‌. ಬಿ. ಕಿವಡಿ, ಆರ್‌. ಸಿ. ಬಾರಾಟಕ್ಕೆ, ಎಸ್‌. ಎಂ. ಪಾಟೀಲ, ವಿ. ಎಸ್‌. ಹಿರೇಮಠ, ಎಸ್‌. ಕೆ. ರಾಕ್ಷೆ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.