ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಳಕ್ಕೆ ನಗರಸಭಾಧ್ಯಕ್ಷ ಪಟೇಲ್ ಭೇಟಿ ವೀಕ್ಷಣೆ
ಕೊಪ್ಪಳ 22: ನಗರದ 27ನೇ ವಾರ್ಡಿನ ಬಿಟಿ ಪಾಟೀಲ್ ನಗರ್ ಬಡಾವಣೆ ಯಲ್ಲಿನ ರಸ್ತೆ ಉಪ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಸ್ಥಳಕ್ಕೆ ಬುಧವಾರ ಕೊಪ್ಪಳ ನಗರಸಭಾಧ್ಯಕ್ಷರಾದ ಅಮ್ಜದ್ ಪಟೇಲ್ ಭೇಟಿ ಮಾಡಿ ಕಾಮಗಾರಿಯನ್ನು ವೀಕ್ಷಿಸಿ ಪರೀಶೀಲನ ಕಾರ್ಯ ನಡೆಸಿದರು.
ನಂತರ ಸಂಬಂಧಿಸಿದ ಗುತ್ತಿಗೆದಾರರಿಗೆ ಮತ್ತು ನಗರಸಭೆ ಅದ್ದಿಕಾರಿಗಳಿಗೆ ಸೂಚನೆ ನೀಡಿ ಗುಣಮಟ್ಟದ ಕಾಮಗಾರಿ ಮಾಡಬೇಕು ನಿಗದಿತ ಅವಧಿ ಒಳಗೆ ಪೂರ್ಣಗೊಳಿಸಬೇಕು ಎಂದು ಅಮ್ಜದ ಪಟೇಲ್ ತಿಳಿಸಿದರು,ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಕಿರಿಯ ಅಭಿಯಂತ ಸೋಮಲಿಂಗಪ್ಪ, ಗುತ್ತಿಗೆದಾರ ಮಹೇಶ್ ಹಳ್ಳಿಗುಡಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.