ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಳಕ್ಕೆ ನಗರ ಸಭಾಧ್ಯಕ್ಷ ಪಟೇಲ್ ಭೇಟಿ : ವೀಕ್ಷಣೆ

ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಳಕ್ಕೆ ನಗರ ಸಭಾಧ್ಯಕ್ಷ ಪಟೇಲ್ ಭೇಟಿ : ವೀಕ್ಷಣೆ City Council Chairman Patel visits road asphalting work site: Observation

           ಕೊಪ್ಪಳ 14: ನಗರಸಭೆಯ 31ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಗವಿಮಠ ರಸ್ತೆಯಿಂದ ನಂದಿನಗರ ಬಡಾವಣೆಗೆ ಹೋಗುವ ಮುಖ್ಯರಸ್ತೆ ಡಾಂಬರಿಕರಣ ಮಾಡಬೇಕೆಂಬ ಆ ಭಾಗದ ಜನರ ಬಹುದಿನದ ಬೇಡಿಕೆ ಯಾಗಿದ್ದು ಸದರಿ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ರವಿವಾರದಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಕಾಮಗಾರಿ ಸ್ಥಳಕ್ಕೆ ಭೇಟಿ ಮಾಡಿ ವೀಕ್ಷಣೆ ಮಾಡಿದರೂ, ಶೀಘ್ರ ಬರಲಿರುವ ಇಲ್ಲಿ ಐತಿಹಾಸಿಕ ಪ್ರಸಿದ್ಧ ದಕ್ಷಿಣ ಭಾರತದ ಕುಂಭಮೇಳ ವೆಂಬ ಖ್ಯಾತಿ ಪಡೆದ ಶ್ರೀ ಗವಿಮಠದ ಮಹಾ ರಥೋತ್ಸವ ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಾಗೂ ಅಲ್ಲೇ ಇರುವ ಕಾಲೇಜು ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಈಗ ಸದರಿ ರಸ್ತೆ ಡಾಂಬರೀಕರಣ ಕಾಮಗಾರಿಯಿಂದ ಎಲ್ಲಾ ರೀತಿಯ ಅನುಕೂಲ ವಾಗಲಿದೆ, ಸದರಿ ರಸ್ತೆ ಡಾಂಬರೀಕರಣ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು ಮತ್ತು ನಿಗದಿತ ಅವಧಿ ಒಳಗೆ ಪೂರ್ಣಗೊಳಿಸಿ ಬರುವ ಜಾತ್ರಾ ಸಂದರ್ಭದಲ್ಲಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಮತ್ತು ಇಲಾಖೆ ಅಧಿಕಾರಿಗಳಿಗೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಅವರೊಂದಿಗೆ ನಗರಸಭೆಯ ಕಿರಿಯ ಅಭಿಯಂತ ಸೋಮಲಿಂಗಪ್ಪ , ಯುವ ನಾಯಕ ರಮೇಶ್ ಕವಲೂರು ,ನಗರಸಭೆಯ ಸದಸ್ಯ ಚೆನ್ನಪ್ಪ ಕೊಟ್ಯಾಳ, ಮತ್ತು ಆಸೀಫ್ ಹಣಗಿ  ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,