ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು: ಕಲಬುರ್ಗಿ
ಸಿಂದಗಿ,26: 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದರೂ ಕೂಡಾ ರಾಜ್ಯದ ಸುಗಮ ಕಾರ್ಯನಿರ್ವಹಣೆಗೆ ಯಾವುದೇ ಪರಿಣಿತ ಮತ್ತು ರಾಜಕೀಯ ಅಧಿಕಾರವನ್ನು ಭಾರತ ಹೊಂದಿದಿಲ್ಲಾ. ಆ ಹೊತ್ತಿಗೆ, 1935 ರ ಭಾರತ ಸರ್ಕಾರದ ಕಾಯಿದೆಯು ಮೂಲಭೂತವಾಗಿ ಆಡಳಿತಕ್ಕೆ ತಿದ್ದುಪಡಿ ಮಾಡಲ್ಪಟ್ಟಿತು, 1950 ಜನೇವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಅನ್ವಯಿಸಿಕೊಂಡು ಗಣರಾಜ್ಯೋತ್ಸವವೆನಿಸಿಕೊಂಡಿತು. ಅಲ್ಲಿಂದೀಚೆಗೆ ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲ್ಪಡುತ್ತಿದೆ. ಎಂದು ಬಸವದಳದ ಶಿವಾನಂದ ಕಲಬುರ್ಗಿ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿ, 299 ಸದಸ್ಯರನ್ನು ಹೊಂದಿರುವ ಡಾ.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಮೊದಲ ಸಭೆಯು ಡಿಸೆಂಬರ್ 1946 ರಲ್ಲಿ ಸಂವಿಧಾನ ಸಭೆಯನ್ನು ರಚಿಸಲಾಯಿತು. 2 ವರ್ಷ 11 ತಿಂಗಳು 18 ದಿನಗಳಲ್ಲಿ ಇದು ಅಂತಿಮವಾಗಿ 26 ನವೆಂಬರ್ 1949 ರಂದು ಪೂರ್ಣಗೊಂಡಿತು. ಇದನ್ನು 26 ಜನವರಿ 1950 ರಂದು ದೇಶಾದ್ಯಂತ ಜಾರಿಗೆ ತರಲಾಯಿತು. ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು ಎಂದರು.
ಪತ್ರಕರ್ತ ಪಂಡಿತ ಯಂಪೂರೆ, ಗುರು ತಾರಾಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಗುರು ಬಸರಕೋಡ, ಎಂ.ಎಸ್.ಅರ್ಜುಣಗಿ, ಸಿದ್ದಬಸವ ಕುಂಬಾರ, ದಾನಪ್ಪ ಜೋಗುರ, ಜಗದೀಶ ಕಲಬುರ್ಗಿ, ಬಸವರಾಜ ಗುಗ್ಗರಿ, ಎಂ.ಎಸ್ ಅಂಗಡಿ, ಶಿವಕುಮಾರ ಶಿವಶಿಂಪಿ, ಆರ್.ಆರ್.ಪಾಟೀಲ, ಸಂಗಣ್ಣ ಬ್ಯಾಕೋಡ ಸೇರಿದಂತೆ ಅನೇಕರಿದ್ದರು.