ಮುಗಳಿಹಾಳ ಗ್ರಾಮದಲ್ಲಿ ಅತಿ ವಿಜೃಂಭಣೆಯಿಂದ ಕ್ರಿಸ್ ಮಸ್ ಆಚರಣೆ
Christmas celebrated with great pomp in Mugalihala village
ಯರಗಟ್ಟಿ 26: ಸಮೀಪದ ಮುಗಳಿಹಾಳ ಗ್ರಾಮದ ಚರ್ಚ್ ನಲ್ಲಿ ಗುರುವಾರ ನಡೆದ ಕ್ರಿಸ್ ಮಸ್ ಪ್ರಾರ್ಥನೆಯನ್ನು ಸ್ಥಳೀಯ ಸಭಾಪಾಲಕರಾದ ಪಾಸ್ಟರ್ ಮಾರ್ಕ್ ಖಣದಾಳ ಇವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಈ ಕ್ರಿಸ್ಮಸ್ ಹಬ್ಬಕ್ಕೆ ಮುಖ್ಯ ಅತಿಥಿಗಳಾದ ರೇವರೆಂಡ ವಿಲಸನ್ ಸೊಪ್ಪಡ್ಲ ಮಾತನಾಡಿ " ಯೇಸು ಕ್ರಿಸ್ತರು ಜಗತ್ತಿಗೆ ಶಾಂತಿ ಸಾರಲು ಬಂದರು. ಈ ಸಂದೇಶವನ್ನು ದೂತರು ಕುರುಬರಿಗೆ ತಿಳಿಸಿದರು. ಅದೇ ರೀತಿ ದೇವರು ಎಲ್ಲರಿಗೂ ಶಾಂತಿ ಸಮಾಧಾನ ನೀಡಲಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮುಗಳಿಹಾಳ ಗ್ರಾ. ಪಂ. ಸದಸ್ಯರಾದ ಪದ್ಮಾವತಿ ಗೋ. ಮುರಗಟ್ಟಿ ಯವರು ಮಾತನಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಮುರಗೋಡ ಪಿಎಸ್‌ಐ ಎಲ್ ಬಿ ಮಾಳಿ, ಹವಾಲ್ದಾರ್ ವಿ. ಎಸ್. ಯರಗಟ್ಟಿಮಠ, ಪಿಕೆಪಿಎಸ್ ಉಪಾಧ್ಯಕ್ಷರಾದ ಗೋವಿಂದಪ್ಪ ಮುರಗಟ್ಟಿ, ಸದಸ್ಯರಾದ ಯಲ್ಲಪ್ಪ ಪೂಜೇರಿ, ಆದಿ ಜಾಠವ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ರಾಮವ್ವಾ ಖುರೋಸಿ, ಮಾರುತಿ ಧರ್ಮಟ್ಟಿ, ಯಶವಂತ ಪೂಜೇರಿ, ವಿಠ್ಠಲ ಇಳಿಗೆರ, ಮಾರುತಿ ಕತ್ತಿ, ಯಲ್ಲವ್ವ ಅರಭಾವಿ, ಬಾಳವ್ವ ಹರಿಜನ ಹಾಗೂ ಹಿರಿಯರು, ಸ್ತ್ರೀಯರು, ಮಕ್ಕಳು ಭಾಗವಹಿಸಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ದಿಂದ ಆಚರಿಸಿದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 